







ಆಲಂಕಾರು: ಬಂಟರಯಾನೆ ನಾಡವರ ಮಾತೃಸಂಘ ಮಂಗಳೂರು ಪುತ್ತೂರು ತಾಲೂಕು ಸಮಿತಿ,ಪುತ್ತೂರು ತಾಲೂಕು ಬಂಟರ ಸಂಘದ ಮಾರ್ಗದರ್ಶನದಲ್ಲಿ ನೆಲ್ಯಾಡಿ ವಲಯ ಬಂಟರ ಸಂಘದ ಸಹಯೋಗದೊಂದಿಗೆ ಆಲಂಕಾರು ವಲಯ ಬಂಟರ ಸಂಘ ಇದರ ಆಶ್ರಯದಲ್ಲಿ ಸೆ.20 ರಂದು ಪೆರಾಬೆ ಗ್ರಾಮದ ಮನವಳಿಕೆಗುತ್ತುವಿನ ಕಂಬಳಗದ್ದೆಯಲ್ಲಿ ಬಂಟೆರೆ ಕೆಸರ್ ಡೊಂಜಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಮನವಳಿಕೆಯ ಕಂಬಳ ಗದ್ದೆಯ ಮುಂಭಾಗದಲ್ಲಿರುವ ಮನವಳಿಕೆ ಗುತ್ತು ಸಭಾಭವನದಲ್ಲಿ ನಡೆಯಿತು.
ಪುತ್ತೂರ ತಾಲೂಕು ಬಂಟರ ಸಂಘದ ಅಧ್ಯಕ್ಷ ರಾದ ಕಾವು ಹೇಮನಾಥ ಶೆಟ್ಟಿ ಯವರು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ ಮನವಳಿಕೆಗುತ್ತು ಕಂಬಳಗದ್ದೆಯಲ್ಲಿ ಕೆಸರ್ ಡೊಂಜಿ ಕುಸಲ್ ಕಾರ್ಯಕ್ರಮ ಆಯೋಜನೆ ಮಾಡಿದ್ದು ನಮಗೆ ಬಹಳ ಸಂತೋಷ ತಂದಿದೆ.ದೈವ ದೇವರ ಪ್ರೇರಪಣೆಯಂತೆ ಸಣ್ಣ ಮಟ್ಟದಲ್ಲಿ ಆಯೋಜನೆಯಾದ ಈ ಕಾರ್ಯಕ್ರಮ ಇದೀಗ ದೊಡ್ಡಮಟ್ಟದಲ್ಲಿ ಆಯೋಜನೆಗೊಂಡಿದೆ ಇದಕ್ಕೆ ತಾಲೂಕಿನ ಎಲ್ಲಾ ಬಂಟ ಬಾಂಧವರು ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೆ ತಿಳಿಸಿ ಪುತ್ತೂರು ತಾಲ್ಲೂಕು ಬಂಟರ ಸಂಘದ ವತಿಯಿಂದ ಕಾರ್ಯಕ್ರಮಕ್ಕೆ 50,000 ಧನ ಸಹಾಯ ನೀಡುವುದಾಗಿ ತಿಳಿಸಿದರು.
ಪುತ್ತೂರು ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷರು ಕಾರ್ಯಕ್ರಮದ ಗೌರವಾಧ್ಯಕ್ಷರಾದ ದಯಾನಂದ ರೈ ಮನವಳಿಕೆಗುತ್ತು ರವರು ಮಾತನಾಡಿ ಬಂಟೆರೆ ಕೆಸರ್ ಡೊಂಜಿ ಕುಸಲ್ ಕಾರ್ಯಕ್ರಮದಲ್ಲಿ ಎಲ್ಲಾ ವಲಯದ ಬಂಟ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೆ ತಿಳಿಸಿ ಮೊನ್ನೆಯಿಂದ ನಮ್ಮ ಭಾಗದ ಯುವಕರು ಕೆಸರ್ ಡೊಂಜಿ ಕಾರ್ಯಕ್ರಮದ ಯಶಸ್ವಿಗೆ ಹಗಲು ರಾತ್ರಿ ಶ್ರಮಿಸುತ್ತಿದ್ದು, ಆಮಂತ್ರಣ ಪತ್ರಿಕೆಯನ್ನು ಪ್ರತಿಯೊಬ್ಬರೂ ಎಲ್ಲಾರಿಗೆ ತಲುಪಿಸುವಂತೆ ತಿಳಿಸಿದರು.
