ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೋಳಿತ್ತೊಟ್ಟು ಶಾಖೆಯಲ್ಲಿ ರಸಗೊಬ್ಬರ ಮಾರಾಟ ವಿಭಾಗ ಉದ್ಘಾಟನೆ

0

ನೆಲ್ಯಾಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೋಳಿತ್ತೊಟ್ಟು ಶಾಖೆಯಲ್ಲಿ ರಸಗೊಬ್ಬರ ಮಾರಾಟ ವಿಭಾಗದ ಉದ್ಘಾಟನಾ ಕಾರ್ಯಕ್ರಮ ಜೂ.೨೪ರಂದು ಬೆಳಗ್ಗೆ ನಡೆಯಿತು.
ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು ಉದ್ಘಾಟಿಸಿ ಮಾತನಾಡಿ, ಮಹಾಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಈ ಭಾಗದ ಸದಸ್ಯರ ಬೇಡಿಕೆಯಂತೆ ಗೋಳಿತ್ತೊಟ್ಟು ಶಾಖೆಯಲ್ಲಿ ರಾಸಾಯನಿಕ ಗೊಬ್ಬರ ಮಾರಾಟ ವಿಭಾಗ ಆರಂಭಿಸಿದ್ದೇವೆ. ಇಲ್ಲಿ ರಾಸಾಯನಿಕ ಗೊಬ್ಬರದ ಜೊತೆಗೆ ಕೀಟನಾಶಕಗಳೂ ದೊರೆಯಲಿದೆ. ಈ ಭಾಗದ ಸದಸ್ಯರು ಇನ್ನು ಮುಂದೆ ಇಲ್ಲಿಂದಲೇ ರಾಸಾಯನಿಕ ಗೊಬ್ಬರ, ಕೀಟನಾಶಕ ಖರೀದಿಸಬೇಕು. ಇದರಿಂದ ಸಂಘಕ್ಕೂ, ರೈತರಿಗೂ ಲಾಭವಾಗಲಿದೆ ಎಂದು ಹೇಳಿದರು. ಹಿರಿಯ ನಿರ್ದೇಶಕ ಸರ್ವೋತ್ತಮ ಗೌಡ ಮಾತನಾಡಿ, ಮೂರು ಗ್ರಾಮಗಳ ವ್ಯಾಪ್ತಿಯ ಸದಸ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗೋಳಿತ್ತೊಟ್ಟು ಶಾಖೆಯಲ್ಲಿ ರಸಗೊಬ್ಬರ ಮಾರಾಟ ವಿಭಾಗ ಆರಂಭಿಸಲಾಗಿದೆ. ಸದಸ್ಯರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಸಂಘದ ಉಪಾಧ್ಯಕ್ಷ ರವಿಚಂದ್ರ ಹೊಸವಕ್ಲು, ನಿರ್ದೇಶಕರಾದ ಜಿನ್ನಪ್ಪ ಗೌಡ, ಸುಧಾಕರ ಬಿ., ಉಷಾಅಂಚನ್, ಶೇಷಮ್ಮ, ಹರೀಶ್ ಎ., ಬಾಬು ನಾಯ್ಕ್, ಭಾಸ್ಕರ ರೈ, ಮಾಜಿ ಉಪಾಧ್ಯಕ್ಷ ಕಮಲಾಕ್ಷ ಪಂಡಿತ್ ಗೋಳಿತ್ತೊಟ್ಟು, ಮಾಜಿ ನಿರ್ದೇಶಕರಾದ ಪ್ರಶಾಂತ ರೈ ಅರಂತಬೈಲು, ಪ್ರಸಾದ್ ಆರ್ಲ, ನೀಲಪ್ಪ ನಾಯ್ಕ್, ನಿವೃತ್ತ ಸಿಬ್ಬಂದಿ ಪದ್ಮನಾಭ ಶೆಟ್ಟಿ ಮರಂದೆ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಅನಿಲ, ಗೋಳಿತ್ತೊಟ್ಟು ಗ್ರಾ.ಪಂ.ಮಾಜಿ ಅಧ್ಯಕ್ಷ ಪೂವಪ್ಪ ಕರ್ಕೇರ, ಮಾಜಿ ಸದಸ್ಯ ಶಿವಪ್ರಸಾದ್ ಶಿವಾರು, ಗ್ರಾಮಸ್ಥರಾದ ಸುಂದರ ಶೆಟ್ಟಿ ಪುರ, ಐತ್ತಪ್ಪ ಶೆಟ್ಟಿ ಡೆಮ್ಮೆಜಾಲು, ಅಬ್ದುಲ್ಲಾ ಕುಂಞಿ ಕೊಂಕೋಡಿ, ಮನೋಹರ ಜೈನ್ ಆಲಂತಾಯ, ಸದಾನಂದ ಗೌಡ ಡೆಬ್ಬೇಲಿ ಮತ್ತಿತರರು ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಯಂ.ದಯಾಕರ ರೈ ಸ್ವಾಗತಿಸಿ, ನಿರೂಪಿಸಿದರು. ನಿರ್ದೇಶಕ ಜನಾರ್ದನ ಗೌಡ ಬರೆಮೇಲು ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.



ಮರಣ ಸಾಂತ್ವನ ನಿಧಿ ವಿತರಣೆ;
ಸಂಘದ ಸದಸ್ಯರಾಗಿದ್ದು ಇತ್ತೀಚೆಗೆ ಮೃತಪಟ್ಟ ಪುರಂದರ ಗೌಡ, ಪುಷ್ಪಾ ಹಾಗೂ ಚಂದ್ರರಾಜ್ ಶೆಟ್ಟಿ ಅವರ ಮನೆಯವರಿಗೆ ಸಂಘದ ವತಿಯಿಂದ ಈ ಸಂದರ್ಭದಲ್ಲಿ ಮರಣ ಸಾಂತ್ವನ ನಿಧಿ ವಿತರಣೆ ಮಾಡಲಾಯಿತು. ಟಿ.ಎಂ.ಜೋಸೆಫ್ ಅಂಬುಡೇಲು ಅವರು ಸಂಘದಿಂದ ಪ್ರಥಮವಾಗಿ ರಾಸಾಯನಿಕ ಗೊಬ್ಬರ ಖರೀದಿಸಿದರು. ಅವರಿಗೆ ಸಂಘದ ಅಧ್ಯಕ್ಷರು ಗೊಬ್ಬರ ವಿತರಿಸಿದರು.

LEAVE A REPLY

Please enter your comment!
Please enter your name here