ಮುಂಡೂರು ಪ್ರಾಥಮಿಕ ಶಾಲಾ ಮಂತ್ರಿ ಮಂಡಲ ರಚನೆ

0

ಪುತ್ತೂರು: ಮುಂಡೂರು ಸರಕಾರಿ ಉ.ಹಿ.ಪ್ರಾ.ಶಾಲಾ ಮಂತ್ರಿ ಮಂಡಲ ರಚಿಸಲಾಯಿತು. ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು, ನಾಯಕತ್ವ ಗುಣಗಳು ಹಾಗೂ ಜವಾಬ್ದಾರಿಯ ಅರಿವು ಮೂಡಿಸುವ ಉದ್ದೇಶದಿಂದ ಶಾಲಾ ಸಂಸತ್ ಚುನಾವಣೆಯನ್ನು ನಡೆಸಲಾಯಿತು. ಚುನಾವಣಾ ಪ್ರಕ್ರಿಯೆಯು ನಾಮಪತ್ರ ಸಲ್ಲಿಕೆ, ಪ್ರಚಾರ, ಮತದಾನ ಹಾಗೂ ಮತ ಎಣಿಕೆ ಹಂತಗಳ ಮೂಲಕ ಪಾರದರ್ಶಕವಾಗಿ ನಡೆಯಿತು.


ವಿದ್ಯಾರ್ಥಿಗಳು ಉತ್ಸಾಹದಿಂದ ಮತ ಚಲಾಯಿಸಿ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿದರು. ಚುನಾವಣೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮುಖ್ಯ ಶಿಕ್ಷಕಿ ವಿಜಯಾ ಪಿ ಪ್ರಮಾಣ ವಚನ ಬೋಧಿಸಿದರು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಮುಖ್ಯಮಂತ್ರಿಯಾಗಿ 8ನೇ ತರಗತಿಯ ಸಮೀಕ್ಷ ಹಾಗೂ ಉಪಮುಖ್ಯಮಂತ್ರಿಯಾಗಿ 7ನೇ ತರಗತಿಯ ವಿನೀತ್ ಎ ಆಯ್ಕೆಯಾದರು.

ಇತರೆ ಖಾತೆಗಳ ಜವಾಬ್ದಾರಿಗಳನ್ನು ಈ ಕೆಳಗಿನ ವಿದ್ಯಾರ್ಥಿಗಳಿಗೆ ವಹಿಸಲಾಗಿದೆ:
ಶಿಕ್ಷಣ ಮಂತ್ರಿಯಾಗಿ ಫಾತಿಮತ್ ಸನಾ, ಎ.ಎಚ್. ನಮಿತ್ ಕೆ ಎಸ್, ಉಪ ಶಿಕ್ಷಣ ಮಂತ್ರಿ ಮುಹಮ್ಮದ್ ಹಿಶಾಂ, ಸುನೈನ ಎಸ್ ಆರೋಗ್ಯ ಮಂತ್ರಿಯಾಗಿ ಫಾತಿಮತುಲ್ ಸಲ್ವಾ, ಉಪ ಆರೋಗ್ಯ ಮಂತ್ರಿಯಾಗಿ ಬಿಂದು ಎನ್, ಸಾಂಸ್ಕೃತಿಕ ಮಂತ್ರಿಯಾಗಿ ಸಾನ್ವಿ ಆರ್, ಉಪ ಸಾಂಸ್ಕೃತಿಕ ಮಂತ್ರಿಯಾಗಿ ಪ್ರಣವಿ ಎ, ಫಾತಿಮಾತ್ ಅಸ್ನ ಎ ಎಚ್, ತೋಟಗಾರಿಕೆ ಮಂತ್ರಿಯಾಗಿ ರಕ್ಷಿತ್ ಅಂಚನ್, ಉಪ ತೋಟಗಾರಿಕೆ ಮಂತ್ರಿಯಾಗಿ ಹೆಬ್ಬಾಳ ನಾಗಾರ್ಜುನ, ಅಮಿತ್ ಎ, ಕ್ರೀಡಾ ಮಂತ್ರಿಯಾಗಿ ಭವಿತ್ ಕೆ, ಉಪ ಕ್ರೀಡಾ ಮಂತ್ರಿಯಾಗಿ ಲಾವಣ್ಯ, ಹೆರ್ಸನ್ ಪ್ರಿನ್ಸ್ ರೆಬೆಲ್ಲೊ, ಕಾನೂನು ಮಂತ್ರಿಯಾಗಿ ಧನ್ವಿತಾ ಕೆ ಆರ್, ಉಪ ಕಾನೂನು ಮಂತ್ರಿಯಾಗಿ ಪ್ರಜ್ವಲ್ ಕೆ, ಅಮಿತ್ ಎ, ರಕ್ಷಣಾ ಮಂತ್ರಿಯಾಗಿ ರಕ್ಷಿತ್ ಅಂಚನ್, ಉಪ ರಕ್ಷಣಾ ಮಂತ್ರಿಯಾಗಿ ದಿಶಾನ್ ವೈ, ಸ್ವಚ್ಛತಾ ಮಂತ್ರಿಯಾಗಿ ಲತಾಶ್ರೀ, ನಿಕೆತ್ ಬಿ, ಸುಚಿತ್ರ,ಉಪ ಸ್ವಚ್ಛತಾ ಮಂತ್ರಿಯಾಗಿ ವೇದಿಕ, ಸಮೀಕ್ಷಾ ನೀರಾವರಿ ಮಂತಿಯಾಗ್ರಿ ಅನ್ವಿತಾ, ಫಾತಿಮತ್ ಶೈಮಾ, ಉಪ ನೀರಾವರಿ ಮಂತ್ರಿಯಾಗಿ ಗುಣಸಾಗರ್, ವಿದ್ಯಾಶ್ರೀ, ಆಹಾರ ಮಂತ್ರಿಯಾಗಿ ಫಾತಿಮತುಲ್ ಸಲ್ವಾ, ತೃಷಾ, ಉಪ ಆಹಾರ ಮಂತ್ರಿಯಾಗಿ ವೈಭವಿ ಕೆ.ಪಿ, ಗ್ರಂಥಾಲಯ ಮಂತ್ರಿಯಾಗಿ ಫಾತಿಮತ್ ಅಫ್ನ, ಉಪ ಗ್ರಂಥಾಲಯ ಮಂತ್ರಿಯಾಗಿ ಪ್ರಜ್ವಲ್ ಯು ಆಯ್ಕೆಯಾದರು.

LEAVE A REPLY

Please enter your comment!
Please enter your name here