ಮಹಾವೀರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮಹಾಸಭೆ

0

ಬೆಳ್ಳಿಹಬ್ಬದ ಪ್ರಯುಕ್ತ ಸರ್ವ ಸದಸ್ಯರಿಗೆ ಶೇ.25 ಡಿವಿಡೆಂಡ್: ಪಿ ಪಿ ಹೆಗ್ಡೆ ಘೋಷಣೆ

ಮಂಗಳೂರು: ಮಂಗಳೂರಿನ ಲಾಲ್ ಬಾಲ್ ಸಮೀಪದ ತಕ್ಷಶಿಲಾ ಕಟ್ಟಡದಲ್ಲಿ ಪ್ರಧಾನ ಕಚೇರಿ ಹೊಂದಿರುವ ಮಹಾವೀರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆ ಸೆ. 14ರಂದು ನಡೆಯಿತು.


ಕೇಂದ್ರ ಕಚೇರಿಯ ಸಭಾಂಗಣದಲ್ಲಿ ನಡೆದ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಸೊಸೈಟಿಯ ಅಧ್ಯಕ್ಷರೂ ಹೈಕೋರ್ಟ್ ಹಿರಿಯ ನ್ಯಾಯವಾದಿಗಳೂ ಆಗಿರುವ ಪಿ ಪಿ ಹೆಗ್ಡೆ ಅವರು ಮಾತನಾಡಿ 25 ವರ್ಷಗಳ ಹಿಂದೆ ಆರಂಭಗೊಂಡಿರುವ ಮಹಾವೀರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉತ್ತಮವಾಗಿ ಬ್ಯಾಂಕಿಂಗ್ ವ್ಯವಹಾರ ನಡೆಸುತ್ತಿದೆ. ಈಗಾಗಲೇ ಹನ್ನೊಂದು ಶಾಖೆಯನ್ನು ನಮ್ಮ ಸಂಸ್ಥೆ ಹೊಂದಿದೆ. ಕಾರ್ಕಳ, ಮೂಡಬಿದ್ರೆ, ಉಜಿರೆ, ಪುತ್ತೂರು, ಬಿ.ಸಿ.ರೋಡ್, ಸುರತ್ಕಲ್, ತೊಕ್ಕೊಟ್ಟು, ಮಂಗಳೂರು ರಥಬೀದಿ, ಬಳ್ಳಾಲ್ ಬಾಗ್ ಹಾಗೂ ಎಂ.ಜಿ. ರೋಡಿನಲ್ಲಿರುವ ಶಾಖೆಗಳ ಮೂಲಕ ನಮ್ಮ ಸಂಸ್ಥೆ ಏಳು ಸಾವಿರ ಸದಸ್ಯರನ್ನು ಹೊಂದಿದೆ. ವಾರ್ಷಿಕವಾಗಿ ಎಂಟುನೂರು ಕೋಟಿಗಿಂತ ಅಧಿಕ ವ್ಯವಹಾರ ನಡೆಸುತ್ತಿದೆ. ಕಳೆದ ವರ್ಷ 125 ಕೋಟಿಗೂ ಅಧಿಕ ಠೇವಣಿ ಸಂಗ್ರಹಿಸಲಾಗಿದೆ. 100 ಕೋಟಿಗೂ ಅಧಿಕ ಸಾಲ ನೀಡಲಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ದಾಖಲೆಯ ಒಂದು ಕೋಟಿ ಆದಾಯ ಗಳಿಸಿ ದಾಖಲೆ ನಿರ್ಮಿಸಿದೆ ಎಂದು ತಿಳಿಸಿದರು.


ಈ ವರ್ಷ ಎಲ್ಲಾ ಸದಸ್ಯರಿಗೆ ಬೆಳ್ಳಿಹಬ್ಬದ ಪ್ರಯುಕ್ತ ಶೇ.25 ಡಿವಿಡೆಂಡ್ ನೀಡಲಾಗುವುದು ಎಂದು ಅಧ್ಯಕ್ಷರು ಘೋಷಿಸಿದರು. ಇದನ್ನು ಸರ್ವ ಸದಸ್ಯರು ಕೈ ಚಪ್ಪಾಳೆ ತಟ್ಟಿ ಸ್ವಾಗತಿಸಿ ಪ್ರಶಂಸಿಸಿದರು.

ಇಡೀ ವರ್ಷ ಬೆಳ್ಳಿಹಬ್ಬ ಆಚರಣೆ-12ನೇ ಶಾಖೆ ಆರಂಭ:
ಸೊಸೈಟಿಯ ಬೆಳ್ಳಿ ಹಬ್ಬವನ್ನು ಇಡೀ ವರ್ಷ ಆಚರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದ್ದು ಬೆಳ್ಳಿಹಬ್ಬದ ಪ್ರಯುಕ್ತ 12ನೇ ನೂತನ ಶಾಖೆಯನ್ನು ಮಂಗಳೂರು ನಗರದ ಮಂಗಳಾದೇವಿಯಲ್ಲಿ ಸ್ಥಾಪಿಸಲಾಗುವುದು. ಮುಂದಿನ ತಿಂಗಳು ನೂತನ ಶಾಖೆ ಉದ್ಘಾಟನೆ ನೆರವೇರಲಿದೆ ಎಂದು ಅಧ್ಯಕ್ಷ ಪಿ ಪಿ ಹೆಗ್ಡೆ ಘೋಷಿಸಿದರು.

