ದ.ಕ.ಜಿಲ್ಲಾ ಕೃಷಿ ಕಾರ್ಮಿಕರ ಸಹಕಾರಿ ಸಂಘ ನಿಯಮಿತ ವಾರ್ಷಿಕ ಮಹಾಸಭೆ

0

ಪುತ್ತೂರು: ದ.ಕ.ಜಿಲ್ಲಾ ಕೃಷಿ ಕಾರ್ಮಿಕರ ಸಹಕಾರಿ ಸಂಘ ನಿಯಮಿತದ ವಾರ್ಷಿಕ ಮಹಾಸಭೆಯು ಸೆ.20ರಂದು ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಇ.ಎಸ್.ವಾಸುದೇವ ಇಡ್ಯಾಡಿ ಅವರು ಮಾತನಾಡಿ, ಎಲ್ಲಾ ನಿರ್ದೇಶಕರ ಹಾಗೂ ಗ್ರಾಹಕರ ,ಸಿಬ್ಬಂದಿಗಳ ಸಹಕಾರದಲ್ಲಿ ಸಂಘವನ್ನು ಯಶಸ್ವಿನತ್ತ ಕೊಂಡೊಯ್ಯಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದರು.

ಸಂಘದ ವರದಿಯನ್ನು ಕಾರ್ಯದರ್ಶಿ ಶ್ರೀದೇವಿ ಸಿ ಎಚ್ ಮಂಡಿಸಿದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಡಿ.ಚೆನ್ನಪ್ಪ ಗೌಡ ,ನಿರ್ದೇಶಕರಾದ ಚಂದ್ರಹಾಸ ರೈ ಕೆ.,ಗಣೇಶ್ ಹೆಗ್ಡೆ, ಕೇಶವ ಸುವರ್ಣ ಪಿ.,ಹರ್ಷೇಂದ್ರ ಕುಮಾರ್ ಜೈನ್, ಜಗದೀಶ್ ಶೆಟ್ಟಿ, ಫಾತಿಮಾ,ಲತಾ ಆನಂದ ಉಪಸ್ಥಿತರಿದ್ದರು.

ಸಂಘದ ಸದಸ್ಯರು ಅಭಿವೃದ್ಧಿ ಕುರಿತು ವಿವಿಧ ಸಲಹೆ ಸೂಚನೆಗಳನ್ನು ತಿಳಿಸಿದರು. ಸಂಘದ ಅಧ್ಯಕ್ಷರಾದ ಇ.ಎಸ್.ವಾಸುದೇವ ಇಡ್ಯಾಡಿ ಸ್ವಾಗತಿಸಿದರು. ನಿರ್ದೇಶಕ ಗಣೇಶ್ ಹೆಗ್ಡೆ ಅವರು ವಂದಿಸಿದರು.

ಸೆ.25ರಂದು ನೂತನ ಕಾರ್ಯಾಲಯ ಪ್ರವೇಶ
ಪ್ರಸ್ತುತ ಏಳ್ಮುಡಿ ಭಟ್ ಬಿಲ್ಡಿಂಗ್‌ನಲ್ಲಿ ಕಾರ್ಯಾಚರಿಸುತ್ತಿರುವ ಸಂಘದ ಮುಖ್ಯಕಚೇರಿಯನ್ನು ಗ್ರಾಹಕರ ಹಾಗೂ ಸದಸ್ಯರ ಅನುಕೂಲತೆಗಾಗಿ ಎಪಿಎಂಸಿ ರಸ್ತೆಯಲ್ಲಿರುವ ಲಿಲ್ಲಿ ಕಾಂಪ್ಲೆಕ್ಸ್‌ನ ಪ್ರಥಮ ಮಹಡಿಗೆ ಸ್ಥಳಾಂತರಗೊಂಡು ಸೆ.25ರಂದು ಗಣಪತಿ ಹೋಮ ಹಾಗೂ ಲಕ್ಷ್ಮೀ ಪೂಜೆಯೊಂದಿಗೆ ಕಚೇರಿ ಕಾರ್ಯಾಲಯ ಪ್ರವೇಶ ನಡೆಯಲಿದೆ.
ಇ.ಎಸ್.ವಾಸುದೇವ ಇಡ್ಯಾಡಿ ಅಧ್ಯಕ್ಷರು

ಇ.ಎಸ್.ವಾಸುದೇವ ಇಡ್ಯಾಡಿ ಅಧ್ಯಕ್ಷರು

LEAVE A REPLY

Please enter your comment!
Please enter your name here