ಕರ್ನಾಟಕ ಸಾವಯುವ ಕೃಷಿ ಯೋಜನೆ : ಜಿಲ್ಲಾ ಮಟ್ಟದ ಅತ್ಯುತ್ತಮ ಕೃಷಿಕ ಪ್ರಶಸ್ತಿಗೆ ಪುತ್ತೂರು, ಬಂಟ್ವಾಳ ತಾಲೂಕಿನ 30 ಪ್ರಗತಿ ಪರ  ಕೃಷಿಕರ ಆಯ್ಕೆ

0

ಸೆ. 21 ರಂದು ಬಿ.ಸಿ ರೋಡಿನಲ್ಲಿ ಪ್ರಶಸ್ತಿ ಪ್ರದಾನ

 ವಿಟ್ಲ: ಕರ್ನಾಟಕ ಸಾವಯುವ ಕೃಷಿ ಯೋಜನೆ ಮಂಗಳ ಸಮೃದ್ಧಿ ವಿಭಾಗ  ಇದರ 2026-27 ನೇ ಸಾಲಿನ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಒಳಗೊಂಡ ಮಂಗಳೂರು ವಿಭಾಗ ಮಟ್ಟದಲ್ಲಿ ನೀಡಲಾಗುವ  ಜಿಲ್ಲಾ ಮಟ್ಟದ ಅತ್ಯುತ್ತಮ ಪ್ರಗತಿ ಪರ ಸಾವಯುವ ಕೃಷಿಕ ಪ್ರಶಸ್ತಿಗೆ ಬಂಟ್ವಾಳ ಹಾಗೂ ಪುತ್ತೂರು ತಾಲೂಕಿನ 30 ಕೃಷಿಕರ ಸಹಿತ ಒಟ್ಟು 165  ಆಯ್ಕೆಯಾಗಿದ್ದಾರೆ. 

 ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಬಡೆಕ್ಕಿಲ ಸುಬ್ರಹ್ಮಣ್ಯ ಭಟ್, ಬಡೆಕ್ಕಿಲ ಬಿ. ಚಂದ್ರಶೇಖರ ಭಟ್, ಬಡೆಕ್ಕಿಲ್ಲ ಸುಬ್ಬಣ್ಣ ಭಟ್,  ಕೆದಿಲ ಗ್ರಾಮದ ಮುದ್ರಾಜೆ ಮಹಾಲಿಂಗ ನಾಯ್ಕ , ಜಿ. ಮಹಮ್ಮದ್ ಗಾಂಧಿನಗರ, ಪೆರಾಜೆ  ಗ್ರಾಮದ ಪಾಣೋರು ಆನಂದ ಶೆಟ್ಟಿ, ಪೆರಾಜೆ ಗ್ರಾಮದ ಮಂಜೋಟಿ ಸುಂದರಗೌಡ,  ಪೆರಾಜೆ ಗ್ರಾಮ ಮಂಜೋಟಿ ಕೃಷ್ಣ ಗೌಡ, ಪೆರಾಜೆ ಗ್ರಾಮದ ಮುಗ್ರೋಡಿ ಪಾಲು ಮುತ್ತಪ್ಪ ನಾಯ್ಕ,  ಬಾಳ್ತಿಲ ಗ್ರಾಮದ ರಾಘವೇಂದ್ರ ನಾಯಕ್ ಕಂಪನಕೋಡಿ,  ಪುಣಚ ಗ್ರಾಮದ ಮಾಯಿಲಮೂಲೆ ಜಗದೀಶ್ ನಾಯ್ಕ, ಪುತ್ತೂರು ತಾಲೂಕಿನ ಪಡ್ನೂರು ಗ್ರಾಮದ ಎರ್ಮುಂಜಪಲ್ಲ ವಸಂತಗೌಡ, ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ವಿ.ಪರಮೇಶ್ವರ ನಾವಡ್ಕ, ಇಡ್ಕಿದು ಗ್ರಾಮದ ಅಮ್ಮಣ್ಣಿ, ಪೆರಾಜೆ ಗ್ರಾಮದ ರಾಮಣ್ಣ ಗೌಡ,

ಇಡ್ಕಿದು ಗ್ರಾಮದ ಗೋಪಾಲಕೃಷ್ಣ ಭಟ್, ತಿರುಮಲೇಶ್ವರ ಭಟ್, ಕೇಶವ ಭಟ್, ಅಬ್ದುಲ್ ಖಾದರ್, ವೆಲೇರಿಯನ್ ಡಿಸೋಜ, ಫ್ಲೋರಿನ ಡಿಸೋಜ, ಯವರೆಸ್ಟ್ ಡಿಸೋಜ, ಸಾದಿಕ್ ಅಕ್ಕರೆ,  ನಾರಾಯಣ ಭಟ್, ಜಯಂತ್ ಗೌಡ, ಇಸ್ಮಾಯಿಲ್, ಈಶ್ವರಭಟ್ , ನೆಟ್ಲ ಮುಡ್ನೂರು ಗ್ರಾಮದ ಗಂಗಯ್ಯ ಪೂಜಾರಿ ,   ವಸಂತರಾಜ್ ಭಟ್,  ವೆಂಕಪ್ಪ ರೈ ಕುರ್ಲೆತ್ತಿಮಾರ್ ಆಯ್ಕೆಯಾಗಿದ್ದಾರೆ.

 ಸೆ. 21 ರಂದು ಬಿ.ಸಿ ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯುವ  ಸಮಾರಂಭದಲ್ಲಿ ಕರ್ನಾಟಕ ಸಾವಯುವ  ಕೃಷಿ ಯೋಜನೆಯ ಆಡಳಿತ ನಿರ್ದೇಶಕ ಮೋಹನ್ ಗೌಡ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದ ಕಾರ್ಯಕ್ರಮದಲ್ಲಿ ಶ್ರೀ ಧಾಮ ಮಾಣಿಲದಲ್ಲಿ ಶ್ರೀ ದುರ್ಗಾಮಹಾಲಕ್ಷ್ಮಿ ಕ್ಷೇತ್ರದ ಶ್ರೀ ಮೋಹನದಾಸ ಸ್ವಾಮೀಜಿಯವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ, ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆಎಂದು ಕರ್ನಾಟಕ ಸಾವಯುವ ಕೃಷಿ ಯೋಜನೆಯ ಆಡಳಿತ ನಿರ್ದೇಶಕ ಮೋಹನ್ ಕುಮಾರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here