ಸಂಘದ ಉಪಾಧ್ಯಕ್ಷ ಬಿ. ಜಿನರಾಜ ಆರಿಗ ವಗ್ಗ ಬಂಟ್ವಾಳ, ನಿರ್ದೇಶಕರಾದ ಕೆ. ಸುರೇಶ್ ಬಳ್ಳಾಲ್ ಮಂಗಳೂರು, ರತ್ನಾಕರ್ ರಾಜ ಅರಸು ಕಿನ್ಯಕ್ಕ ಬಳ್ಳಾಲ್ ಪಡುಬಿದ್ರಿ ಉಡುಪಿ, ಎಸ್.ಡಿ.ಸಂಪತ್ ಸಾಮ್ರಾಜ್ಯ ಶಿರ್ತಾಡಿ, ಮಹಾವೀರ ಹೆಗ್ಡೆ ಅಂಡಾರು ಕಾರ್ಕಳ, ವರ್ಧಮಾನ್ ಜೈನ್ ಕಾರ್ಕಳ, ನಿರಂಜನ್ ಕುಮಾರ್ ಜೈನ್ ಬಂಟ್ವಾಳ, ಉದಿತ್ ಕುಮಾರ್ ಜೈನ್ ಬೆಳ್ತಂಗಡಿ, ವಿಜಯ ಕುಮಾರಿ ಇಂದ್ರ ಪಾಣೆಮಂಗಳೂರು, ಸುರೇಖಾ ಆರ್. ಹೆಗ್ಡೆ ಪುತ್ತೂರು, ಜಯಕೀರ್ತಿ ಜೈನ್ ಧರ್ಮಸ್ಥಳ, ಧರ್ಶನ್ ಜೈನ್ ಮಂಗಳೂರು, ಉದಯ ಆಳ್ವ ಮಂಗಳೂರು, ಯಶೋಧರ ಜೈನ್ ಪುತ್ತೂರು, ರಾಜೇಶ್ ಕುಮಾರ್ ಅಮ್ಟಾಡಿ ಮಂಗಳೂರು, ರಾಘವೇಂದ್ರ ರಾವ್ ಮಂಗಳೂರು, ಪ್ರವೀಣ್ ಕುಮಾರ್ ಇಂದ್ರ ಉಜಿರೆ, ಪಿ.ಜಯರಾಜ್ ಕಾಂಬ್ಳಿ ಮೂಡಬಿದ್ರಿ, ಜೀವಂಧರ್ ಜೈನ್ ಪುತ್ತೂರು, ಮಹಾಪ್ರಬಂಧಕ ಮಂಜುನಾಥ್ ಶೇಟ್, ಸಹಾಯಕ ಮಹಾ ಪ್ರಬಂಧಕ ಸವಿತಾ ಜೈನ್, ಹಿರಿಯ ವ್ಯವಸ್ಥಾಪಕ ಸುರೇಶ್ ಉಚ್ಚಿಲ್, ಹಿರಿಯ ಪ್ರಬಂಧಕರಾದ ಪ್ರಜ್ಞಾ ಜೈನ್, ಶರ್ಮಿಳಾ ಮತ್ತಿತರರು ಉಪಸ್ಥಿತರಿದ್ದರು.

ಮಾತೃಶ್ರೀ ಶ್ಯಾಮಲಾದೇವಿ ಸ್ಮರಣಾರ್ಥ 25 ಲಕ್ಷ ರೂ ವಿದ್ಯಾರ್ಥಿ ವೇತನ ವಿತರಣೆ:
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಸ್.ಎಸ್.ಎಲ್.ಸಿ.ಯಿಂದ ಸ್ನಾತಕೋತ್ತರ ವಿಭಾಗದವರೆಗಿನ 800 ವಿದ್ಯಾರ್ಥಿಗಳಿಗೆ ಸೊಸೈಟಿಯ ಅಧ್ಯಕ್ಷ ಪಿ ಪಿ ಹೆಗ್ಡೆ ಅವರ ಮಾತೃಶ್ರೀ ದಿ.ಶ್ಯಾಮಲಾದೇವಿ ಸ್ಮರಣಾರ್ಥ ಒಟ್ಟು 25 ಲಕ್ಷ ರೂ ವಿದ್ಯಾರ್ಥಿ ವೇತನವನ್ನು ಕಾರ್ಯಕ್ರಮದಲ್ಲಿ ವಿತರಿಸಲಾಯಿತು. ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಲಂಡನ್ ನಲ್ಲಿ ಉನ್ನತ ಶಿಕ್ಷಣ ಪೂರೈಸಿ ಇದೀಗ ಬೆಂಗಳೂರಿನಲ್ಲಿ ವೈದ್ಯಕೀಯ ಸೇವೆ ನೀಡುತ್ತಿರುವ ಹಾರ್ಟ್ ಸ್ಪೆಷಲಿಸ್ಟ್ ಡಾ. ಪಾರಿತೋಷ್ ಬಳ್ಳಾಲ್ ಅವರನ್ನು ವಿಶೇಷವಾಗಿ ಅಭಿನಂದಿಸಲಾಯಿತು ಹಾಗೂ ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡಲಾಯಿತು. ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ನೈತಿಕತೆಯನ್ನು ಬೆಳೆಸಿಕೊಂಡು ನಮ್ಮ ಸಂಸ್ಕಾರ, ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಸಭಾಧ್ಯಕ್ಷತೆ ವಹಿಸಿದ್ದ ಪಿ ಪಿ ಹೆಗ್ಡೆ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

LEAVE A REPLY

Please enter your comment!
Please enter your name here