







ಪುತ್ತೂರು: ನೂತನ ಸರಕಾರ ರಚನೆಯಾಗುತ್ತಿರುವ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಡವರ ಮನೆ ಕಟ್ಟುವ ಮರಳು ಸಮಸ್ಯೆಯನ್ನು ಪರಿಹರಿಸಬೇಕು ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಗೌಡ ಕಲ್ಮಂಜ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.


ಜಿಲ್ಲೆಯಲ್ಲಿ ಮರಳು ಹಾಗೂ ಕೆಂಪುಕಲ್ಲು ಸಮಸ್ಯೆಯಿಂದ ಈ ಉದ್ಯಮವನ್ನೇ ನೆಚ್ಚಿಕೊಂಡ ಸಣ್ಣ ಉದ್ಯಮಿಗಳು, ಗುತ್ತಿಗೆದಾರರು ಹಾಗೂ ಮನೆಕಟ್ಟುವ ಬಡ ಮತ್ತು ಮಧ್ಯಮ ವರ್ಗದವರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. 12,000 ರೂ.ಗೆ ಸಿಗುತ್ತಿದ್ದ ಒಂದು ಲೋಡ್ ಮರಳು ಈಗ 20,000 ರೂ.ಗೆ ಏರಿಕೆಯಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಪಂಚಾಯತ್ ಮಟ್ಟದಲ್ಲಿ ಅನುಮತಿ ನೀಡಿ
ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆ ಹಾಗೂ ಕಟ್ಟಡಕ್ಕೆ ಬೇಕಾದ ಮರಳಿಗೆ ಆಯಾ ಪಂಚಾಯತ್‌ನಿಂದಲೇ ಅನುಮತಿ ನೀಡುವ ವ್ಯವಸ್ಥೆ ಮಾಡಬೇಕು. ಒಂದು ಪಿಕಪ್, ಒಂದು ಟಿಪ್ಪರ್‌ಗೆ ಇಂತಿಷ್ಟು ಕಂದಾಯ ಎಂದು ನಿಗದಿ ಮಾಡಿದರೆ ನದಿಯಲ್ಲಿ ಪ್ರಕೃತಿದತ್ತವಾಗಿ ದೊರೆಯುವ ಮರಳಿನಿಂದ ಪಂಚಾಯತ್‌ಗಳಿಗೂ ಆದಾಯ ಬರುತ್ತದೆ. ಇದರಿಂದ ಪಂಚಾಯತ್ ಅಭಿವೃದ್ಧಿಗೆ ಅನುಕೂಲವಾಗುವುದರ ಜೊತೆಗೆ ಜನರಿಗೆ ಅಡೆತಡೆ ಇಲ್ಲದೆ ಮರಳು ಸಿಗುತ್ತದೆ. ಸರಕಾರಕ್ಕೂ ಹೆಚ್ಚುವರಿ ಆದಾಯ ದೊರೆಯುತ್ತದೆ ಎಂದು ಮೋಹನ್ ಗೌಡ ಸಲಹೆ ನೀಡಿದ್ದಾರೆ.



ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಜಿಲ್ಲೆಯ ಬಗ್ಗೆ ಹೆಚ್ಚು ಪ್ರೀತಿ ಇದೆ. ಈ ಬಗ್ಗೆ ಅವರು ಅತ್ಯುತ್ತಮ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ.










