ಉಪ್ಪಿನಂಗಡಿ: ರಸ್ತೆ ಡಿವೈಡರ್ ಗೆ ವಾಲಿನಿಂತ ಕಂಟೈನರ್ ಲಾರಿ

0

ಉಪ್ಪಿನಂಗಡಿ : ಇಲ್ಲಿಗೆ ಸಮೀಪದ ರೆಖ್ಯಾ ಗ್ರಾಮದ ಪರಕ್ಕಳ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಂಟೈನರ್ ಲಾರಿಯೊಂದು ರಸ್ತೆ ಡಿವೈಡರ್ ವಾಲಿಕೊಂಡು ನಿಂತ ಘಟನೆ ಮಂಗಳವಾರ ಸಂಭವಿಸಿದೆ.


ಬೆಂಗಳೂರಿನಿಂದ ಮಂಗಳೂರಿನತ್ತ ಸಂಚರಿಸುತ್ತಿದ್ದ ಈ ಕಂಟೈನರ್ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬೀಳುವ ಸ್ಥಿತಿಯಲ್ಲಿ ರಸ್ತೆ ವಿಭಾಜಕಕ್ಕೆ ಒರಗಿದಂತೆ ವಾಲಿ ನಿಂತಿದೆ. ಘಟನೆಯಿಂದ ಕಂಟೈನರ್ ಚಾಲಕ ಅಪಾಯದಿಂದ ಪಾರಾಗಿದ್ದಾನೆ.

LEAVE A REPLY

Please enter your comment!
Please enter your name here