








ಆಲಂಕಾರು: ಸೀಮಾ ದೇವಸ್ಥಾನ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಾ.25 ರಿಂದ ಎ.2ರ ತನಕ ಬ್ರಹ್ಮಕಲಶೋತ್ಸವ ನಂತರ ಜಾತ್ರೋತ್ಸವ ವಿಜೃಂಭಣೆಯಿಂದ ನಡೆದಿದ್ದು, ಕ್ಷೇತ್ರದ ತಂತ್ರಿಗಳಾದ ವೇ.ಮೂ.ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಮೇ.22 ಶುಕ್ರವಾರ ಶ್ರೀ ದೇವಳದಲ್ಲಿ ದೃಢಕಲಶ ಮತ್ತು ಅಭಿನಂದನಾ ಸಭೆ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.



ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ರಾವ್ ನಗ್ರಿಯವರು ಅಭಿನಂದನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನ ಸೀಮಾ ದೇವಸ್ಥಾನವಾಗಿದ್ದು ಭಕ್ತರ ಪಾಲಿನ ಆರಾಧ್ಯ ಕ್ಷೇತ್ರವಾಗಿದೆ. ಊರ ಮತ್ತು ಪರವೂರಿನ ಭಕ್ತಾಧಿಗಳ ಸಹಕಾರದೊಂದಿಗೆ ಸುಂದರವಾದ ದೇಗುಲ ನಿರ್ಮಾಣವಾಗಿದೆ. ಭಕ್ತಾಧಿಗಳು ಸಮರ್ಪಣಾಭಾವದಿಂದ, ರಾಜಕೀಯ ರಹಿತವಾಗಿ ಅಭಿವೃದ್ಧಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿ ಸಹಕರಿಸಿದ ಎಲ್ಲಾ ಇಲಾಖೆಗಳಿಗೆ, ಭಕ್ತಾಧಿಗಳಿಗೆ ಅಭಿನಂದನೆ ಸಲ್ಲಿಸಿದರು.




ನಂತರ ದೇವಸ್ಥಾನದ ಗರ್ಭಗುಡಿ, ನಮಸ್ಕಾರ ಮಂಟಪ,ಧ್ವಜಸ್ತಂಭ,ರಾಜಗೋಪುರ, ,ತೀರ್ಥಭಾವಿ, ಒಳಾಂಗಣ ಕ್ಕೆ ಕಲ್ಲುಹಾಸುವಿಕೆ, ಮಹಾದ್ವಾರದ ಬಾಗಿಲು,ಗರ್ಭಗುಡಿಯ ಬಾಗಿಲಿಗೆ ಬೆಳ್ಳಿ, ಹಿತ್ತಾಲೆ, ಬೆಳ್ಳಿಯ ಉತ್ಸವ ಮೂರ್ತಿ, ಭದ್ರಕಾಳಿ ಪ್ರಭಾವಳಿ, ಪುಷ್ಪರಥ,ಪಲ್ಲಕಿ, ಕಂಪ್ಯೂಟರ್, ಮರದ ಮೇಸ್ರಿಗಳು, ಲೈಟಿಂಗ್, ಪ್ಯಾಭ್ರಿಕೇಶನ್, ಲಾಕರ್ ವ್ಯವಸ್ಥೆ, ತುಳಸಿಕಟ್ಟೆ, ಗ್ರಾನೈಟ್, ಸೇರಿದಂತೆ ಹಲವು ಮಂದಿಗೆ, ವ್ಯವಸ್ಥಾಪನ ಸಮಿತಿ, ಅಭಿವೃದ್ಧಿ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ ,5 ಲಕ್ಷಕಿಂತಲೂ ಅಧಿಕ ಮೊತ್ತದ ದೇಣಿಗೆ ನೀಡಿದವರಿಗೆ, ದೇವಸ್ಥಾನದ ಆರ್ಚಕರಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ,
