





ಪುತ್ತೂರು: ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಪೂರ್ಣಾನಂದ ಸೇವಾ ಪ್ರತಿಷ್ಠಾನ, ಶ್ರೀಗುರು ಪೂರ್ಣಾನಂದ ಭಜನಾ ಮಂದಿರ ಪುರುಷರಕಟ್ಟೆ, ದ.ಕ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘ, ಲಯನ್ಸ್ ಕ್ಲಬ್ ಪುತ್ತೂರ‍್ದ ಮುತ್ತು ಇವುಗಳ ಸಂಯುಕ್ತ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಷಣಾ ಶಿಬಿರವು ಅ.26ರಂದು ಪುರುಷರಕಟ್ಟೆಯಲ್ಲಿರುವನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ರೈತ ಸಭಾಂಗಣದಲ್ಲಿ ನಡೆಯಿತು.



ಆರೋಗ್ಯ ಶಿಬಿರವನ್ನು ಡಾ. ಪ್ರಸಾದಿನಿ ಆಯುರ್ ಕೇರ್‌ನ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ, ಪುರುಷರಕಟ್ಟೆ ಆತ್ರೇಯ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್‌ನ ಡಾ. ಸುಜಯ ತಂತ್ರಿ, ಡಾ. ಬಾಲಸುಬ್ರಹ್ಮಣ್ಯರವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಡಾ. ರಾಘವೇಂದ್ರ ಪ್ರಸಾದ್ ಮಾತನಾಡಿ, ಮೌಲ್ಯಯುತ ಮಾದರಿ ಜೀವನ ನಡೆಸಲು ನಾವು ನಮ್ಮ ಶರೀರವನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳುವುದು ಮುಖ್ಯ. ಇಂತಹ ಮಾಹಿತಿ, ಜಾಗೃತಿ ಹಾಗೂ ಅರಿವನ್ನು ಮೂಡಿಸುವಂತಹ ವೈದ್ಯಕೀಯ ಶಿಬಿರಗಳು ಊರಿನಲ್ಲಿ ವರ್ಷಕ್ಕೆ ಎರಡು ಬಾರಿಯಾದರೂ ನಡೆಯುತ್ತಿರಬೇಕು ಎಂದರು.
ಡಾ. ಶಿವಪ್ರಕಾಶ್ ಮಾತನಾಡಿ ಇತ್ತೀಚಿಗಿನ ದಿನಗಳಲ್ಲಿ ವಯೋಮಿತಿ ಇಲ್ಲದೆ ಅಕಾಲಿಕ ಸಾವು-ನೋವುಗಳು ನಡೆಯುತ್ತಿರುವುದು ವಿಪರ್ಯಾಸ. ಏನೇ ಇದ್ದರೂ ನಮ್ಮ ನಮ್ಮ ಜವಾಬ್ದಾರಿಗಳನ್ನು ಅರಿತು ಆರೋಗ್ಯದತ್ತ ಗಮನಹರಿಸಬೇಕು. ಯಾವುದೇ ಸಂದರ್ಭದಲ್ಲಿಯೂ ಆರೋಗ್ಯದ ಬಗ್ಗೆ ನಿರ್ಲಕ್ಷ ತೋರಬಾರದು. ನುರಿತ ತಜ್ಞ ವೈದ್ಯರ ಸಲಹೆ ಸೂಚನೆಗಳನ್ನು ಪಡೆಯಬೇಕು ಎಂದರು.
ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಸಂಚಾಲಕ ಡಿ. ರಮೇಶ ನಾಯಕ್ ಮೈರಾ ಮಾತನಾಡಿ, ಮನುಷ್ಯನ ಸಾಧನೆಗಳಿಗೆ ಶರೀರವೇ ದೇಗುಲ. ಆರೋಗ್ಯವೇ ಆಧಾರ ಸ್ತಂಭಗಳು. ಹೀಗಾಗಿ ಆರೋಗ್ಯವನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಪುರುಷರಕಟ್ಟೆಯಲ್ಲಿ 27 ಸಂಘ ಸಂಸ್ಥೆಗಳು ಜಾತಿ, ಧರ್ಮ ಮತ್ತು ಪಕ್ಷ ಎಲ್ಲವನ್ನು ಬಿಟ್ಟು ಏಕತೆಯಿಂದ ಜನರ ಆರೋಗ್ಯ ರಕ್ಷಣೆಗೆ ಸಹಕಾರ ನೀಡುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ ಎಂದರು.





