







ಪುತ್ತೂರು: ಬೇಕರಿ ಉದ್ಯಮದಲ್ಲಿ ಸುಮಾರು 20 ವರ್ಷಗಳಿಂದ ಪುತ್ತೂರಿನಲ್ಲಿ ಅನುಭವ ಮತ್ತು ಗ್ರಾಹಕರಿಗೆ ಸಿಹಿ ಉಣಬಡಿಸುತ್ತಿರುವ ಶ್ರೀ ವೆಂಕಟೇಶ್ವರ ಅಯ್ಯಂಗಾರ್ ಬೇಕರಿ ಸ್ಥಳಾಂತರಗೊಂಡು ಬೊಳುವಾರಿನ ರಿಲಯನ್ಸ್ ಮಾರ್ಟ್ ಬಳಿಯ ಆಕ್ಸಿಸ್ ಬ್ಯಾಂಕ್ ಎದುರು ಸೆ.21ರಂದು ಶುಭಾರಂಗೊಂಡಿತು.


ಬೆಳಿಗ್ಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೂತನ ಬೇಕರಿ ಸಂಸ್ಥೆಯನ್ನು ಉದ್ಘಾಟಿಸಲಾಯಿತು. ಪುರೋಹಿತ ಹರೀಶ್ ಶರ್ಮ ಅವರ ಪೌರೋಹಿತ್ವದಲ್ಲಿ ಗಣಪತಿ ಹೋಮ ನಡೆಯಿತು. ಬಳಿಕ ನಿವೃತ್ತ ಶಿಕ್ಷಕ ಶ್ರೀನಿವಾಸ ಅವರು ಸಂಸ್ಥೆಯನ್ನು ಉದ್ಘಾಟಿಸಿದರು. ಈ ಸಂದರ್ಭ ಸಂಸ್ಥೆಯ ಮಾಲಕ ಮಧುಸೂಧನ್ ಸಹಿತ ಮನೆ ಮಂದಿ ಸ್ಥಳೀಯರು ಉಪಸ್ಥಿತರಿದ್ದರು.




ಸಂಸ್ಥೆಯಲ್ಲಿ ಶುಚಿ ರುಚಿಯ ಖಾರ, ಸಿಹಿ ತಿಂಡಿಗಳು ಸಹಿತ ವಿವಧ ಸಮಾರಂಭಗಳಿಗೆ ಬೇಕಾಗುವ ತಿಂಡಿಗಳನ್ನು ತಯಾರಿಸಿಕೊಡಲಾಗುವುದು ಎಂದು ಸಂಸ್ಥೆಯ ಮಾಲಕ ಮಧುಸೂಧನ್ ಅವರು ತಿಳಿಸಿದ್ದಾರೆ. ನಮ್ಮನ್ನು ಮೊ:9449102387 ಅನ್ನು ಸಂಪರ್ಕಿಸುವಂತೆ ವಿನಂತಿಸಿದ್ದಾರೆ.
ಶುಭಾರಂಭದ ದಿನ ಆಲು ಬನ್, ಪಫ್ಸ್, ಮಸಾಲ ಬನ್, ಸ್ಯಾಂಡ್ವಿಚ್, ಬರ್ಗರ್, ವೆಜ್ ಪಫ್ಸ್, ಕ್ರೀಂ ಬನ್, ಜಾಂ ಬನ್ ಅನ್ನು ಕೇವಲ 10 ರೂಪಾಯಿಗೆ ನೀಡಲಾಯಿತು. ಗ್ರಾಹಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ರಿಯಾಯಿತಿ ದರವನ್ನು ಸದುಪಯೋಗ ಪಡಿಸಿಕೊಂಡರು.










