ಆಲಂಕಾರು ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ಕಬ್ಬಡಿ ಪಟುಗಳು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ

0

ಆಲಂಕಾರು: ಶಿಕ್ಷಣ ಇಲಾಖೆ ಯ 14ರ ವಯೋಮಾನದ ಬಾಲಕಿಯರ ದ.ಕ ಜಿಲ್ಲಾ ಮಟ್ಟದ ಕಬ್ಬಡಿ ಪಂದ್ಯಾಟವು ಬೆಳ್ತಂಗಡಿ ತಾಲ್ಲೂಕಿನ ಬಡಗಕಾರಂದೂರು ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಪುತ್ತೂರು ತಾಲೂಕನ್ನು ಪ್ರತಿನಿಧಿಸಿದ ಆಲಂಕಾರು ಭಾರತಿ ಹಿರಿಯ ಪ್ರಾಥಮಿಕ ಶಾಲೆಯ 5 ಕಬಡ್ಡಿ ಪಟುಗಳನ್ನು ಒಳಗೊಂಡ ತಂಡ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು,ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ. ತಂಡಲ್ಲಿದ್ದ ದಿಶಾ ಕೋಡಂದೂರು (ಚಾರ್ವಕ ಗ್ರಾಮದ ದಿ.ದಾಮೋದರ ಗೌಡ ಮತ್ತು ದೇವಿಕಾ ದಂಪತಿ ಪುತ್ರಿ ) ಉತ್ತಮ ಹಿಡಿತಗಾರ್ತಿ ಜ್ಞಾನವಿ ಮಾಪಲ (ಕುಂತೂರು ಮಾಪಲದ ಪುಷ್ಪ ಆನಂದ ಗೌಡರ ಪುತ್ರಿ ), ಪ್ರಾಪ್ತ ಕಜೆ (ಆಲಂಕಾರು ಮತ್ತು ಲತಾಕ್ಷಿ ಜಯಂತ ಕುಮಾರ್ ಪೂಜಾರಿಯ ಪುತ್ರಿ ) ಮೈಸೂರು ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡಿರುತ್ತಾರೆ.

ಉಳಿದಂತೆ ಜಿಲ್ಲಾ ಮಟ್ಟದಲ್ಲಿ ಕು.ಮಾನ್ವಿ ಆರ್ ಪೂಂಜ (ಪೆರಾಬೆ ಪೂಂಜ ಮತ್ತು ಶ್ರುತಿ ರಾಜೇಂದ್ರ ರ ಪುತ್ರಿ ),ಸಾಥ್ವಿ ಆರ್.ರೈ ಸುರುಳಿ (ಪೆರಾಬೆ ಗ್ರಾಮದ ಸುರುಳಿ ಮತ್ತು ಮಮತ ರಮೇಶ್ ರೈ ರವರ ಪುತ್ರಿ ) ಪುತ್ತೂರು ತಂಡವನ್ನು ಪ್ರತಿನಿಧಿಸಿದ್ದರು.

ಇವರಿಗೆ ಶಾಲಾ ಆಡಳಿತ ಮಂಡಳಿಯ ಪೂರ್ಣ ಸಹಕಾರದೊಂದಿಗೆ ಆಶಾ ಎಸ್.ರೈ ರವರ ಮಾರ್ಗದರ್ಶನದೊಂದಿಗೆ, ದೈಹಿಕ ಶಿಕ್ಷಕ ಯೋಗೀಶ್ ಮಾಪಲ ಮತ್ತು ಶಿಕ್ಷಕ ಮತ್ತು ತರಬೇತುದಾರ ಚಂದ್ರಹಾಸ ಕೆ.ಸಿ ಕುಂಟ್ಯಾನ ತರಬೇತಿ ನೀಡಿರುತ್ತಾರೆ. ಪಾಲಕರ ವೃಂದ ಮತ್ತು ಮಾತಾಜಿ ವೃಂದದವರು ಸಹಕರಿಸಿರುತ್ತಾರೆ.

LEAVE A REPLY

Please enter your comment!
Please enter your name here