







ಪುತ್ತೂರು : ಬೆಂಗಳೂರಿನ ದೊಡ್ಡಕಲ್ಲಸಂದ್ರದ ಮೀನಾಕ್ಷಿ ರಂಗಮಂಚದಲ್ಲಿ ಭಾನುವಾರ ನಡೆದ ರಸಾರಾಧನಂ ಕಾರ್ಯಕ್ರಮದಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದೆ ನಿರುಪಮಾ ರಾಜೇಂದ್ರ ಅವರ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನ ನಡೆಯಿತು.


ಪದ್ಮಭೂಷಣ ಶತಾವಧಾನಿ ಡಾ.ಆರ್.ಗಣೇಶ್ ಅವರ ಕೃತಿಗಳಿಗೆ ನಿರುಪಮಾ ರಾಜೇಂದ್ರ ಅವರು ತಮ್ಮ ಅಭಿನವ ಡ್ಯಾನ್ಸ್ ಕಂಪನಿ ವತಿಯಿಂದ ನೃತ್ಯ ಗೌರವ ಸಲ್ಲಿಸಿದರು. ಶಿವನ ಒಲೈಕೆಗಾಗಿ ಪಾರ್ವತಿಯ ತಪಸ್ಸು, ಅರ್ಧನಾರೀಶ್ವರ, ಹರಿಹರರ ಅಭೇದ, ಕಾಳಿಂಗ ಮರ್ದನ, ದೌತ್ಯ ದೀಕ್ಷಿತೆ ಸೇರಿದಂತೆ ವಿವಿಧ ಕೃತಿಗಳನ್ನು ಅವರು ಅಭಿನಯಿಸಿದರು.




ನಂತರ ನಡೆದ ಗೌರವ ಸಮಾರಂಭದಲ್ಲಿ ಡಾ.ಆರ್.ಗಣೇಶ್ ಅವರು ನಿರುಪಮಾ ರಾಜೇಂದ್ರ ದಂಪತಿಯನ್ನು ಗೌರವಿಸಿದರು. ಕಾರ್ಯಕ್ರಮದಲ್ಲಿ ಸಂಗೀತ ವಿದುಷಿ ಎಂ.ಎಸ್.ಶೀಲಾ, ಕುಮಾರನ್ ಸಮೂಹ ಸಂಸ್ಥೆಗಳ ಮುಖ್ಯಸ್ಥೆ ದೀಪಾ ಶ್ರೀಧರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹಿನ್ನೆಲೆಯಲ್ಲಿ ರಘುರಾಮ್ ರಾಜಗೋಪಾಲನ್ ಗಾಯನ, ಮಹೇಶ್ ಸ್ವಾಮಿ ಕೊಳಲು, ಪ್ರಶಾಂತ್ ರುದ್ರಪಟ್ಟಣ ವೀಣೆ, ಶ್ರೀನಿಧಿ ಮಾಥುರ್ ವಯೋಲಿನ್, ಪ್ರಸನ್ನಕುಮಾರ್ ತಾಳವಾದ್ಯ ಮತ್ತು ನಟುವಾಂಗ, ವಿದ್ಯಾಶಂಕರ್ ಮೃದಂಗದಲ್ಲಿ ಸಾಥ್ ನೀಡಿದರು.










