ಕೊಳ್ತಿಗೆ ಗ್ರಾಮ

ಶ್ರೀ ಷಣ್ಮುಖದೇವ ದೇವಸ್ಥಾನ, ಬಾಯಂಬಾಡಿ, ಕೊಳ್ತಿಗೆ. ಮೊ: 9448627123

ಪುತ್ತೂರು ಪೆರ್ಲಂಪಾಡಿ-ನೆಟ್ನಾರು ರಸ್ತೆಯಲ್ಲಿ ಪೆರ್ಲಂಪಾಡಿ ಯಿಂದ ಎರಡು ಕಿ.ಮೀ. ಕ್ರಮಿಸಿದಾಗ ಶ್ರೀ ದೇವರ ಮಹಾದ್ವಾರ ಸಿಗುತ್ತದೆ. ದ್ವಾರದ ಮುಖಾಂತರ ಅರ್ಧ ಕಿ.ಮೀ. ಮುಂದೆ ಹೋದರೆ ಶ್ರೀ ಸನ್ನಿಧಿಗೆ ತಲುಪಬಹುದು.
ಹತ್ತನೇ ಶತಮಾನದ ಸುಮಾರಿಗೆ ಕೊಳ್ತಿಗೆ ಗ್ರಾಮದ ಬಾಯಂಬಾಡಿಯು ಅರಣ್ಯ ಪ್ರದೇಶವಾಗಿದ್ದು ಒಂದು ತಪೋವನವಾಗಿತ್ತು. ಯತಿಮಹಾಶಯರಿಂದ ಪ್ರೇರಣೆಗೊಂಡ ಗ್ರಾಮದ ಪ್ರಮುಖರ ಹಾಗೂ ೨೧ ಮನೆಗಳ ಮುಖಂಡರು ಒಂದಾಗಿ ಸೇರಿ ದೇವಸ್ಥಾನದ ಕಟ್ಟಡ ಮತ್ತು ಅದಕ್ಕೆ ಬೇಕಾದ ಸಕಲ ವ್ಯವಸ್ಥೆಗಳನ್ನು ಮಾಡಿ ಸದರಿ ವಿಪ್ರೋತ್ತಮರಿಂದ ದೇವರ ಪಂಚ ಲೋಹಾತ್ಮ ಪ್ರತಿಮೆಯನ್ನು ಮಾಡಿ ವಿಧಿವತ್ತಾಗಿ ಪ್ರತಿಷ್ಠಾಪಿಸಿದರು ಎಂಬುದು ಪ್ರತೀತಿ.
ಷಣ್ಮುಖದೇವ ದೇವಸ್ಥಾನದ ಆಡಳಿತ ಮಂಡಳಿಗೆ ಪೂರಕವಾಗಿ ಕವಳೆ ಮನೆತನ, ಕೊಳ್ತಿಗೆ ಸ್ಥಳಮನೆ, ಕೊಂರ್ಬಡ್ಕ ಸ್ಥಳಮನೆ, ಕುಂಟಿಕಾನ ಸ್ಥಳಮನೆ, ಪೆರ್ಲಂಪಾಡಿ ಸ್ಥಳಮನೆ ಹಾಗೂ ಹದಿನಾರು ಬಾರಿಕೆ ಮನೆತನದವರು ಕಾರ್ಯನಿರ್ವಹಿಸುತ್ತಿದ್ದಾರೆ. ಶ್ರೀ ಷಣ್ಮುಖದೇವ ದೇವಸ್ಥಾನವು ಪ್ರತಿಷ್ಠಾಪನೆಗೊಂಡು ೮೧೯ ವರ್ಷಗಳ ಕಾಲ ಪರ್ಯಂತ ಶ್ರೀ ದೇವರ ಉತ್ಸವ ಮತ್ತು ದೈವಗಳ ನೇಮ ನಡಾವಳಿಗಳು ನಡೆಯುತ್ತವೆ.
ಸರಕಾರಗಳ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಆಡಳಿತ ಮಂಡಳಿ ಇದ್ದರೂ ಸರಿ ಸುಮಾರು ನೂರು ವರ್ಷಗಳ ಕಾಲ ಶ್ರೀ ಕ್ಷೇತ್ರವು ಪಾಳುಬಿದ್ದಿತ್ತು. ೧೯೮೦ರ ದಶಕದಲ್ಲಿ ಶ್ರೀ ದೇವರ ಪ್ರೇರಣೆಯಿಂದ ಅಷ್ಟಮಂಗಲ ಪ್ರಶ್ನೆಯನುಸಾರ ಪತಿ ದಿ| ಕೆ.ಸಿ. ರಮೇಶ್ ಮತ್ತು ಪಿತ ರಾಮಯ್ಯ ಗೌಡ ಕುಂಟಿಕಾನ ಇವರ ಆಶಯದಂತೆ ಬಾಂಬೆ ಬೋರಿಂಗ್ ವರ್ಕ್ಸ್‌ನ ಮಾಲಕರಾದ ಶ್ರೀಮತಿ ಲಕ್ಷ್ಮೀ ರಮೇಶ್ ಇವರ ತನು-ಮನ-ಧನಗಳ ಸಹಕಾರದೊಂದಿಗೆ ಮಾಜಿ ಶಾಸಕ ಕೆ. ರಾಮ ಭಟ್‌ರವರ ಸಲಹೆಯಂತೆ ಬ್ರಹ್ಮಶ್ರೀ ಕೆಮ್ಮಿಂಜೆ ಕೇಶವ ತಂತ್ರಿಯವರ ಮಾರ್ಗದರ್ಶನದೊಂದಿಗೆ ಕೆ.ಆರ್. ಲಕ್ಷ್ಮಣ ಗೌಡ ಕುಂಟಿಕಾನ ಇವರ ನೇತೃತ್ವದ ಆಡಳಿತ ಮಂಡಳಿ ಹಾಗೂ ಕೆ. ಬಾಲಕೃಷ್ಣ ಗೌಡ ಕುದ್ಕುಳಿ ಇವರ ನೇತೃತ್ವದ ಜೀರ್ಣೋದ್ಧಾರ ಸಮಿತಿಗಳು ಊರ ಪರವೂರ ದಾನಿಗಳ ಸಹಕಾರದಿಂದ ಶ್ರೀ ಕ್ಷೇತ್ರ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವ ಜರಗಿತು. ಶ್ರೀ ದೇವಳದ ಉತ್ಸವಾದಿ ನಿತ್ಯ ನೈಮಿತ್ತಗಳು ಸುಸೂತ್ರವಾಗಿ ಜರಗುತ್ತಿದೆ.
ಕಳೆದ ಸುಮಾರು ೩೫ ವರುಷಗಳಿಂದ ಕೆ.ಆರ್. ಲಕ್ಷ್ಮಣ ಗೌಡ ಕುಂಟಿಕಾನ ಆಡಳಿತ ಮೊಕ್ತೇಸರರಾಗಿ, ಪ್ರಕೃತ ಅರ್ಚಕರಾಗಿ ಜಯರಾಮ ಬಡೆಕಿಲ್ಲಾಯ, ಸದಸ್ಯರುಗಳುಗಳಾಗಿ ದೇವಕಿ ರಾಮಚಂದ್ರ ಕೆಮ್ಮಾರ, ಚಂದ್ರಾವತಿ ವಸಂತ ಗೌಡ ಕುದ್ಕುಳಿ, ಆನಂದ ನಾಯ್ಕ ಮಾಲೆತ್ತೋಡಿ, ಕೆ.ವಸಂತ ಕುಮಾರ್ ಪೆರ್ಲಂಪಾಡಿ, ಶಿವರಾಮ ಭಟ್ ಬೀರ್‍ನಕಜೆ, ಭಾಸ್ಕರ ರೈ ಕಂಟ್ರಮಜಲು ಹಾಗೂ ರಾಜೇಶ್ ಗೌಡ ಕುದ್ಕುಳಿ ಆಡಳಿತ ನಿರ್ವಹಣೆ ಮಾಡುತ್ತಿದ್ದಾರೆ.

ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಕೊಳ್ತಿಗೆ ಗ್ರಾಮ, ಅಂಚೆ: ಪಾಲ್ತಾಡಿ-೫೭೪ ೨೧೦, ಪುತ್ತೂರು, ದ.ಕ.

ಪುತ್ತೂರು ತಾಲೂಕಿನ, ಕೊಳ್ತಿಗೆ ಗ್ರಾಮದ ಬೆಟ್ಟಗುಡ್ಡಗಳ, ಹಸಿರು… ಹಸರು ತಾಣದ ಸೆರಗಿನಲ್ಲಿರುವ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ (ಪಾಲ್ತಾಡು) ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದ್ದು, ಸುಮಾರು ೩೦೦ ವರ್ಷಗಳ ಇತಿಹಾಸ ಹೊಂದಿದ ಪರಮ ಪಾವನ ಕ್ಷೇತ್ರವಾಗಿದೆ. ಶ್ರೀ ಸುಬ್ರಹ್ಮಣ್ಯ ದೇವರು, ಈ ಭಕ್ತಿಯ ಪವಿತ್ರ ನೆಲದಲ್ಲಿ ವಲ್ಮೀಕ ರೂಪದಲ್ಲಿ ಉದ್ಭವಗೊಂಡು, ತನ್ನನ್ನು ನಂಬಿದ ಭಕ್ತ ಜನರ ಅಭೀಷ್ಟಗಳನ್ನು ನೆರವೇರಿಸಿ, ಅನುಗ್ರಹಿಸುತ್ತಾ ಬಂದಿದ್ದಾರೆ.
ಆಡಳಿತ ಮೊಕ್ತೇಸರರು : ಸಂತೋಷ್ ಕುಮಾರ್ ರೈ

ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನ ಚಾಕೋಟೆತ್ತಡಿ, ಪಾಲ್ತಾಡಿ, ಪುತ್ತೂರು, ದ.ಕ. – ೫೭೪ ೨೧೦

ಪಾಲ್ತಾಡಿ ಗ್ರಾಮದ ಚಾಕೋಟೆತ್ತಡಿ ಮಾಡ ಶ್ರೀ ಧರ್ಮರಸ ಉಳ್ಳಾಕುಲು ದೈವ ಮತ್ತು ಪರಿವಾರ ದೈವಗಳ ಗುಡಿ-ಮಾಲ್ಯಗಳ ನಿರ್ಮಾಣ ಕಾರ್ಯ ಯಶಸ್ವಿಯಾಗಿ ನಡೆದು ನವೀಕರಣ ಬ್ರಹ್ಮಕಲಶ ಮತ್ತು ನೇಮೋತ್ಸವ ಕೂಡಾ ನೆರವೇರಿದೆ.
ಹಲವು ಶತಮಾನಗಳಿಂದ ಈ ಗ್ರಾಮದ ಸರ್ವಜನರಿಗೂ ಆರಾಧನಾ ಕೇಂದ್ರವಾಗಿದ್ದ ಈ ದೈವಸ್ಥಾನದ ವರ್ಷಾವಧಿ ನೇಮ ಮತ್ತಿತ್ತರ ಕಾಲಬದ್ಧ ಆಚರಣೆಗಳನ್ನು ಈ ಗ್ರಾಮದ ಆರು ಮನೆತನದವರು ಪರಂಪಾರಾಗತವಾಗಿ ನಡೆಸಿಕೊಂಡು ಬರುತ್ತಿದ್ದರು. ಪ್ರಕೃತ ಈ ದೈವಸ್ಥಾನ ಪಾಲ್ತಾಡಿಯ ೧೬೯ ಮನೆಗಳಿಗೆ ಏಕೈಕ ಆರಾಧನಾ ಕೇಂದ್ರವಾಗಿದ್ದು ಶ್ರೀ ಧರ್ಮರಸು ಗ್ರಾಮ ದೈವವಾಗಿದ್ದಾನೆ.
ಸಂತೋಷ್ ಕುಮಾರ್ ರೈ ನಳೀಲು – ಗೌರವಾಧ್ಯಕ್ಷರು, ಸಂಜೀವ ಗೌಡ ಪಾಲ್ತಾಡಿ- ಅಧ್ಯಕ್ಷರು

ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು:
* ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನ ಕಣಿಯೂರು
* ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನ ಪಾಂಬಾರು
* ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನ ಪೆರ್ಲಂಪಾಡಿ
* ಶ್ರೀ ವಿಷ್ಣುಮೂರ್ತಿ ಉದಯಗಿರಿ ಕ್ಷೇತ್ರ ಪೆರ್ಲಂಪಾಡಿ
* ಶ್ರೀ ವಿಷ್ಣುಮೂರ್ತಿ ಉದಯಗಿರಿ ಕ್ಷೇತ್ರ ಮಣಿಕಾರ
* ಶ್ರೀ ಉಳ್ಳಾಕುಲು ದೈವಸ್ಥಾನ ದುಗ್ಗಳ
* ಶ್ರೀ ಉಳ್ಳಾಕುಲು ದೈವಸ್ಥಾನ ಕೊಂರ್ಬಡ್ಕ ಪೆರ್ಲಂಪಾಡಿ ಕೊಳ್ತಿಗೆ ಗ್ರಾಮ ಪುತ್ತೂರು. ೦೮೨೫೧-೨೭೩೧೦೬, ೯೪೮೨೯೬೯೦೧೧
* ಶ್ರೀ ಉಳ್ಳಾಕುಲು ಧೂಮಾವತಿ ದೈವಸ್ಥಾನ ಕುಂಟ್ರಮಜಲು ಟಶ್ರೀ ಉಳ್ಳಾಕುಲು ಪುರುಷರಾಯ ದೈವಸ್ಥಾನ ಪೆರ್ಲಂಪಾಡಿ
* ಶ್ರೀ ಶಿರಾಡಿ ದೈವಸ್ಥಾನ ಮಣಿಕ್ಕರ
* ಶ್ರೀ ಶಿರಾಡಿ ದೈವಸ್ಥಾನ ಪೆರ್ಲಂಪಾಡಿ
* ಪಾಲ್ತಾಡು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕೊಳ್ತಿಗೆ

Copy Protected by Chetan's WP-Copyprotect.