ಬಡಗನ್ನೂರು ಸ.ಉ.ಹಿ.ಪ್ರಾ.ಶಾಲಾ ಮಂತ್ರಿಮಂಡಲ ರಚನೆ-ನಾಯಕನಾಗಿ ರೋಕ್ಷಿತ್, ಉಪನಾಯಕನಾಗಿ ದಾವೂದ್ ಇಫಾಝ್

0

ಬಡಗನ್ನೂರು: ಬಡಗನ್ನೂರು ಸ.ಉ.ಹಿ.ಪ್ರಾ ಶಾಲೆಯಲ್ಲಿ 2026-27ನೇ ಸಾಲಿನ ಮಂತ್ರಿಮಂಡಲ ರಚಿಸಲಾಯಿತು. ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣಾ ಘೋಷಣೆ ಬಳಿಕ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು. ಅಭ್ಯರ್ಥಿಗಳು ತಮ್ಮ ಗುರುತಿನ ಚಿಹ್ನೆಯೊಂದಿಗೆ ಚುನಾವಣಾ ಪ್ರಚಾರ ನಡೆಸಿದರು. ವಿದ್ಯಾರ್ಥಿಗಳೆಲ್ಲರೂ ಶಾಲಾ ಐಡಿಕಾರ್ಡನ್ನು ಗುರುತಿನ ಚೀಟಿಯಾಗಿ ಬಳಸಿಕೊಂಡು ಮೊಬೈಲ್ ಇವಿಎಂ ಮೂಲಕ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿದರು. ಕೊನೆಯಲ್ಲಿ ಫಲಿತಾಂಶ ಘೋಷಣೆಯ ಮೂಲಕ ಶಾಲಾ ನಾಯಕ, ಉಪನಾಯಕ ಹಾಗೂ ವಿವಿಧ ಮಂತ್ರಿಗಳನ್ನು ಆಯ್ಕೆ ಮಾಡಲಾಯಿತು.

 

ಶಾಲಾ ನಾಯಕನಾಗಿ ರೋಕ್ಷಿತ್ 8 ನೇ ತರಗತಿ, ಉಪನಾಯಕನಾಗಿ ದಾವೂದ್ ಇಫಾಝ್ 7ನೇ ತರಗತಿ ಆಯ್ಕೆಯಾದರು. ಗೃಹಮಂತ್ರಿಯಾಗಿ ಶಯಾಪ್, ಉಪಗೃಹಮಂತ್ರಿಯಾಗಿ ಮುಹಮ್ಮದ್ ರಸ್ವಾನ್,ಶಿಕ್ಷಣ ಮತ್ತು ವಾರ್ತಾ ಮಂತ್ರಿಗಳಾಗಿ ಫಾತಿಮಾ ಫಝೀಲಾ ,ಧೃತಿ, ನೀರಾವರಿ ಮಂತ್ರಿಗಳಾಗಿ ಆದಿತ್ಯ ಎಂ, ಜಿತೇಶ್ ಕುಮಾರ್, ಸಾಂಸ್ಕೃತಿಕ ಮಂತ್ರಿಗಳಾಗಿ ಸಿಂಚನಾ ಎ, ಶ್ರೇಯಾ ಕೆ, ಆರೋಗ್ಯ ಮಂತ್ರಿಗಳಾಗಿ ಜೀವಿತಾ ಕೆ, ಅನನ್ಯ ಬಿ. ವಿ, ಕ್ರೀಡಾಮಂತ್ರಿಗಳಾಗಿ ಮಹಮ್ಮದ್ ಹನಾನ್ , ಮಹಮ್ಮದ್ ರಾಝಿಕ್, ಸ್ವಚ್ಚತಾ ಮಂತ್ರಿಗಳಾಗಿ ಲಾಸ್ಯ ಎಸ್ ಎನ್, ವಂದಿತಾ, ಕೃಷಿ ಮಂತ್ರಿಗಳಾಗಿ ಜನ್ಯತ್ ಕೆ, ಪೂರ್ಣೆಶ್ ಎಂ, ಆಹಾರ ಮಂತ್ರಿಗಳಾಗಿ ಅನ್ಫ ಕೆ, ಝಿಯಾ ಫಾತಿಮಾ , ಶೋಧನಾ ಮಂತ್ರಿಗಳಾಗಿ ತ್ರಿಶಾನ್ ಕೆ.ಜಿ, ತ್ರಿಯಾನ್ ಕೆ.ಜಿ, ಸಭಾಪತಿಯಾಗಿ ಮಹಮ್ಮದ್ ಶಾಮಿಲ್ ಎಂ ಆಯ್ಕೆಯಾದರು. 

ಆಯ್ಕೆಯಾದ ಎಲ್ಲಾ ಮಂತ್ರಿಗಳಿಗೂ ಮುಖ್ಯಗುರುಗಳಾದ ಕುಮಾರ್ ಕೆ. ಜೆ ರವರು ಪ್ರಮಾಣ ವಚನವನ್ನು ಬೋಧಿಸಿದರು. ಪದವೀಧರ ಶಿಕ್ಷಕಿ ವಿಜಯಲಕ್ಷ್ಮಿ ಚುನಾವಣಾ ಮಹತ್ವ ಮತ್ತು ಗೌಪ್ಯತೆ ಬಗ್ಗೆ ತಿಳಿಸಿದರು. ಶಿಕ್ಷಕಿಯರಾದ ಮಧುಶ್ರೀ ಎನ್, ಯಶಸ್ವಿನಿ, ಲಕ್ಷ್ಮೀ, ಸರಿತಾ ಕೆ ಚುನಾವಣಾ ಅಧಿಕಾರಿಗಳಾಗಿ ಸಹಕರಿಸಿದರು.

LEAVE A REPLY

Please enter your comment!
Please enter your name here