







ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರಿಗೆ ಸ್ವರ್ಣ ಕವಚ ನಿರ್ಮಾಣಕ್ಕೆ ಭಕ್ತರಿಂದ ಸೆ.19ರಂದು ಒಂದೇ ದಿನ 22 ಗ್ರಾಂ ಸ್ವರ್ಣ ಸಮರ್ಪಣೆ ಮಾಡಲಾಗಿದೆ.







ಸವಣೂರಿನ ಸುಂದರ ರೈ ಮತ್ತು ಸಹೋದರರು 7.270 ಗ್ರಾಂ, ಯಂ ರವಿಶಂಕರ್ ಎಕ್ಕೂರು, ಮಂಗಳೂರು ಇವರಿಂದ 11.505 ಗ್ರಾಂ, ದಿ| ಗಿರಿಜಾ ವೆಂಕಟಪ್ಪ ಹೆಗ್ಡೆ ಉರ್ಲಾಂಡಿ ಸ್ಮರಣಾರ್ಥ 1.020 ಗ್ರಾಂ, ಹರೀಶ್ ಪವಿತ್ರ ಕೋಲ್ಪೆ ಇವರಿಂದ 2.041 ಗ್ರಾಂ, ಶ್ರೀಕೃಷ್ಣ ಭಟ್ ಕಬ್ಬಿನಹಿತ್ಲು ಬಲ್ನಾಡು ಇವರಿಂದ 0.321 ಗ್ರಾಂ, ಗೋಪಾಲಕೃಷ್ಣ ಭಟ್ ನೆಹರುನಗರ ಇವರಿಂದ 0.724 ಗ್ರಾಂ ಸ್ವರ್ಣ ಸಮರ್ಪಣೆ ಮಾಡಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ದಾನಿಗಳನ್ನು ಗೌರವಿಸಿದರು. ಪ್ರಧಾನ ಅರ್ಚಕರು ಪ್ರಸಾದ ನೀಡಿದರು.













