







ಪುತ್ತೂರು: ವೀಡಿಯೊ ಎಡಿಟಿಂಗ್ ಕೋರ್ಸ್ ಎಂಬುದು ಕಚ್ಚಾ ಆಡಿಯೊ, ವೀಡಿಯೊ ಕ್ಲಿಪ್ಗಳು, ಗ್ರಾಫಿಕ್ಸ್ ಮತ್ತು ವಿಶೇಷ ಎಫೆಕ್ಟ್ಗಳನ್ನು ಸಂಯೋಜಿಸಿ ವೃತ್ತಿಪರ ವೀಡಿಯೊಗಳನ್ನು ಸಿದ್ಧಪಡಿಸುವುದನ್ನು ಕಲಿಸುವ ಒಂದು ತರಬೇತಿ ಕಾರ್ಯಕ್ರಮವಾಗಿದೆ. ಪ್ರಸ್ತುತ ಡಿಜಿಟಲ್ ಯುಗದಲ್ಲಿ ವೀಡಿಯೊ ಎಡಿಟಿಂಗ್ ಕ್ಷೇತ್ರವು ವೇಗವಾಗಿ ಬೆಳೆಯುತ್ತಿದೆ. ಕಳೆದ 8 ತಿಂಗಳಿನಿಂದ ಪುತ್ತೂರಿನ ಮುಖ್ಯರಸ್ತೆಯ ದೇವಣ್ಣಕಿಣಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಸುದ್ದಿ ಮಾಹಿತಿ ಕೇಂದ್ರದಲ್ಲಿ ವಿಡಿಯೋ ಎಡಿಟಿಂಗ್ ತರಗತಿಗಳು ನಡೆಯುತ್ತಿದ್ದು ಈಗಾಗಲೇ 40ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಪರಿಣಿತ ಶಿಕ್ಷಕರ ಮಾಗದರ್ಶನದಲ್ಲಿ ತರಗತಿಯ ಸದುಪಯೋಗಪಡಿಸಿಕೊಂಡಿದ್ದಾರೆ.


ಪ್ರಸ್ತುತ ಬೆಳಗ್ಗೆ 10 ರಿಂದ 12 ರವರೆಗೆ ಮೊದಲ ಬ್ಯಾಚ್ ಹಾಗೂ ಸಂಜೆ 4 ರಿಂದ 6 ರವರೆಗೆ ಎರಡನೇ ಬ್ಯಾಚುಗಳಲ್ಲಿ ತರಗತಿಗಳು ನಡೆಯುತ್ತಿದೆ. ತರಬೇತಿಯಲ್ಲಿ ಅಡೋಬ್ ಫೋಟೋಶಾಪ್, ಅಡೋಬ್ ಪ್ರೀಮಿಯರ್ ಪ್ರೊ, ಅಡೋಬ್ ಅಪ್ಟರ್ ಎಫೆಕ್ಟ್, ಕ್ಯಾನ್ವಾ, ಇನ್ಡಿಸೈನ್ ಹಾಗೂ ಕನ್ನಡ ಟೈಪಿಂಗ್ ಕೋರ್ಸ್ಗಳನ್ನು ನೀಡಲಾಗುತದೆ. ವಿದ್ಯಾರ್ಥಿಗಳಿಗೆ ಕೇವಲ ರೂ.10,೦೦೦ ಹಾಗೂ ಉಳಿದವರಿಗೆ ರೂ. 12,೦೦೦ ಶುಲ್ಕ ನಿಗದಿ ಮಾಡಲಾಗಿದೆ. ಕೊರ್ಸ್ನ ಮುಂದುವರೆದ ಭಾಗವಾಗಿ 15 ದಿನಗಳ ಇಂಟರ್ನ್ಶಿಪ್ ಹಾಗೂ ಉದ್ಯೋಗ ಅವಕಾಶಗಳನ್ನು ಕಲ್ಪಿಸಿಕೊಡಲಾಗುತ್ತದೆ. ಈಗಾಗಲೇ ಬೆಳಗ್ಗಿನ ಬ್ಯಾಚು ಹಾಗು ಸಂಜೆಯ ಬ್ಯಾಚುಗಳು ಸೇರಿ 2 ಬ್ಯಾಚುಗಳು ಆರಂಭಿಸಿದ್ದು ಮುಂದಿನ ಬ್ಯಾಚುಗಳು ಸಪ್ಟೆಂಬರ್ 23 ರಿಂದ ಪ್ರಾರಂಭಿಸಲಾಗುತ್ತಿದ್ದು ಆಸಕ್ತರು ಇದರ ಸದುಪಯೊಗಪಡಿಸಿಕೊಳ್ಳಬಹುದು.