ಅಧ್ಯಕ್ಷತೆ ವಹಿಸಿದ್ದ ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನವೀನ್ ಡಿ. ಮಾತನಾಡಿ, ಸಮಾಜ ತನಗೇನು ನೀಡಿದೆ ಎನ್ನುವುದಕ್ಕಿಂತ ಸಮಾಜಕ್ಕೆ ತಾನೇನು ನೀಡಲು ಸಾಧ್ಯ ಎಂಬುದು ಸಜ್ಜನ ಸಮಾಜದ ನಾಗರೀಕರಲ್ಲಿ ಸದಾ ಜಾಗೃತವಾಗಿರಬೇಕು. ಮಾನವೀಯತೆಗೆ ಮಾದರಿಯಾಗಿ ಆರೋಗ್ಯ ಶಿಬಿರ ನಡೆಯುತ್ತಿದೆ. ಸಮಾಜದ ಎಲ್ಲರೂ ಆರೋಗ್ಯವಂತರಾಗಿ ಇರಬೇಕು ಎಂಬುದು ನಮ್ಮ ಆಶಯವಾಗಿದ್ದು, ಶಿಬಿರದ ಯಶಸ್ಸಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.
ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷೆ ಪವಿತ್ರಾ ಕೆ. ಪಿ. ನಿರ್ದೇಶಕರಾದ ಬಾಬು ಶೆಟ್ಟಿ ವೀರಮಂಗಲ, ವಿಶ್ವನಾಥ ಬಲ್ಯಾಯ ಎಂ, ನಮಿತಾ ನ್ಯಾಕ್, ದೇವಪ್ಪ ಗೌಡ ಓಲಾಡಿ, ದೇವಪ್ಪ ಪಿ, ಚಂದ್ರ ಎಂ. ಬಿ. ಶಿವಪ್ರಸಾದ್ ನಾಯ್ಕ, ಸಂಘದ ಸಿಬ್ಬಂದಿಗಳು, ಲಯನ್ಸ್ ಕ್ಲಬ್ ಅಧ್ಯಕ್ಷೆ ವೇದಾವತಿ, ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಮುರಳೀಧರ ಪ್ರಭು, ಡಾ. ವಿಜಯಲಕ್ಷ್ಮಿ ನಾಯಕ್, ರವೀಂದ್ರ ನಾಯಕ್, ವಿಜಯ ಶೆಣೈ ಕೊಡಂಗೆ, ದ.ಕ.ಜಿಲ್ಲಾ ಕುಡಾಳ್ ದೇಶಸ್ಥ ಆಧ್ಯ ಗೌಡ್ ಬ್ರಾಹ್ಮಣ’ ಸಂಘದ ಸುರೇಂದ್ರ ನಾಯಕ್, ಉಮೇಶ ನಾಯಕ್, ಡಾ. ಸುಶ್ಮಿತಾ ನಾಯಕ್, ಡಾ. ಬಾಲಸುಬ್ರಮಣ್ಣ ಭಟ್. ಪೃಥ್ವಿರಾಜ ನಾಯಕ್, ಡಾ. ಸುಜಯ ತಂತ್ರಿ ಗಣೇಶ್ ಪ್ರಭು ಕಲ್ಕಾರ್, ಮಹೇಶ್ ಪ್ರಭು ಮಣಿಯ, ಲಕ್ಷ್ಮೀಶ ಪ್ರಭು ಕಲ್ಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿರ್ದೇಶಕರಾದ ಜಯರಾಮ ಪೂಜಾರಿ ಒತ್ತೆಮುಂಡೂರು ಸ್ವಾಗತಿಸಿದರು. ವಿಶ್ವನಾಥ ಬಲ್ಯಾಯ ವಂದಿಸಿದರು. ಸತೀಶ್ ಪ್ರಭು ಮಣಿಯ ಕಾರ್ಯಕ್ರಮ ನಿರೂಪಿಸಿದರು.
