ಡಾ. ಹರಿಕೃಷ್ಣ ಪಾಣಾಜೆಗೆ “ಆಯುರ್ಭೂಷಣ” ಪ್ರಶಸ್ತಿ

0

ಪುತ್ತೂರು: ಆಯುರ್ವೇದ, ಔಷಧ ಸಂಶೋಧನೆ, ಉದ್ಯಮಶೀಲತೆ ಮತ್ತು ಕಲೆ-ಸಂಸ್ಕೃತಿ ಕ್ಷೇತ್ರದ ಕೊಡುಗೆಗಾಗಿ ಪುತ್ತೂರಿನ ಖ್ಯಾತ ಆಯುರ್ವೇದ ವೈದ್ಯ ಡಾ. ಹರಿಕೃಷ್ಣ ಪಾಣಾಜೆ ಅವರಿಗೆ ಕನ್ನಡ ಪ್ರಭ – ಏಷ್ಯಾನೆಟ್ ಸುವರ್ಣ ನ್ಯೂಸ್ ಜಂಟಿಯಾಗಿ ನೀಡುವ ಪ್ರತಿಷ್ಠಿತ ‘ಆಯುರ್ಭೂಷಣ’ ಪುರಸ್ಕಾರ ಲಭಿಸಿದೆ.

ಸೆ.26ರಂದು ಬೆಂಗಳೂರಿನಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಪಾಣಾಜೆಯಲ್ಲಿ 1962ರಿಂದ ಕಣ್ಣ ವೈದ್ಯರು ಆರಂಭಿಸಿದ ಶ್ರೀ ದುರ್ಗಾ ಪರಮೇಶ್ವರಿ ಔಷಧಾಲಯದ ಪರಂಪರೆಯನ್ನು ಮುಂದುವರಿಸಿದ ಡಾ. ಪಾಣಾಜೆ ಅವರು 1986ರಲ್ಲಿ ಪರ್ಲಡ್ಕದಲ್ಲಿ ಶ್ರೀ ದುರ್ಗಾ ಕ್ಲಿನಿಕ್ ಆರಂಭಿಸಿ, 1988ರಲ್ಲಿ SDP Remedies & Research Centre ಸ್ಥಾಪಿಸಿದರು. 40 ವರ್ಷಗಳ ವೈದ್ಯಕೀಯ ಅನುಭವ ಹೊಂದಿರುವ ಅವರು, ಇಂದು 160ಕ್ಕೂ ಹೆಚ್ಚು Classical ಮತ್ತು 40ಕ್ಕೂ ಹೆಚ್ಚು Patented ಔಷಧಗಳನ್ನು ಹೊಂದಿರುವ SDP Ayurveda ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ.

2018ರಲ್ಲಿ ಮೂಡೂರಿನಲ್ಲಿ ಅತ್ಯಾಧುನಿಕ ಉತ್ಪಾದನಾ ಘಟಕ ಆರಂಭಿಸಿದ ಸಂಸ್ಥೆಗೆ ಸರ್ ಎಂ. ವಿಶ್ವೇಶ್ವರಯ್ಯ Manufacturing Excellence Award, KSFC Best Entrepreneur Award (2019), ISO ಪ್ರಮಾಣೀಕರಣ ಸೇರಿದಂತೆ ‘ಸಮಾಜ ರತ್ನ’, ‘ವೈದ್ಯ ರತ್ನ’, ‘ಆಯುಷ್ ಶ್ರೀ’, ‘ಆಯುರ್ವೇದ ವಿಶ್ವ ರತ್ನ’ ಪ್ರಶಸ್ತಿಗಳು ಲಭಿಸಿವೆ.

ರೋಟರಿ ಕ್ಲಬ್ ಪೂರ್ವಾಧ್ಯಕ್ಷ, ಪಾಣಾಜೆ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಸದಸ್ಯ, ಆಯುಷ್ ಫೆಡರೇಶನ್ ಆಫ್ ಇಂಡಿಯಾ ಪುತ್ತೂರು ಘಟಕದ ಅಧ್ಯಕ್ಷರಾಗಿ ಅವರು ಸಕ್ರಿಯರಾಗಿದ್ದಾರೆ. 22 ವರ್ಷಗಳ ಕಲೋಪಾಸನಾ: 2005ರಲ್ಲಿ ಆರಂಭಿಸಿದ ‘ಕಲೋಪಾಸನಾ’ ಮೂಲಕ ಬಾಲಮುರಳಿಕೃಷ್ಣ, ಉನ್ನಿಕೃಷ್ಣ, ಬಾಂಬೆ ಜಯಶ್ರೀ, ಸುಧಾ ರಘುನಾಥನ್, ಸಂಜಯ್ ಸುಬ್ರಹ್ಮಣ್ಯ ಸೇರಿದಂತೆ ರಾಷ್ಟ್ರಮಟ್ಟದ ಕಲಾವಿದರನ್ನು ಪುತ್ತೂರಿಗೆ ಕರೆತಂದು ಉಚಿತ ಕಲಾ ಕಾರ್ಯಕ್ರಮಗಳನ್ನು ನೀಡುತ್ತಿರುವುದು ಅವರ ಮತ್ತೊಂದು ಹೆಗ್ಗಳಿಕೆ.

ಆಯುರ್ವೇದ ಪರಂಪರೆ, ಉದ್ಯಮ, ಸಮಾಜ ಸೇವೆ ಮತ್ತು ಸಾಂಸ್ಕೃತಿಕ ಕೊಡುಗೆಗಾಗಿ ಸಂದಿರುವ ಈ ಗೌರವ ಪುತ್ತೂರು ಹಾಗೂ ದ.ಕ. ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.

LEAVE A REPLY

Please enter your comment!
Please enter your name here