







ಪುತ್ತೂರು: ಪುತ್ತೂರು ಸುದ್ದಿ ಬಿಡುಗಡೆ ದಿನಪತ್ರಿಕೆಯ ದೀಪಾವಳಿ ವಿಶೇಷಾಂಕ 2026 ರ ಮುಖಪುಟದ ರೂಪದರ್ಶಿ ಆಗುವ ಅವಕಾಶವನ್ನು ಓದುಗರಿಗೆ ನೀಡಲಾಗಿದೆ.


“ಹಣತೆಯ ಬೆಳಕು ಸಾಹಿತ್ಯದ ಹೊಳಪು” ಶೀರ್ಷಿಕೆಯಲ್ಲಿ ಮೂಡಿಬರುತ್ತಿರುವ ಈ ಬಾರಿಯ ವರ್ಣರಂಜಿತ ದೀಪಾವಳಿ ಸಂಚಿಕೆಯ ಮುಖಪುಟದಲ್ಲಿ ಕಾಣಿಸಿಕೊಳ್ಳಲು ಸಾಂಪ್ರದಾಯಿಕ ಉಡುಗೆಯಲ್ಲಿ ಹಣತೆಯೊಂದಿಗೆ ದೀಪಾವಳಿ ಹಬ್ಬಕ್ಕೆ ಸಂಬಂಧಿಸಿದ ಆಕರ್ಷಕ ಫೋಟೋವನ್ನು ಆಹ್ವಾನಿಸಲಾಗಿದೆ.



ಆಸಕ್ತರು ತಮ್ಮ ಫೋಟೋಗಳನ್ನು ವಾಟ್ಸಾಪ್ ಡಾಕ್ಯುಮೆಂಟ್ ಮೂಲಕ ಅಥವಾ ಇ-ಮೇಲ್ ಮೂಲಕ ಕಳುಹಿಸಬಹುದು. ಒಬ್ಬರು ಗರಿಷ್ಠ ಮೂರು ವಿಭಿನ್ನ ವಿನ್ಯಾಸದ ಫೋಟೋಗಳನ್ನು ಕಳುಹಿಸಬಹುದು. AI ನಿಂದ ರಚಿಸಿದ ಹಾಗೂ ಎಡಿಟ್ ಮಾಡಿದ ಫೋಟೋಗಳನ್ನು ಪರಿಗಣಿಸಲಾಗುವುದಿಲ್ಲ.ಅಕ್ಟೋಬರ್ 10ರಂದು ಫೋಟೋ ಕಳುಹಿಸಲು ಅಂತಿಮ ದಿನವಾಗಿದ್ದು, ಇ-ಮೇಲ್: [email protected], ವಾಟ್ಸಾಪ್: 7829668949 ಮೂಲಕ ಕಳುಹಿಸಿಕೊಡಬಹುದು. ಪುತ್ತೂರು ತಾಲೂಕಿನವರು ಹಾಗೂ ಪರವೂರಿನಲ್ಲಿರುವ ಪುತ್ತೂರಿನವರಿಗೆ ಆದ್ಯತೆ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.










