ಕೊಣಾಲು ಗ್ರಾಮ

ಶ್ರೀ ವಿಷ್ಣುಮೂರ್ತಿ ದೇವಸ್ಥಾನ ತಿರ್ಲೆ ಕೊಣಾಲು ಅಂಚೆ, ಪುತ್ತೂರು – 574 229. ಮೊ: 9740170721

ದಕ್ಷಿಣ ಕನ್ನಡ ಬೆಂಗಳೂರು-ಮಂಗಳೂರು, ರಾಷ್ಟ್ರೀಯ ಹೆದ್ದಾರಿ ೭೫ರ ಗೋಳಿತ್ತೊಟ್ಟು-ಗೋಳಿತೊಟ್ಟು ಎಂಬಲ್ಲಿ ಬಲ ಭಾಗಕ್ಕೆ ಆಲಂತಾಯಕ್ಕೆ ಹೋಗುವ ರಸ್ತೆಯಲ್ಲಿ ಸುಮಾರು ಒಂದು ಕಿ.ಮೀ. ದೂರದಲ್ಲಿ ಕೊಣಾಲು ಗ್ರಾಮದ ತಿರ್ಲೆ ಎಂಬ ಪುಣ್ಯ ಸ್ಥಳವಿದೆ. ಇಲ್ಲಿ ಮಹಾವಿಷ್ಣು ದೇವಾಲಯವಿದೆ. ಮಹಾವಿಷ್ಣು ಇಲ್ಲಿ ಸಾನಿಧ್ಯ ಮೂರ್ತಿಯಾಗಿದ್ದಾನೆ. ಪಕ್ಕದಲ್ಲಿಯೇ ಗ್ರಾಮ ದೇವತೆಯಾದ ಕೊಣಾಲು ದೇವತೆಯ ಗುಡಿಯಿದೆ. ಗರ್ಭಗುಡಿಯ ಎಡ ಭಾಗ
ಅಂದರೆ ನಮಸ್ಕಾರ ಮಂಟಪದ ಪಕ್ಕದಲ್ಲಿ ಬಹು ಪುರಾತನವಾದ ಅಶ್ವತ್ಥ ಮರವೊಂದು ಬೆಳೆದು ದೇವಾಲಯದ ಅರ್ಧ ಭಾಗವನ್ನು ಹರಡಿ ನಿಂತಿದೆ. ಪ್ರಳಯ ನಂತರ ಕ್ಷೀರ ಸಾಗರ ಶಯನನಾಗಿ ಆಲದ ಎಲೆಯ ಮೇಲೆ ಮಲಗಿದ ಬಾಲ ಮುಕುಂದನನ್ನು ಕಾಯುವುದಕ್ಕಾಗಿ ಆವಿರ್ಭವಿಸಿದ ದೇವತೆಯೇ ಕೊಣಾಲು ದೇವತೆ. ಈ ದೇವತೆ ನೆಲೆಗೊಂಡ ಈ ಗ್ರಾಮಕ್ಕೆ ಕೊಣಾಲು ಗ್ರಾಮವೆಂದೇ ಹೆಸರಾಗಿದೆ.
ರಂಗಪೂಜೆ ಇಲ್ಲಿಯ ವಿಶೇಷ ಸೇವೆಯಾಗಿದ್ದು, ದೇವತೆಗೆ ತಂಬಿಲ ಸೇವೆಯೂ
ನಡೆಯುತ್ತದೆ. ಶ್ರೀವಿಷ್ಣುವಿಗೆ ಸಹಸ್ರ ನಾಮಾರ್ಚನೆಯೊಂದಿಗೆ ಅಲಂಕಾರ ಪೂಜೆಯೂ ಜರಗುತ್ತದೆ. ಹುಣ್ಣಿಮೆ ದಿವಸ ಹುಣ್ಣಿಮೆ ಪೂಜೆ, ಶನಿದೋಷ ನಿವಾರಣೆಗಾಗಿ ನಡೆಯುವ ಅಶ್ವತ್ಥ ಪೂಜೆ ಇಲ್ಲಿನ ವಿಶೇಷ ಸೇವೆಗಳು.
ಆಡಳಿತ ಮೊಕ್ತೇಸರರು : ಮಾಧವ ಸರಳಾಯ (9740170721)

ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು :-
* ಶ್ರೀ ಕೊಣಾಲು ದೇವತೆ ಚಾವಡಿ – ಬೊಳ್ಳಿಗುಡ್ಡೆ
* ಶ್ರೀ ಚಕ್ರವರ್ತಿ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳು ಕಡಂಬಿಲಿತ್ತಾಯಗುಡ್ಡೆ
* ಶ್ರೀ ಅಯ್ಯಪ್ಪ ಭಜನಾ ಮಂದಿರ ಶಿವಗಿರಿ, ಪಾಂಡಿಬೆಟ್ಟು 9008613598, 9481843199
* ಶ್ರೀ ನಾರಾಯಣ ಗುರು ಮಂದಿರ ಪಾಂಡಿಬೆಟ್ಟು 9141164843.

Copy Protected by Chetan's WP-Copyprotect.