ಬ್ರಹ್ಮಕಲಶೋತ್ಸವದ ಸ್ವಾಗತ ಸಮಿತಿ, ಅರ್ಥಿಕ ಸಮಿತಿ, ಸಭಾಕಾರ್ಯಕ್ರಮ, ವೈದಿಕ ಸಮಿತಿ, ಕಾರ್ಯಾಲಯ ಸಮಿತಿ, ಮಾಹಿತಿ ಕೇಂದ್ರ ವಿಭಾಗ, ಪ್ರಚಾರ ಸಮಿತಿ, ಆರೋಗ್ಯ ಸಮಿತಿ, ಪತ್ರಿಕಾ ಮಾಧ್ಯಮ ಸಮಿತಿ, ಹೊರೆಕಾಣಿಕೆ ಸಮಿತಿ, ಸಾಂಸ್ಕೃತಿಕ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ನೀರಾವರಿ ಸಮಿತಿ, ಆಲಂಕಾರ ಸಮಿತಿ, ಬೈಲುವಾರು ಸಮಿತಿಗಳ ಅಧ್ಯಕ್ಷರು, ಆಮಂತ್ರಣ ಪತ್ರಿಕೆ ಸಮಿತಿ, ಆಹಾರ ಸಮಿತಿ, ಸ್ವಯಂ ಸೇವಕರ ಸಮಿತಿ, ವೇದಿಕೆ ನಿರ್ಮಾಣ ಸಮಿತಿ, ಸಂತೆ ನಿರ್ವಹಣೆ ಸಮಿತಿ, ಉಗ್ರಾಣ ಸಮಿತಿ, ಮಹಿಳಾ ಸಮಿತಿ, ರಕ್ಷಣಾ ವಿಭಾಗ ಸಮಿತಿ, ಪಾನೀಯ ವ್ಯವಸ್ಥೆ, ಚಪ್ಪರ ಸಮಿತಿ, ಸ್ವಚ್ಚತಾ ಸಮಿತಿ, ವಿದ್ಯುತ್ ಸಮಿತಿ, ಆಸನ ಸಮಿತಿ, ಭಜನಾ ನಿರ್ವಹಣಾ ಸಮಿತಿ, ವಾಹನ ನಿಲುಗಡೆ ಸಮಿತಿಗಳನ್ನು ಮಾಡಿ ಪ್ರತಿ ಸಮಿತಿಗಳಿಗೆ ಪ್ರದಾನ ಸಂಚಾಲಕರು, ಸಂಚಾಲಕರುಗಳಿಗೆ, ಪರಿಚಾರಕ ವರ್ಗ,ದೇವಸ್ಥಾನಕ್ಕೆ ಸಂಬಂಧ ಪಟ್ಟ ಮನೆತನದ ಸೇವಾಕರ್ತರಿಗೆ,ದೈವ ನರ್ತಕರಿಗೆ, ದೈವದ ಪರಿಚಾರಕ ವರ್ಗದವರಿಗೆ ಕ್ಷೇತ್ರದ ವತಿಯಿಂದ ಶಾಲು ಸ್ಮರಣಿಕೆ,ಪ್ರಸಾದ ನೀಡಿ ಗೌರವಿಸಿ ಅವರ ಸೇವೆಗಳನ್ನು ಸಭೆ ಗುಣಗಾನವನ್ನು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಡಾ! ಹೇಮಂತ್ ರೈ ಮನವಳಿಕೆಗುತ್ತು ತಿಳಿಸಿ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನ ಸಮಗ್ರ ಜೀರ್ಣೋದ್ಧಾರ ಕೆಲಸ ಕಾರ್ಯಗಳು ನಡೆಯುವ ಸಂಧರ್ಭದಲ್ಲಿ ಶ್ರೀ ದೇವಿಯೇ ನೆಲೆನಿಂತು ಎಲ್ಲಾ ಕೆಲಸ ಕಾರ್ಯಗಳನ್ನು ಸುಸೂತ್ರವಾಗಿ, ಯಾವೂದೇ ವಿಘ್ನಗಳು ಸಂಭವಿಸದ ರೀತಿಯಲ್ಲಿ ನಡೆಸಿರುವುದೇ ಶರವೂರು ಕ್ಷೇತ್ರದ ಕಾರಣಿಕವಾಗಿದ್ದು, ಬ್ರಹ್ಮಕಲಶೋತ್ಸವ ನಡೆದು ಶ್ರೀ ದೇವಿಯ ರಥೋತ್ಸವದ ಸಮಯದಲ್ಲಿ ದುರ್ಗಾಪರಮೇಶ್ವರಿ ದೇವಿ ರಥವೇರಿದ ಕ್ಷಣಮಾತ್ರದಲ್ಲಿ ಸಣ್ಣ ತುಂತುರು ಮಳೆ ಅಭಿಷೇಕದ ತರ ಚಿಮ್ಮಿರುವುದೇ ಸಮಗ್ರ ಜೀರ್ಣೋದ್ಧಾರದಿಂದ ದುರ್ಗಾಪರಮೇಶ್ವರಿ ಅಮ್ಮನವರು ಸಂತುಷ್ಟರಾಗಿದ್ದಾರೆ ಎನ್ನುವುದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂದು ತಿಳಿಸಿ ಅಭಿವೃದ್ಧಿ ಕೆಲಸ ಕಾರ್ಯಗಳಲ್ಲಿ ಸಹಕರಿಸಿದ ಎಲ್ಲಾ ಭಕ್ತ ಜನತೆಗೆ ಅಭಿನಂದನೆ ಸಲ್ಲಿಸಿದರು.ಬ್ರಹ್ಮಕಲಶೋತ್ಸವ ಸಮಿತಿಯ ಪ್ರದಾನ ಕಾರ್ಯದರ್ಶಿ,ಅಭಿವೃದ್ಧಿ ಸಮಿತಿಯ ಸಹಕಾರ್ಯದರ್ಶಿ ಮುತ್ತಪ್ಪ ಪೂಜಾರಿ ನೈಯ್ಯಲ್ಗ ರವರು ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವದ ಲೆಕ್ಕಾಚಾರವನ್ನು ಸಭೆಗೆ ಮಂಡಿಸಿದರು.

ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷರಾದ ದಾಮೋದರ ಗೌಡ ಕಕ್ವೆ,ಸ್ಮರಣ ಸಂಚಿಕೆ ಸಮಿತಿಯ ಗೌರವ ಸಂಪಾದಕರಾದ ಎ.ಕೃಷ್ಣಪ್ಪ ಪೂಜಾರಿ ಎಣ್ಣೆತ್ತೋಡಿ, ಕಡಬ ಉಪತಹಶೀಲ್ದಾರಾದ ಗೋಪಾಲ.ಕೆ ಯವರು ಸಂದರ್ಬೋಚ್ಚಿತವಾಗಿ ಮಾತನಾಡಿ ದೃಡ ಕಲಶದ ಮಹತ್ವದ ಬಗ್ಗೆ ತಿಳಿಸಿದರು. ವ್ಯವಸ್ಥಾಪನ ಸಮಿತಿಯ ಸದಸ್ಯರಾದ ರಾಧಾಕೃಷ್ಣ ರೈ ಪರಾರಿಗುತ್ತು ಸ್ವಾಗತಿಸಿ,ಅಭಿವೃದ್ಧಿ ಸಮಿತಿ ಸದಸ್ಯ ಸದಾನಂದ ಕುಮಾರ್ ಮಡ್ಯೋಟ್ಟು ಕಾರ್ಯಕ್ರಮ ನಿರೂಪಿಸಿ ವ್ಯವಸ್ಥಾಪನ ಸಮಿತಿ ಸದಸ್ಯರಾದ ಸೇಸಪ್ಪ ಪೂಜಾರಿ ಧನ್ಯವಾದ ಸಮರ್ಪಿಸಿದರು.
ಪವಿತ್ರಪಾಣಿ ಹರೀಶ ಆಚಾರ್ಯ ನಗ್ರಿಗುತ್ತು, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಹರಿಪ್ರಸಾದ ಉಪಾಧ್ಯಾಯ, ವಿಠಲ ರೈ ಪೆರಾಬೆ ಪಟ್ಟೆ,ಮೋಹನ ಎಸ್ ಶರವೂರು, ಪುಷ್ಪಲತಾ ಹಳೆನೇರೆಂಕಿ, ರೋಹಿಣಿ. ಬಿ.ಯನ್ ನಾಡ್ತಿಲ, ವಾಸಪ್ಪ ಗೌಡ ಕೆದ್ದೊಟ್ಟೆ,ಗೌರವ ಸದಸ್ಯರಾದ ದಾಮೋದರ ಗೌಡ ಶರವೂರು, ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ, ರಮೇಶ ಭಟ್ ಉಪ್ಪಂಗಳ, ದಯಾನಂದ ರೈ ಮನವಳಿಕೆಗುತ್ತು, ಈಶ್ವರ ಗೌಡ ಪಜ್ಜಡ್ಕ, ವಿಠಲ ರೈ ಕೊಣಾಲುಗುತ್ತು ವಿಶ್ರಾಂತ ಪ್ರಾಂಶುಪಾಲರು, ಕಾರ್ಯದರ್ಶಿಗಳಾದ ನಿತ್ಯಾನಂದ ಶೆಟ್ಟಿ, ವ್ಯಾಸರಾಜ ಶರವೂರು, ರಾಜಶೇಖರ ಕಿನ್ನಿಗೋಳಿ, ಸುಶಾಂತ ಭಟ್ ಚೈತನ್ಯ, ಉಪಾಧ್ಯಕ್ಷರಾದ ನಾರಾಯಣ ಪೂಜಾರಿ ನಡುಮಣೆ, ನಾರಾಯಣ ಮೂಲ್ಯ ಶರವೂರು, ಬಾಬು ಮೇಸ್ರಿ ನೆಕ್ಕರೆ, ಅಶೋಕ ಕುಮಾರ್ ಎನ್ ನಗ್ರಿ, ಪ್ರಮುಖರಾದ ವಿವೇಕ ಪಡ್ಡಿಲ್ಲಾಯ ಸೇರಿದಂತೆ ವಿವಿಧ ಸಮಿತಿಯ ಅಧ್ಯಕ್ಷರುಗಳು, ಸಂಚಾಲಕರು, ಸಹಸಂಚಾಲಕರು, ಪ್ರಮುಖರು, ಸದಸ್ಯರು,ಊರ ಪರವೂರ ಭಕ್ತಾಧಿಗಳು ದೃಡಕಲಶ ಮತ್ತು ಅಭಿನಂದನಾ ಸಭೆಯಲ್ಲಿ ಉಪಸ್ಥಿತರಿದ್ದರು.










