







ಬೆಟ್ಟಂಪಾಡಿ: ಇಲ್ಲಿನ ತಲೆಪ್ಪಾಡಿ ಯೋಗೀಶ್ ಮಣಿಯಾಣಿ ರವರು ಡೆತ್ ನೋಟ್ ಬರೆದು ನೇಣು ಬಿಗಿದುಕೊಂಡು ಆತಹತ್ಯೆಗೆ ಶರಣಾದ ಘಟನೆ ಸೆ.3ರಂದು ನಡೆದಿದೆ.


ಮೂಲತಃ ತಲೆಪ್ಪಾಡಿಯವರಾದ ಇವರು ಪ್ರಸ್ತುತ ಕೇರಳದ ಅಡೂರಿನಲ್ಲಿರುವ ಪತ್ನಿ ಮನೆಯಲ್ಲಿ ವಾಸವಿದ್ದರು. ತಲೆಪ್ಪಾಡಿಯ ತೋಟದಲ್ಲಿ ಅವರು ನೇಣು ಬಿಗಿದಿರುವ ಸ್ಥಿತಿಯಲ್ಲಿ ಸೆ.3ರಂದು ಬೆಳಿಗ್ಗೆ ಕಂಡುಬಂದಿದ್ದಾರೆ. ಡೆತ್ ನೋಟ್ ಬರೆದಿಟ್ಟಿರುವುದಾಗಿ ಮಾಹಿತಿ ಬಂದಿದ್ದರೂ, ನಿಖರವಾದ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.



ಮೃತ ಯೋಗೀಶ್ ಮಣಿಯಾಣಿರವರು ಸ್ಥಳೀಯವಾಗಿ ಧಾರ್ಮಿಕ ಮತ್ತು ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು. ಆರ್ಥಿಕವಾಗಿ ವಿಪರೀತ ಸಾಲಬಾಧೆಯೂ ಇತ್ತು ಎನ್ನಲಾಗಿದೆ. ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿರಬಹುದೆಂದು ಮೇಲ್ನೋಟಕ್ಕೆ ಅಂದಾಜಿಸಲಾಗಿದೆ.










