ಶಾಂತಿನಾಥ ಸ್ವಾಮಿ ಬಸದಿ, ಪುತ್ತೂರು ಮೊ: 9449577116

ಪುತ್ತೂರಿನ ಹೃದಯ ಭಾಗದಲ್ಲಿ ಸುಮಾರು 900 ವರ್ಷಗಳ ಇತಿಹಾಸವಿರುವ ಶಾಂತಿನಾಥ ಬಸದಿಯಿದೆ. ಈ ಬಸದಿಯನ್ನು ಜಿನ ರಾಜನಾದ ಬಂಗ ಅರಸು ಕಟ್ಟಿದನೆಂಬ ಪುರಾವೆಯಿದೆ. ಈ ಬಸದಿಯು 1999ರಲ್ಲಿ ಮೂಡಾಯೂರು ರಾಜವರ್ಮ ರೈ ಮತ್ತು ಗುಣಪಾಲ್ ಜೈನ್ ತಂಡ ನೇತೃತ್ವದಲ್ಲಿ ನವೀಕೃತಗೊಂಡು ಪುನಃ ಪ್ರತಿಷ್ಠಾಪನೆ ನಡೆಸಲಾಯಿತು. ಇಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ, ನವರಾತ್ರಿ ಉತ್ಸವ ಹಾಗೂ ಮಹಾವೀರ ಜಯಂತಿಯನ್ನು ಆಚರಿಸಲಾಗುತ್ತಿದೆ. ಪ್ರಸ್ತುತ ಬಸದಿಯ ಮ್ಯಾನೇಜಿಂಗ್ ಟ್ರಸ್ಟಿಯಾಗಿ ಗುಣಪಾಲ್ ಜೈನ್ ಹಾಗೂ ಸದಸ್ಯರಾಗಿ ರತ್ನವರ್ಮ ಹೆಗಡೆ, ರವಿರಾಜ ಆರಿಗ, ಹಾಗೂ ಧನ್ಯರಾಜ ಚೌಟ ಕಾರ್ಯನಿರ್ವಹಿಸುತ್ತಿದ್ದಾರೆ. ಶಾಂತರಾಜ ಇಂದ್ರ ಪುರೋಹಿತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.