







ನಿಡ್ಪಳ್ಳಿ; ನಿಡ್ಪಳ್ಳಿ ಗ್ರಾಮ ಪಂಚಾಯತ್ ನ ಅರಿವು ಕೇಂದ್ರದಲ್ಲಿ ನಡೆಯುತ್ತಿರುವ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಏಳನೇ ದಿನವಾದ ಮೇ.21ರಂದು ಮಕ್ಕಳಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಟ್ಟಂಪಾಡಿಯ ಶಿಕ್ಷಕಿ ಮಮತಾ ಇವರು ಮಗ್ಗಿ ಆಟ, ಒಗ್ಗಟ್ಟಿನಲ್ಲಿ ಬಲವಿದೆ, ಪ್ರಾಣಾಯಾಮ ಹಾಗೂ ಭೌತಿಕ ಚಟುವಟಿಕೆಗಳನ್ನು ನಡೆಸಿದರು. ಗ್ರಂಥ ಪಾಲಕಿ ಪವಿತ್ರ ಜಿ ಸ್ವಾಗತಿಸಿ ವಂದಿಸಿದರು.











