ಶ್ರೀರಾಮ ಮಂದಿರ, ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ
ಶ್ರೀ ಕ್ಷೇತ್ರ ಸನ್ಯಾಸಿ ಗುಡ್ಡೆಯು ಸನ್ಯಾಸಿಗಳು ನಡೆದಾಡಿದ ಸಾಧನೆ ಮಾಡಿದ ಪುಣ್ಯ ಕ್ಷೇತ್ರವಾಗಿದೆ. ಸನಾತನ ಸಂಸ್ಕೃತಿಯ ಪ್ರತೀಕವಾಗಿ ಸನ್ಯಾಸಿ ಗಳು ನೆಲೆಸಿದ ಸನ್ಯಾಸಿ ಗುಡ್ಡೆಯ ಎರಡು ‘ಗುಹೆ’ಗಳನ್ನು ಕಾಣಬಹುದು. ಸುಮಾರು ೧೦ ಜನ ಒಳಗೆ ಕುಳಿತು ಧ್ಯಾನ ಮಾಡಬಹುದಾದ ಗುಹೆಗಳಿವೆ. ಕೆಮ್ಮಟೆ ಮಣ್ಣನ್ನು ಹೊಂದಿರುವ ಸನ್ಯಾಸಿಗುಡ್ಡೆಯ ಮಣ್ಣು ಕೂಡಾ ಪವಿತ್ರವಾಗಿದೆ. ೧೯೯೨ರ ಡಿಸೆಂಬರ್ ೩೦ರಂದು ಉದ್ಘಾಟನೆಗೊಂಡ ಶ್ರೀರಾಮ ಮಂದಿರದಲ್ಲಿ ಪ್ರತಿ ವರ್ಷ ಪ್ರತಿಷ್ಠಾ ಮಂಗಳೋತ್ಸವ ನಡೆಯುತ್ತದೆ. ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ವಿಶ್ರಾಂತಿ ಕೊಠಡಿ, ಭೋಜನ ಶಾಲೆ, ಸಭಾಂಗಣವನ್ನು ಹೊಂದಿದೆ. ಪಾಕಶಾಲೆಯೂ ಇದೆ. ಕಡಮಜಲು ಸುಭಾಸ್ ರೈ – ಅಧ್ಯಕ್ಷರು (೯೪೪೯೧೦೬೯೩೧)
ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು :- * ಮಿತ್ರಂಪಾಡಿ ಪಂಜುರ್ಲಿ ದೈವಸ್ಥಾನ * ಶ್ರೀ ರಾಮ ಮಂದಿರ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ ಟಕೆದಂಬಾಡಿ ಬೀಡು ದೈವಸ್ಥಾನ * ಶ್ರೀ ದೇವತಾ ಭಜನಾ ಮಂದಿರ ತಿಂಗಳಾಡಿ * ಶ್ರೀ ದೇವತಾ ಭಜನಾ ಮಂದಿರ ಶ್ರೀ ಕ್ಷೇತ್ರ ದೇವಗಿರಿ ತಿಂಗಳಾಡಿ * ಶ್ರೀ ಶಿರಾಡಿ ದೈವ ಶಿರಾಡಿ ನಗರ ಕೆದಂಬಾಡಿ.
ಕೆದಂಬಾಡಿ ಬೀಡು ಪಟ್ಟದ ಚಾವಡಿ, ಅಂಚೆ : ಕೆದಂಬಾಡಿ, ಪುತ್ತೂರು, ದ.ಕ.
ಕೆದಂಬಾಡಿ ಬೀಡು ಪಟ್ಟದ ಚಾವಡಿಯಲ್ಲಿ ಧರ್ಮದೈವ ನೆಲೆ ಯಾಗಿದ್ದು, ಅನಾದಿ ಕಾಲದಿಂದ ತಳಮನೆ ಸಂಸಾರ, ಕೆದಂಬಾಡಿ ಗ್ರಾಮದ ೧೮ ವರ್ಗ ಮನೆತನ ದವರು, ಊರವರು ನಂಬಿ ಕೊಂಡು ಬರುತ್ತಿದ್ದಾರೆ. ಪಟ್ಟದ ಚಾವಡಿಯಲ್ಲಿ ನಡೆಯುತ್ತಿರುವ ನೇಮ ನಡಾವಳಿಗಳು ಪ್ರಕೃತ ಯಥೋಚಿತವಾಗಿ ನಡೆಯುತ್ತಿದ್ದು, ಪೂರ್ವ ಸಂಪ್ರದಾಯದಂತೆ ಮೂರು ಮುಡಿ ಗದ್ದೆಗೆ ದೀಪೋತ್ಸವ, ಅರಿಯಡ್ಕ ಬೀಡಿನಿಂದ ‘ಎರುಮಾನಿ’ ವಿಜೃಂಭಣೆಯಿಂದ ಬರುವುದು, ಎಳೆಯುವ ಬಂಡಿಯಲ್ಲಿ ಗದ್ದೆಗೆ ಪೂಕರೆ ಹಾಕುವುದು, ನೇಮ ನಡಾವಳಿ, ‘ಕೆದಂಬಾಡಿ ಗ್ರಾಮ ಜಾತ್ರೆಯು ಊರ ಪರವೂರವರ ಭಾಗವಹಿಸುವಿಕೆಯಿಂದ ನಡೆಯುತ್ತಿದೆ.
೧೯೪೯ರಲ್ಲಿ ಕೆದಂಬಾಡಿ ಬೀಡು ಅಬ್ಬಯ್ಯ ಬಲ್ಲಾಳರಿಂದ ಪುನರ್ ನಿರ್ಮಿತವಾದ ಕೆದಂಬಾಡಿ ಬೀಡು ಪಟ್ಟದ ಚಾವಡಿಯ ಬಗ್ಗೆ ಸ್ಥಳಪ್ರಶ್ನೆ-ಚಿಂತನೆ ನಡೆಸಲಾಗಿ ಪ್ರಶ್ನೆಯಲ್ಲಿ ಕಂಡುಬಂದಂತೆ ಜೀರ್ಣೋದ್ಧಾರ ನಡೆಸಿ ಮೇ ೨೧, ೨೦೧೪ರಂದು ಬ್ರಹ್ಮಕಲಶ ನಡೆದಿರುತ್ತದೆ.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಕಡಮಜಲು ಸುಭಾಸ್ ರೈ, ಬೆಟ್ಟಂಪಾಡಿಬೀಡು ಜಗದೀಶ ಬಲ್ಲಾಳ್ (ಆನುವಂಶಿಕ ಆಡಳಿತ ಮೊಕ್ತೇಸರರು), ಮುಂಡಾಳಗುತ್ತು ಮನೋಹರ ರೈ (ಪ್ರಧಾನ ಕಾರ್ಯದರ್ಶಿ), ಕೆದಂಬಾಡಿ ಬೀಡು ಭಾಸ್ಕರ ಬಲ್ಲಾಳ್ (ಕೋಶಾಧಿಕಾರಿ) ಸೇವೆ ಸಲ್ಲಿಸಿದ್ದಾರೆ.