ಶ್ರೀ ಮುಂಡ್ಯೆತ್ತಾಯ ದೈವಸ್ಥಾನ ಪಾಂಗಾಳಾಯ, ಪರ್ಲಡ್ಕ, ಪುತ್ತೂರು. ಮೊ: 9448152824, 9448152842

ಪುತ್ತೂರು ನಗರದ ಕೇಂದ್ರ ಭಾಗ ಪರ್ಲಡ್ಕ ಸಮೀಪ ಪಾಂಗಾಳಾಯ ಎಂಬ ವಿಶಾಲ ಬೈಲು ಪ್ರದೇಶದಲ್ಲಿ ಸುಮಾರು ೪೦೦ ವರ್ಷಗಳ ಇತಿಹಾಸವಿರುವ ಶ್ರೀ ಮುಂಡ್ಯೆತ್ತಾಯ ದೈವಸ್ಥಾನವಿದೆ. ಶ್ರೀ ಮುಂಡ್ಯೆತ್ತಾಯ ದೈವವು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಎರಡನೇ ದಂಡನಾಯಕ ಎಂಬ ಪ್ರತೀತಿಯೂ ಇದೆ. ಈ ಬಗ್ಗೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿರುವ ಕರಿಕಲ್ಲಿನ ಶಾಸನದಲ್ಲಿ ಉಲ್ಲೇಖವಿದ್ದ ಪುರಾತನ ಐತಿಹಾಸಿಕ ಮಹತ್ವವನ್ನು ಪಡೆದಿದೆ. ಸ್ಥಳ ಪುರಾಣದಂತೆ ಕಾಶಿಯಿಂದ ಬಂದ ಜೋಗಿ ಪುರುಷನನ್ನು ಬೆಂಗಾವಲಾಗಿ ತುಳುನಾಡಿಗೆ ಬಂದ ಶ್ರೀ ಕಾಳಬೈರವೇಶ್ವರನು ಧರ್ಮಸ್ಥಾಪನೆ ಮತ್ತು ರಕ್ಷಣೆಗಾಗಿ ಪಾಂಗಾಳಾಯ ‘ಪಿಲಿಮೊಟ್ಟು ಪಾದೆ’ ಎಂಬಲ್ಲಿ ಮೊದಲ ನೆಲೆಯಾದ ರಾಜನ್ ದೈವ. ಅಜೀರ್ಣಾವಸ್ಥೆಯಲ್ಲಿದ್ದ ದೈವಸ್ಥಾನವನ್ನು ಸ್ಥಳೀಯ ಪ್ರಮುಖರಾದ ಪಾದೆ ಶ್ರೀಧರ್, ವಿನಯ ಭಂಡಾರಿ, ಮಹಾದೇವ ಶಾಸ್ತ್ರೀ ಮಣಿಲ, ಮುಳಿಯ ಶ್ಯಾಂ ಭಟ್, ಸದಾಶಿವ ಗೌಡ ಪಾಂಗಳಾ, ಗಂಗಾಧರ್ ಜಿಡೆಕಲ್ಲು, ಆನಂದ ಆಚಾರಿ, ಉಮೇಶ್ ಆಚಾರಿ ಹಾಗೂ ಮಹಾಲಿಂಗ ಮಣಿಯಾಣಿಯವರ ನೇತೃತ್ವದಲ್ಲಿ ಜೀರ್ಣೋದ್ದಾರ ಕಾಮಗಾರಿಗೆ ಚಾಲನೆ ನೀಡಲಾಯಿತು. ೨೦೦೮ರಲ್ಲಿ ಸಂಪತ್ ಕುಮಾರ್‌ರವರ ಅಧ್ಯಕ್ಷತೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯನ್ನು ರಚಿಸಿಕೊಂಡು ದೈವಸ್ಥಾನದ ಬ್ರಹ್ಮಕಲಶೋತ್ಸವವನ್ನು ನಡೆಸಲಾಗಿದೆ.

