ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ

0

ಪುತ್ತೂರು: ಶ್ರಾವಣ ಮಾಸದ ಶುಕ್ರವಾರ ಹಾಗೂ ವರಮಹಾಲಕ್ಷ್ಮೀ ವ್ರತದ ಪ್ರಯುಕ್ತ ಪುತ್ತೂರಿನ ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲಲಿತಾ ಸಹಸ್ರನಾಮ ಪಠಣದೊಂದಿಗೆ ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು.

ಪ್ರತಿ ತಿಂಗಳ 3ನೇ ಶುಕ್ರವಾರ ನಡೆಯುವ ಈ ವಿಶೇಷ ಪೂಜೆಯಲ್ಲಿ ಸುಮಾರು 80 ಮಂದಿ ಮಾತೆಯರು, ಸಹೋದರಿಯರು ಹಾಗೂ ಕನ್ಯೆಯರು ಭಾಗವಹಿಸಿದ್ದರು.ದೇವಿಗೆ ಬಾಗಿನ ಸಮರ್ಪಿಸಲಾಯಿತು.ದೇವಸ್ಥಾನದ ಅರ್ಚಕ ಉದಯ ಕೃಷ್ಣ ಭಟ್ ಮಾರ್ಗದರ್ಶನದಲ್ಲಿ ಕೃಷ್ಣವೇಣಿ ಪ್ರಸಾದ್ ಮುಳಿಯ ಹಾಗೂ ಪ್ರಭಾವತಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here