







ಪುತ್ತೂರು: ಎಪಿಎಂಸಿ ರಸ್ತೆಯ ತ್ರಿನೇತ್ರ ಕಾಂಪ್ಲೆಕ್ಸ್ನಲ್ಲಿ ವ್ಯವಹರಿಸುತ್ತಿರುವ ವೀರ ಮಾಚಿದೇವ ವಿವಿಧೋದ್ದೇಶ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.20ರಂದು ಸಂಘದ ಕಟ್ಟಡ ಮೇಲ್ಮಹಡಿಯಲ್ಲಿ ನಡೆಯಿತು.


ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಇಂದುಶೇಖರ್ ಪಿ.ಬಿ ಮಾತನಾಡಿ, ಸಂಘದಲ್ಲಿ ವರ್ಷಾಂತ್ಯಕ್ಕೆ 5,546 ಸದಸ್ಯರಿಂದ ರೂ.46,58,450 ಪಾಲು ಬಂಡವಾಳ, ರೂ.8,87,74,383.35ವಿವಿಧ ಠೇವಣಿ, ರೂ.1,84,73,345.67ನ್ನು ವಿವಿಧ ಸಹಕಾರ ಸಂಘಗಳಲ್ಲಿ ಧನ ವಿನಿಯೋಗಿಸಲಾಗಿದೆ. ರೂ.7,37,08,004ನ್ನು ಸದಸ್ಯರಿಗೆ ವಿವಿಧ ರೂಪದಲ್ಲಿ ಸಾಲ ವಿತರಿಸಲಾಗಿದೆ. ಶೇ.85 ಸಾಲ ವಸೂಲಾತಿ ಮಾಡಲಾಗಿದ್ದು ವರದಿ ಸಾಲಿನಲ್ಲಿ ಸಂಘವು ರೂ.3,76,715.31 ಲಾಭ ಗಳಿಸಿದೆ. ಲಾಭಾಂಶವನ್ನು ಸಂಘದ ಉಪ ನಿಬಂಧನೆಯಂತೆ ವಿಂಗಡಿಸಲಾಗಿದೆ ಎಂದು ಹೇಳಿದರು.



ಡಿವಿಡೆಂಡ್ ಕಟ್ಟಡ ನಿಧಿಗೆ;
ಈ ಸಾಲಿನ ಡಿವಿಡೆಂಡ್‌ನ ಮೊತ್ತವನ್ನು ಕಟ್ಟಡ ನಿಧಿಗೆ ವರ್ಗಾಯಿಸಲು ಮಹಾಸಭೆಯು ಅನುಮೋದನೆ ನೀಡಿತು. ಅಲ್ಲದೆ ಕಟ್ಟಡ ನಿಧಿಗೆ ದೇಣಿಗೆ ನೀಡುವ ಬಗ್ಗೆ ಸಭೆಯಲ್ಲಿ ಹಲವು ಮಂದಿ ಸದಸ್ಯರು ವಾಗ್ದಾನ ಮಾಡಿದರು.
ಪ್ರತಿಭಾ ಪುರಸ್ಕಾರ:
ವರದಿ ಸಾಲಿನ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿ ತರಗತಿಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಉಪಾಧ್ಯಕ್ಷ ಪಿ.ಎಸ್ ಸುಭಾಶ್ಚಂದ್ರ, ಸುಬ್ಬಣ್ಣ ನೂಜಿ, ಬಾಬು ಎಚ್., ಜಯಂತ ಮುಂಡಾಜೆ, ಸುರೇಶ್ ಬೈಂದೂರು, ಶೋಭಾ ಸೀತಾರಾಮ, ಡಾ.ಯಾದವಿ ಜಯಕುಮಾರ್, ಜಯಂತ ಬೇಕಲ್, ಈಶ್ವರ ಡಿ ವಿಟ್ಲ ಹಾಗೂ ಪ್ರಭಾಕರ ಡಿ.ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವರ್ಷ ಅಳಿಕೆ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ಇಂದುಶೇಖರ್ ಪಿ.ಬಿ. ಸ್ವಾಗತಿಸಿದರು. ಶಾಖಾ ವ್ಯವಸ್ಥಾಪಕಿ ಜಯಂತಿ ಭಾಸ್ಕರ ವರದಿ ಹಾಗೂ ಆಯ-ವ್ಯಯಗಳನ್ನು ಮಂಡಿಸಿದರು. ಕಲ್ಲಡ್ಕ ಶಾಖೆಯ ದೀಕ್ಷಿತ್ ಕುಮಾರ್ ವಂದಿಸಿದರು. ಉಜಿರೆ ಶಾಖೆಯ ವ್ಯವಸ್ಥಾಪಕ ಯೋಗೀಶ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನೆರವೇರಿತು.
ಸಮಾಜ ಬಾಂಧವರ ಆರ್ಥಿಕ ಬೆಳವಣಿಗೆಗಾಗಿ ಸಹಕಾರಿ ಸಂಘವನ್ನು ಸ್ಥಾಪಿಸಲಾಗಿದೆ. ಸಂಘದ ಸದಸ್ಯರು, ಸಮಾಜ ಬಾಂಧವರು ಸಂಘದ ಮುಖಾಂತರ ವ್ಯವಹಾರ ಮಾಡಿದಾಗ ಸಂಘವು ಅಭಿವೃದ್ಧಿಯತ್ತ ಸಾಗಲಿದೆ. ಹೀಗಾಗಿ ಸದಸ್ಯರು ಸಂಘದ ಮೂಲಕವೇ ಹೆಚ್ಚಿನ ವ್ಯವಹಾರ ನಡೆಸಿ ಸಂಘದ ಜೊತೆಗೆ ಸಹಕರಿಸಿಬೇಕು. ಈ ವರ್ಷ ಸಂಘದ ಕೇಂದ್ರ ಕಚೇರಿಗೆ ಸ್ವಂತ ಕಚೇರಿ ಖರೀದಿಸಿ, ಅಲ್ಲಿಗೆ ಸ್ಥಳಾಂತರಗೊಳಿಸಿರುವುದರಿಂದ ಸಂಘದ ಲಾಭಾಂಶ ಗಳಿಕೆಯಲ್ಲಿ ಕಡಿಮೆಯಾಗಿದೆ.
-ಇಂದುಶೇಖರ್ ಪಿ.ಬಿ. ಅಧ್ಯಕ್ಷರು










