ಉಪ್ಪಿನಂಗಡಿ: ಚಿರತೆ ದಾಳಿ – ಕರು ಸಾವು

0

ಉಪ್ಪಿನಂಗಡಿ: ಚಿರತೆ ದಾಳಿಯಿಂದ ಕರುವೊಂದು ಸಾವನ್ನಪ್ಪಿದ ಘಟನೆ ಇಲ್ಲಿಗೆ ಸಮೀಪದ ಉರುವಾಲು ಗ್ರಾಮದ ಕೊರಿಂಜ ಪೊಯ್ಯ ಪರಿಸರದಲ್ಲಿ ನಡೆದಿದೆ.


ಮಾಜಿ ಗ್ರಾಮ ಪಂಚಾಯತ್ ಸದಸ್ಯೆ ಜಲಜಾಕ್ಷಿ ಎಂಬವರಿಗೆ ಸೇರಿದ ಕರುವಿನ ಮೇಲೆ ಚಿರತೆ ದಾಳಿ ಮಾಡಿದ್ದು, ದಾಳಿಗೆ ಸಿಲುಕಿದ ಕರು ಸತ್ತು ಹೋಗಿರುವುದಾಗಿ ತಿಳಿದು ಬಂದಿದೆ.
ಪರಿಸರದಲ್ಲಿ ಚಿರತೆಯ ಸಂಚಾರ ಗೋಚರಿಸಿದ ಹಿನ್ನೆಲೆಯಲ್ಲಿ ಪರಿಸರದ ಶಾಲಾ ಕಾಲೇಜು ವಿದ್ಯಾರ್ಥಿಗಳು ಸಹಿತ ಸಾರ್ವಜನಿಕರು ಓಡಾಡಲು ಆತಂಕ ಪಡುತ್ತಿದ್ದಾರೆ. ಚಿರತೆ ಪ್ರತ್ಯಕ್ಷವಾಗಿರುವ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ತರಲಾಗಿದ್ದು ಅರಣ್ಯ ಇಲಾಖೆಯಿಂದ ಬೋನು ಅಳವಡಿಸಲಾಗಿದೆ.

LEAVE A REPLY

Please enter your comment!
Please enter your name here