







ಕಾಣಿಯೂರು: ಕೊಪ್ಪ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2026- 27ನೇ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತನ್ನು ಚುನಾವಣೆಯ ಮೂಲಕ ರಚಿಸಲಾಯಿತು. ಶಾಲಾ ನಾಯಕನಾಗಿ ಘನಶ್ಯಾಮ.ಎಸ್. ಡಿ ಗೌಡ 5 ನೇ ತರಗತಿ ಉಪನಾಯಕಿಯಾಗಿ ತನುಶ್ರೀ. ವಿ. ಎಸ್. ಆಯ್ಕೆಯಾದರು. ಗೃಹ ಮಂತ್ರಿಯಾಗಿ ಇಬ್ರಾಹಿಂ ಶಬೀರ್ ಅಲಿ, ಶಿಕ್ಷಣ ಮಂತ್ರಿಯಾಗಿ ಸಂತೃಪ್ತಿ ಎಸ್. ಕೆ., ಅರೋಗ್ಯ ಮಂತ್ರಿಯಾಗಿ ತೃಪ್ತಿ. ಕೆ, ಸಾಂಸ್ಕೃತಿಕ ಮಂತ್ರಿಯಾಗಿ ತನುಶ್ರೀ. ಎಸ್., ಕ್ರೀಡಾ ಮಂತ್ರಿಯಾಗಿ ನಂದೀಶ್ ಎಸ್. ಕೆ, ನೀರಾವರಿ ಮಂತ್ರಿಯಾಗಿ ಧವನ್, ಗ್ರಂಥಾಲಯ ಮಂತ್ರಿಯಾಗಿ ಸಾನಿಕ. ಕೆ. ಎಸ್, ಸಾಹಿತ್ಯ ಮಂತ್ರಿಯಾಗಿ ಕೌಶನಿ ಯವರು ಆಯ್ಕೆಯಾದರು. ನೂತನ ಸಂಸತ್ತಿಗೆ ಆಯ್ಕೆಯಾದ ಮಂತ್ರಿಗಳಿಗೆ ಮುಖ್ಯಗುರುಗಳಾದ ಜ್ಯೋತಿ ದೇವರ ಮನೆ ಯವರು ಪ್ರಮಾಣವಚನ ಬೋದಿಸಿದರು.