ಈ ಶಿಬಿರದಲ್ಲಿ ಸಾಮಾನ್ಯ ರೋಗ, ಎಲುಬು ಮತ್ತು ಕೀಲು ರೋಗ, ಕಿವಿ-ಮೂಗು-ಗಂಟಲು, ಕ್ಯಾನ್ಸರ್, ಕಣ್ಣು, ಹೃದಯ, ಸ್ತ್ರೀರೋಗ, ರಕ್ತದ ಒತ್ತಡ ಹಾಗೂ ಮಧುಮೇಹ ತಪಾಸಣೆ ಸೇರಿದಂತೆ ಹನ್ನೆರಡು ವಿಭಾಗಗಳಲ್ಲಿ ಪರಿಣಿತ ವೈದ್ಯರಿಂದ ತಪಾಸಣೆ ನಡೆಸಲಾಯಿತು. ಶಿಬಿರದಲ್ಲಿ ಭಾಗವಹಿಸಿದವರಿಗೆ ಉಚಿತ ಔಷಧಿ ವಿತರಣೆ, ಅಗತ್ಯವಿದ್ದವರಿಗೆ ಇಸಿಜಿ ತಪಾಸಣೆಯ ವ್ಯವಸ್ಥೆಯೂ ಕಲ್ಪಿಸಲಾಗಿತ್ತು. ಲಯನ್ಸ್ ಕ್ಲಬ್ ಪುತ್ತೂರುದ ಮುತ್ತು ಇವರಿಂದ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು. ರಕ್ತದಾನ ಶಿಬಿರದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನವೀನ್ ಡಿ. ನಿರ್ದೇಶಕ ಶಿವಪ್ರಸಾದ್ ನಾಯ್ಕ ಬಿ, ಸಂಘದ ಸಿಬ್ಬಂದಿ ರೋಹಿತ್ ಪಿ ಹಾಗೂ ಪಿಗ್ಗಿ ಸಂಗ್ರಾಹಕ ಗಣೇಶ್ ಕೈಂದಾಡಿ ಸೇರಿದಂತೆ ಹಲವು ಯುವಕರು ಹಾಗೂ ಮಹಿಳೆಯರು ರಕ್ತದಾನ ಮಾಡಿದರು. ಕೆಎಂಸಿ ಆಸ್ಪತ್ರೆಯ ನುರಿತ ತಜ್ಞ ವೈದ್ಯರು ಶಿಬಿರದಲ್ಲಿ ವೈದ್ಯಕೀಯ ಸೇವೆ ನೀಡಿದರು. ತಪಾಸಣೆಗೆ ಹಾಜರಾದವರಿಗೆ ಕೆಎಂಸಿ ಆಸ್ಪತ್ರೆಯ ವಿಶೇಷ ಚಿಕಿತ್ಸಾ ರಿಯಾಯಿತಿ ಯೋಜನೆಗಳ ಕಾರ್ಡುಗಳನ್ನು ವಿತರಿಸಿ ಮಾಹಿತಿ ನೀಡಲಾಯಿತು.

ಸುಮಾರು ಗ್ರಾಮ ಪಂಚಾಯತ್ ನರಿಮೊಗರು, ಪ್ರಾಥಮಿಕ ಆರೋಗ್ಯ ಕೇಂದ್ರ ಸರ್ವೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್, ಕೆಮ್ಮಿಂಜೆ ವಲಯ, ಶ್ರೀ ದುರ್ಗಾ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ, ನರಿಮೊಗರು, ನರಿಮೊಗರು ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳು ಮತ್ತು ಎಲ್ಲಾ ಅಂಗನವಾಡಿ ಕೇಂದ್ರಗಳು, ಒಡಿಯೂರು ಗ್ರಾಮವಿಕಾಸ ಯೋಜನೆ ಘಟಕ ಸಮಿತಿ ನರಿಮೊಗರು. ಯುವಕ ಮಂಡಲ ನರಿಮೊಗರು, ವಿಕ್ರಂ ಯುವಕ ಮಂಡಲ ಶಾಂತಿಗೋಡು, ನೇತಾಜಿ ಯುವಕ ಮಂಡಲ ಕೂಡುರಸ್ತೆ, ಶ್ರೀ ವಿಷ್ಣು ಯುವಕ ಮಂಡಲ ಅನಡ್ಕ, ಅರಿವು ಕೇಂದ್ರ ನರಿಮೊಗರು ಗ್ರಾಮ ಪಂಚಾಯತ್, ನವಶಕ್ತಿ ಸ್ಪೋರ್ಟ್ಸ್ & ಆರ್ಟ್ಸ್ ಕ್ಲಬ್ ಕಲ್ಕಾರ್ ಮುಂಡೋಡಿ, ಶ್ರೀ ಮಹಾವಿಷ್ಣು ಸೇವಾ ಪ್ರತಿಷ್ಠಾನ ಆನಾಜೆ ವೀರಮಂಗಲ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಪುರುಷರಕಟ್ಟೆ, ಫ್ರೆಂಡ್ಸ್ ಮಣಿಯ, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ನರಿಮೊಗರು ವಲಯ, ಬಿ.ಎಂ.ಎಸ್ ಆಟೋ ರಿಕ್ಷಾ ಚಾಲಕ ಮಾಲಕರ ಸಂಘ ಪುರುಷರಕಟ್ಟೆ ಘಟಕ, ಶ್ರೀ ಶಾರದಾಂಬ ಭಜನಾ ಮಂದಿರ ಸೇರಾಜೆ, ಬಜಪ್ಪಲ ಗಣಪತಿ ಶೆಣೈ ಅಭಿಮಾನಿ ಬಳಗ ನರಿಮೊಗರು ಸಂಘ ಸಂಸ್ಥೆಗಳು ಶಿಬಿರದಲ್ಲಿ ಸಹಕರಿಸಿದರು.