ಕ್ರೀಡಾಕೂಟದ ತೀರ್ಪುಗಾರರಾದ ದಯಾನಂದ ರೈ ಕೋರ್ಮಂಡ ಕೆಸರ್ ದ ಗೊಬ್ಬುದ ಬಗ್ಗೆ ಮಾಹಿತಿ ಹಾಗೂ ಅದರ ರೂಪುರೇಷೆಯ ಬಗ್ಗೆ ತಿಳಿಸಿದರು. ಆಲಂಕಾರು ವಲಯ ಬಂಟರ ಸಂಘದ ಅಧ್ಯಕ್ಷರಾದ ಪ್ರಶಾಂತ ರೈ ಮನವಳಿಕೆ ಸಭೆ ಅಧ್ಯಕ್ಷತೆ ವಹಿಸಿದ್ದರು.ಆಲಂಕಾರು ವಲಯ ಬಂಟರ ಸಂಘದ ಕಾರ್ಯದರ್ಶಿ ಲೋಕನಾಥ ರೈ ಕೇಲ್ಕ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.
ನಿರ್ದೇಶಕಿ ಸುಜಾತ ಜಯರಾಮ ಶೆಟ್ಟಿ ಪ್ರಾರ್ಥಿಸಿ ಬಂಟೆರೆ ಕೆಸರ್ ಡೊಂಜಿ ಕುಸಲ್ ಕಾರ್ಯಕ್ರಮದ ಕಾರ್ಯದರ್ಶಿ ಅಜಿತ್ ರೈ ಮನವಳಿಕೆ ಧನ್ಯವಾದ ಸಮರ್ಪಿಸಿದರು.ಪುತ್ತೂರು ತಾಲೂಕು ಬಂಟರ ಸಂಘದ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ,ಉಪಾಧ್ಯಕ್ಷರಾದ ಸುಭಾಸ್ ಕುಮಾರ್ ಶೆಟ್ಟಿ ಆರುವಾರ,ಆಲಂಕಾರು ವಲಯ ಬಂಟರ ಸಂಘದ ಉಪಾಧ್ಯಕ್ಷರಾದ ವಿಶ್ವನಾಥ ರೈ ಇರಿಂಟಾಡಿ,ರಾಧಾಕೃಷ್ಣ ರೈ ಪರಾರಿಗುತ್ತು, ಕೋಶಾಧಿಕಾರಿ ಮಮತಾ ಕಮಲಾಕ್ಷ ಶೆಟ್ಟಿ ಅಂಬರಾಜೆ,ಸಂಘಟನಾ ಕಾರ್ಯದರ್ಶಿ ಮೋಹನದಾಸ ಶೆಟ್ಟಿ ಬಡಿಲ,ಬಂಟೆರೆ ಕೆಸರ್ ಡೊಂಜಿ ಕಾರ್ಯಕ್ರಮದ ಸಂಚಾಲಕರಾದ ಮೋಹನದಾಸ ರೈ ಪರಾರಿಗುತ್ತು ಸೇರಿದಂತೆ ಪುತ್ತೂರು ತಾಲೂಕು ಬಂಟರ,ಆಲಂಕಾರು, ನೆಲ್ಯಾಡಿ ವಲಯ ಬಂಟರ ಸಂಘದ ಪದಾಧಿಕಾರಿಗಳು, ನಿರ್ದೆಶಕರು ,ಸದಸ್ಯರು ಉಪಸ್ಥಿತರಿದ್ದರು.












