ಬಯಲು ಕೆಮ್ಮಿಂಜೆ ಶ್ರೀ ಶಿರಾಡಿ ರಾಜನ್ ದೈವಸ್ಥಾನದ ಜೀರ್ಣೋದ್ಧಾರ, ಪ್ರಶ್ನೆ ಚಿಂತನೆ, ಬ್ರಹ್ಮಕಲಶ, ನೇಮೋತ್ಸಕ್ಕೆ ಗ್ರಾಮಸ್ಥರ ಸಭೆ

0


ಪುತ್ತೂರು: ಬಯಲು ಕೆಮ್ಮಿಂಜೆ ಶ್ರೀ ಶಿರಾಡಿ ರಾಜನ್ ದೈವಸ್ಥಾನ ಸೇವಾ ಟ್ರಸ್ಟ್‌ವತಿಯಿಂದ ದೈವಸ್ಥಾನದ ಜೀರ್ಣೋದ್ಧಾರ, ಪ್ರಶ್ನೆ ಚಿಂತನೆ, ಬ್ರಹ್ಮಕಲಶ ಮತ್ತು ನೇಮೋತ್ಸವದ ಕುರಿತು ಗ್ರಾಮಸ್ಥರ ಸಭೆಯು ಸೆ.20ರಂದು ದೈವಸ್ಥಾನದ ವಠಾರದಲ್ಲಿ ನಡೆಯಿತು.


ಕ್ಷೇತ್ರದ ತಂತ್ರಿಯಾದ ಸುಬ್ರಹ್ಮಣ್ಯ ಬಳ್ಳುಕ್ಕುರಾಯ ಅವರ ಉಪಸ್ಥಿತಿಯಲ್ಲಿ ಟ್ರಸ್ಟಿನ ಅಧ್ಯಕ್ಷ ಶ್ರೀಧರ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಕ್ಷೇತ್ರದಲ್ಲಿ ನಡೆಯಬೇಕಾದ ಜೀರ್ಣೋದ್ಧಾರ ಮತ್ತು ಅದಕ್ಕೆ ಪೂರ್ವಭಾವಿಯಾಗಿ ನಡೆಯುವ ಪ್ರಶ್ನಾ ಚಿಂತನೆಯ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಉಪಸ್ಥಿತರಿದ್ದ ಶಿವಾನಂದ ಮರೀಲು, ಗೋಪಾಲಕೃಷ್ಣ ಭಟ್ ಮರೀಲು, ಕಾಂತಪ್ಪ ನಾಯ್ಕ್, ಯೋಗೀಶ್ ದೇವಾಡಿಗ, ಚಂದ್ರಶೇಖರ ಮಾಸ್ಟ್ರು, ತಮ್ಮಪ್ಪ ಗೌಡ, ಚಂದ್ರಶೇಖರ ಗೌಡ, ಸುರೇಶ್ ಬಾಚು, ಉಪೇಂದ್ರ ಬಲ್ಯಾಯ, ವೀಣಾ ಜೆ ರಾವ್, ಲೋಕನಾಥ್, ಲೋಕೇಶ್ ಮುಕ್ರಂಪಾಡಿ, ಅರುಣಾ ರಾಜೇಂದ, ಪೂವಪ್ಪ ದೇವಾಡಿಗ, ಸೂರಪ್ಪ ಗೌಡ, ಸಂಜೀವ ಗೌಡ ದುರ್ಗಾನಗರ, ಜಯರಾಮ ಗೌಡ ದುರ್ಗಾನಗರ, ಸತೀಶ್ ಸಪಲ್ಯ ಸಂಜಯನಗರ, ಮೋಹನ್ ಆಚಾರ್ಯ ಕಾಡುಮನೆ, ಬಿಕೆ ದೇವಪ್ಪ ಗೌಡ, ರಾಜೇಶ್ ಕೆ ಪಳಿಕೆ, ಸುರೇಶ್ ದೇವಾಡಿಗ, ದಿನೇಶ್ ದೇವಾಡಿಗ, ತನಿಯಪ್ಪ ನಾಯ್ಕ್, ಉದಯ ಸಂಜಯನಗರ, ರಾಜೇಂದ್ರ ಸಂಜಯನಗರ, ಸೀತಾ ದೇವಾಡಿಗ, ಸುಬ್ರಮಣ್ಯ ಬಳ್ಳಕ್ಕುರಾಯ, ಗಣೇಶ್ ದೇವಾಡಿಗ, ಸುನಿಲ್ ದುರ್ಗಾನಗರ, ತಮ್ಮಪ್ಪ ಗೌಡ, ಪ್ರಮೀಳಾ ಟೀಚರ್, ಗಣೇಶ್ ದೇವಾಡಿಗ, ದೀನೇಶ್ ದೇವಾಡಿಗ, ವಿಶ್ವನಾಥ ಪಂಚಮಿ ಶಾಮಿಯಾನ ಸಹಿತ ಹಲವಾರು ಮಂದಿ ಹಣ ಮತ್ತು ವಸ್ತು ರೂಪದಲ್ಲಿ ಕಾರ್ಯಕ್ರಮಕ್ಕೆ ನೀಡುವುದಾಗಿ ಭರವಸೆ ನೀಡಿದರು.


ಅ.25ಕ್ಕೆ ಪ್ರಶ್ನಾ ಚಿಂತನೆ
ಸಭೆಯಲ್ಲಿ ಅ.25ರಂದು ಪ್ರಶ್ನೆ ಚಿಂತನೆ ಮಾಡುವ ಕುರಿತು ನಿರ್ಣಯಿಸಲಾಗಿದೆ. ಪ್ರಶ್ನಾ ಚಿಂತನೆಯ ಖರ್ಚಿನ ಬಗ್ಗೆ ಚರ್ಚಿಸಿದಾಗ ಹಲವಾರು ಭಕ್ತರು ಧನ ಸಹಾಯ ನೀಡುವ ಭರವಸೆ ನೀಡಿದ್ದಾರೆ. ಕೆಲವರು ವಸ್ತು ರೂಪದಲ್ಲೂ ಸಹಕರಿಸುವ ಭರವಸೆ ನೀಡಿದ್ದಾರೆ. ವಸ್ತುರೂಪದಲ್ಲಿ ದಾನಿಗಳು ಅ.22ರ ಮುಂಚಿತವಾಗಿ ತಮ್ಮ ಸಹಾಯವನ್ನು ನೀಡಿ ಸಹಕರಿಸುವಂತೆ ವಿನಂತಿ. ಟ್ರಸ್ಟಿನ ಅಧಿಕೃತ ಖಾತೆ ಇನ್ನೂ ಆಗದ ಹಿನ್ನೆಲೆಯಲ್ಲಿ ಸದ್ಯ ಧನಸಹಾಯ ನೀಡುವವರು ಕೋಶಾಧಿಕಾರಿ ಸುನಿಲ್ ಕುಮಾರ್ ಅವರ ಖಾತೆಗೆ (9743099914) ಹಾಕಬಹುದು.
ಶ್ರೀಧರ ಹೆಗ್ಡೆ ಅಧ್ಯಕ್ಷರು ಶ್ರೀ ಶಿರಾಡಿ ರಾಜನ್ ದೈವಸ್ಥಾನ ಟ್ರಸ್ಟ್

LEAVE A REPLY

Please enter your comment!
Please enter your name here