







ಪುತ್ತೂರು: ಮಾಣಿ ಸಮೀಪ ಮೇ.25ರಂದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.


ಮೃತರನ್ನು ಸುಳ್ಯ ಗಾಂಧಿನಗರ ನಿವಾಸಿ ಮೊಹಿದೀನ್ ಅವರ ಪುತ್ರ ಖಲಂದರ್ ಷಾ ಎಂದು ಗುರುತಿಸಲಾಗಿದೆ. ಅವರು ಕೆಲವು ವರ್ಷಗಳಿಂದ ಪುತ್ತೂರು ಸಂಟ್ಯಾರಿನಲ್ಲಿ ವಾಸವಾಗಿದ್ದರು.ಖಲಂದರ್ ಷಾ ಅವರು ಚಲಾಯಿಸುತ್ತಿದ್ದ ಸ್ಕೂಟಿ ಮೀನಿನ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದರು. ಸ್ಥಳೀಯರು ಕೂಡಲೇ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆತಂದರೂ ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.