ಶ್ರೀ ಅರಸು ಮುಂಡ್ಯತ್ತಾಯ ದೈವವು ಇಲ್ಲಿ ಪ್ರಧಾನ ದೈವವಾಗಿದ್ದು, ಪೊಟ್ಟನ್ ದೈವ ಮುಖ್ಯ ಗುಡಿಯಲ್ಲಿದೆ. ಸ್ಥಳ ಸಾನಿಧ್ಯ ದೈವಗಳಾಗಿ ಗುಳಿಗ, ನಾಗದೇವರು ಮತ್ತು ರಕ್ತೇಶ್ವರಿ ಹಾಗೂ ಅನಂತರ ನಿರ್ಮಿತವಾದ ಪಂಜುರ್ಲಿ ಮತ್ತು ಕಲ್ಲುರ್ಟಿ ದೈವಗಳ ಗುಡಿಯಿದೆ. ಕಾಂಚನದ ಸುಬ್ಬ ನಲಿಕೆ ದೈವ ನರ್ತಕರಾಗಿರುತ್ತಾರೆ. ಶಂಕರ ಜಿಡೆಕಲ್ಲು, ಶಿವಪ್ಪ ಗೌಡ ಪಾಂಗಳಾ ಮತ್ತು ಸದಾಶಿವ ಗೌಡ ಪಾಂಗಳಾ ಇಲ್ಲಿ ದೈವದ ಪಾತ್ರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಿಂಗಳ ಪ್ರತಿ ಸಂಕ್ರಮಣದಂದು ಗ್ರಾಮಸ್ಥರ ಸಮ್ಮುಖದಲ್ಲಿ ದೈವಸ್ಥಾನದ ಬಾಗಿಲು ತೆರೆದು ದೇವಕ್ರೀಯೆಯಲ್ಲಿ ತಂಬಿಲ ಸೇವೆ ನಡೆಯುತ್ತದೆ. ಪ್ರತಿವರ್ಷ ರಾಜಮರ್ಯಾದೆಯೊಂದಿಗೆ ವಾರ್ಷಿಕ ಕೋಲ ಸೇವೆಯುತ್ತದೆ. ಈ ಸಂದರ್ಭದಲ್ಲಿ ಪುರಾತನವಾದ ದೈವದ ‘ಗ್ರಾಮ ಸವಾರಿ’ ಇಲ್ಲಿನ ವೈಶಿಷ್ಠ್ಯವಾಗಿದೆ.
೨೦೧೦ರಲ್ಲಿ ದೈವಸ್ಥಾನವು ನೋಂದಾಯಿತಗೊಂಡಿದ್ದು ಪ್ರಸ್ತುತ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಸಿ ಮಹಾದೇವ ಶಾಸ್ತ್ರೀ ಮಣಿಲ, ಪ್ರಧಾನ ಕಾರ್ಯದರ್ಶಿಯಾಗಿ ಸುಧಾಕರ ಕೆ.ಪಿ ಕಲ್ಲಿಮಾರು, ಉಪಾಧ್ಯಕ್ಷರಾಗಿ ತಾರಾನಾಥ ರೈ, ಖಜಾಂಚಿಯಾಗಿ ಸಂಪತ್ ಕುಮಾರ್, ಜತೆ ಕಾರ್ಯದರ್ಶಿಯಾಗಿ ರಾಜಗೋಪಾಲ ಪಿ.ಎಸ್, ಜತೆ ಖಜಾಂಚಿಯಾಗಿ ಗಣೇಶ್ ಭಟ್, ಸದಸ್ಯರಾಗಿ ವಿನಯ ಭಂಡಾರಿ, ಉಮಾಶಂಕರ, ಆನಂದ ಆಚಾರ್ಯ, ಕೃಷ್ಣ ಭಟ್, ಪುಂಡಲಿಕ ಆಚಾರ್ಯ, ವಾಸು ಪೂಜಾರಿ, ಪ್ರಶಾಂತ್ ಕುಮಾರ್, ಆಂದ ಗೌಡ ಹಾಗೂ ಸುಜಾತ ಮತ್ತು ನಾಗೇಶ್ ಕುದ್ರೆತ್ತಾಯ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉತ್ಸವ ಸಮಿತಿಯ ಅಧ್ಯಕ್ಷರಾಗಿ ಪ್ರಶಾಂತ್ ಪಾಂಗಳಾ, ಆರ್ ರಾಘವೇಂದ್ರ ಶೆಣೈ ಕಾರ್ಯದರ್ಶಿಯಾಗಿ ಮತ್ತು ಸಂಪತ್ ಕುಮಾರ್ ಖಜಾಂಚಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.