






ಈಶ್ವರ ಮಂಗಲ:ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಪಟೇಲ್. ದಿ .ನೂಜಿಬೈಲು ವಿಠಲ ಶೆಟ್ಟಿ ಅವರ ಸುಪುತ್ರ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಜಸ್ಟೀಸ್ ವಿಶ್ವಜೀತ್ ಶೆಟ್ಟಿ ಅವರು ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.


ಅರ್ಚಕ ರವೀಂದ್ರ ಮಾಣಿಲತ್ತಾಯ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎ ಮಂಜುನಾಥ ರೈ ಸಾಂತ್ಯ, ಕಾರ್ಯ ದರ್ಶಿ ವಿಕ್ರಂ ರೈ ಸಾಂತ್ಯ,ಕೋಶಾಧಿಕಾರಿ ದೀಪಕ್ ಮುಂಡ್ಯ, ಪದಾಧಿಕಾರಿಗಳಾದ ಅಚ್ಯುತ ಮಣಿಯಾಣಿ, ಗಿರೀಶ್ ರೈ ಮರಕ್ಕಡ ಮೊದಲಾದವರು ಉಪಸ್ಥಿತರಿದ್ದರು.