ವೀಡಿಯೊ ಎಡಿಟಿಂಗ್ ಕೋರ್ಸ್ ಮುಗಿಸಿದ ನಂತರ ಡಿಜಿಟಲ್ ಜಗತ್ತಿನಲ್ಲಿ ಅಪಾರ ಉದ್ಯೋಗ ಮತ್ತು ವೃತ್ತಿ ಅವಕಾಶಗಳಿವೆ. ಇಂದು ಸಾಮಾಜಿಕ ಮಾಧ್ಯಮ, ಮನರಂಜನೆ ಮತ್ತು ಜಾಹೀರಾತು ಕ್ಷೇತ್ರಗಳು ವೇಗವಾಗಿ ಬೆಳೆಯುತ್ತಿರುವುದರಿಂದ ವೃತ್ತಿಪರ ವೀಡಿಯೊ ಎಡಿಟರ್ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಪ್ರಮುಖ ಉದ್ಯೋಗ ಮತ್ತು ವೃತ್ತಿ ಅವಕಾಶಗಳು (Key Career Opportunities) ಫಿಲ್ಮ್ ಮತ್ತು ಟಿವಿ ಉದ್ಯಮ (Film & Television Industry): ಚಲನಚಿತ್ರ ಸಂಸ್ಥೆಗಳು, ಧಾರಾವಾಹಿಗಳು, ರಿಯಾಲಿಟಿ ಶೋಗಳು ಮತ್ತು ಸುದ್ದಿ ವಾಹಿನಿಗಳಲ್ಲಿ (News Channels) ವೀಡಿಯೊ ಎಡಿಟರ್ ಅಥವಾ ಅಸಿಸ್ಟೆಂಟ್ ಎಡಿಟರ್ ಆಗಿ ಕೆಲಸ ಮಾಡಬಹುದು.
ಡಿಜಿಟಲ್ ಮಾರ್ಕೆಟಿಂಗ್ ಮತ್ತು ಜಾಹೀರಾತು ಸಂಸ್ಥೆಗಳು (Advertising & Digital Marketing Agencies): ಕಂಪನಿಗಳ ಉತ್ಪನ್ನಗಳನ್ನು ಪ್ರಚಾರ ಮಾಡಲು ಬ್ರ್ಯಾಂಡ್ ವೀಡಿಯೊಗಳು, ಸೋಶಿಯಲ್ ಮೀಡಿಯಾ ಜಾಹೀರಾತುಗಳು ಮತ್ತು ಪ್ರೋಮೋಗಳನ್ನು ತಯಾರಿಸಲು ಎಡಿಟರ್ಗಳ ಅಗತ್ಯವಿದೆ. ಯೂಟ್ಯೂಬ್ ಮತ್ತು ಸೋಶಿಯಲ್ ಮೀಡಿಯಾ (YouTube & Social Media) ಪ್ರಸಿದ್ಧ ಯೂಟ್ಯೂಬರ್ಗಳು, ಮತ್ತು ಕಂಟೆಂಟ್ ಕ್ರಿಯೇಟರ್ಗಳಿಗೆ ವೀಡಿಯೊಗಳನ್ನು ಎಡಿಟ್ ಮಾಡಿಕೊಡುವ ಮೂಲಕ ಉತ್ತಮ ಆದಾಯ ಗಳಿಸಬಹುದು.
ಭವಿಷ್ಯದ ಬೆಳೆವಣಿಗೆ (Future Growth)ಯೂಟ್ಯೂಬ್, ಇನ್ಸ್ಟಾಗ್ರಾಮ್ ರೀಲ್ಸ್, ಟಿವಿ, ಮತ್ತು OTT ವೇದಿಕೆಗಳ (Netflix, Amazon Prime) ಬಳಕೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ, ವೃತ್ತಿಪರ ವೀಡಿಯೊ ಎಡಿಟಿಂಗ್ ಕಲಿತವರಿಗೆ ಭವಿಷ್ಯದಲ್ಲಿ ಸ್ಥಿರವಾದ ಮತ್ತು ಉತ್ತಮ ವೇತನ ನೀಡುವ ಅವಕಾಶಗಳು ಸದಾ ಲಭ್ಯವಿರುತ್ತವೆ.
ಅಸಕ್ತರು ಸುದ್ದಿ ಮಾಹಿತಿ ಕೇಂದ್ರ, ಪ್ರಥಮ ಮಹಡಿ, ದೇವಣ್ಣಕಿಣಿ ಕಟ್ಟಡ ಯೂನಿಯನ್ ಬ್ಯಾಂಕ್ ಬಳಿ, ಮುಖ್ಯ ರಸ್ತೆ ಪುತ್ತೂರು. ದೂ:7829503541 / 9986416537 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.










