







ಕಾಣಿಯೂರು: ಒಬ್ಬರ ಜೀವ ಉಳಿಸಲು ಮತ್ತೊಬ್ಬರು ರಕ್ತ ನೀಡಲೇಬೇಕು. ಹಾಗಾಗಿ ರಕ್ತದಾನ ಎನ್ನುವುದು ಕೇವಲ ದಾನವಲ್ಲ, ಅದು ಮತ್ತೊಂದು ಕುಟುಂಬಕ್ಕೆ ನೀಡುವ ಜೀವದಾನವಾಗಿದೆ ಎಂದು ಅಗಳಿ ಶ್ರೀ ಸದಾಶಿವ ದೇವಸ್ಥಾನದ ಅರ್ಚಕ ಈಶ್ವರಚಂದ್ರ ಭಟ್ ಹೇಳಿದರು.


ಅವರು ಅಗಳಿ ಶ್ರೀ ಸದಾಶಿವ ಯುವಕ ಮಂಡಲದ ಬೆಳ್ಳಿಹಬ್ಬದ ಪ್ರಯಕ್ತ ದ.ಕ ಜಿಲ್ಲಾ ಮತ್ತು ಸುಳ್ಯ ತಾಲೂಕು ಭಾರತೀಯ ರೆಡ್ಕ್ರಾಸ್ ಇವರ ಸಹಯೋಗದಲ್ಲಿ ಬೆಳಂದೂರು ಸ. ಹಿ. ಪ್ರಾ. ಶಾಲೆಯಲ್ಲಿ ನಡೆದ
ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಅಗಳಿ ಶ್ರೀ ಸದಾಶಿವ ಯುವಕ ಮಂಡಲದ ಅಧ್ಯಕ್ಷ ಲೋಕೇಶ್ ಅಗಳಿ ವಹಿಸಿದ್ದರು.



ಸುಳ್ಯ ತಾಲೂಕು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಬಿ. ಸುಧಾಕರ ರೈ, ಬೆಳಂದೂರು ಸ.ಉ.ಹಿ. ಪ್ರಾ. ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಪ್ರೀತ್ ಕುಮಾರ್ ಜೈನ್ ಬೆಳಂದೂರುಗುತ್ತು, ಅಗಳಿ ಶ್ರೀ ಸದಾಶಿವ ದೇವಸ್ಥಾನದ ಅನುವಂಶೀಯ ಮೊಕ್ತೇಸರ ಶಿವರಾಮ ಗೌಡ ಅಗಳಿ, ಬೆಳಂದೂರು ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ರವಿ ಮುಂಡಾಲ, ಬೆಳಂದೂರು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಭವಾನಿಶಂಕರ್ ಅಗಳಿ, ಯುವಕ ಮಂಡಲದ ಕಾರ್ಯದರ್ಶಿ ಗಣೇಶ್ ಅಗಳಿ ಉಪಸ್ಥಿತರಿದ್ದರು. ಸವಿತಾ ಅಗಳಿ ಸ್ವಾಗತಿಸಿ, ಮೋಹನ್ ಅಗಳಿ ವಂದಿಸಿದರು. ಜಗದೀಶ್ ಅಗಳಿ ಕಾರ್ಯಕ್ರಮ ನಿರೂಪಿಸಿದರು.










