







ಪುತ್ತೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಆ.16ರಂದು ಜರಗಿದ ಮಹಾಸಭೆಯ ಸಂದರ್ಭದಲ್ಲಿ ಮಾಸ್ ಸಂಸ್ಥೆಯಲ್ಲಿ ಅತೀ ಹೆಚ್ಚು ಅಡಿಕೆ ವ್ಯವಹಾರ ಮಾಡಿದ ತಿರುಮಲೇಶ್ವರ ಭಟ್ ಸವಣೂರು, ಅರಿಯಡ್ಕ ಕೃಷ್ಣ ರೈ ಪುಣ್ಚಪ್ಪಾಡಿ ತಳಮನೆ ಹಾಗೂ ಜಯರಾಮ ರೈ ಪರನೀರು, ಸಂಘದಲ್ಲಿ 40 ವರ್ಷ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾದ ಪಕೀರ ಹಾಗೂ 2023- 24 ನೇ ಸಾಲಿನಲ್ಲಿ ಕೃಷಿ ವಿಸ್ತರಣಾ ಸೇವೆಯ ಡಿಪ್ಲೊಮಾ ವಿಷಯದಲ್ಲಿ ಚಿನ್ನದ ಪದಕ ಪುರಸ್ಕೃತರಾದ ಸಂಘದ ಬೆಳಂದೂರು ಶಾಖಾ ವ್ಯವಸ್ಥಾಪಕರಾದ ಲೇಖಾಲತಾ ಮೆದು ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.



ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು, ನಿರ್ದೇಶಕರುಗಳಾದ ಉದಯ ರೈ ಮಾದೋಡಿ, ಚೆನ್ನಪ್ಪ ಗೌಡ ನೂಜಿ, ಅಶ್ವಿನ್ ಎಲ್ ಶೆಟ್ಟಿ, ಪ್ರಕಾಶ್ ರೈಸಾರಕರೆ, ಶಿವಪ್ರಸಾದ್ ಎಂ.ಎಸ್.ಕಳುವಾಜೆ, ಜ್ಞಾನೇಶ್ವರಿ, ಸೀತಾಲಕ್ಷ್ಮೀ, ಗಂಗಾಧರ ಪೆರಿಯಡ್ಕ, ತಿಮ್ಮಪ್ಪ ಬನಾರಿ, ಎಸ್ ಸಿಡಿಸಿಸಿ ಬ್ಯಾಂಕ್ ಇದರ ಸುಪರ್ ವೈಸರ್ ವಸಂತ ಎಸ್, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪಿ, ಉಪ ಕಾರ್ಯನಿರ್ವಹಣಾಧಿಕಾರಿ ಜಲಜಾ ಎಚ್ ರೈ ಹಾಗೂ ಸಿಬ್ಬಂದಿಗಳು, ಮಾಸ್ ಸಂಸ್ಥೆಯ ಸವಣೂರು ಶಾಖಾ ವ್ಯವಸ್ಥಾಪಕ ಚೇತನ್ ಪ್ರಕಾಶ್ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು














