ಪುತ್ತೂರು ಟಿಎಪಿಸಿಎಂಎಸ್‌ನ ಪ್ರಭಾರ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಬೆಳಿಯಪ್ಪ ಗೌಡ ಸೇವಾ ನಿವೃತ್ತಿ, ಬೀಳ್ಕೊಡುಗೆ

0

ಪುತ್ತೂರು: ಪುತ್ತೂರು ಟಿಎಪಿಸಿಎಂಎಸ್‌ನ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ 36 ವರ್ಷಗಳ ಸೇವೆ ಸಲ್ಲಿಸಿದ ಬೆಳಿಯಪ್ಪ ಗೌಡರವರು ಜು.30 ರಂದು ಸೇವಾ ನಿವೃತ್ತಿ ಹೊಂದಿದ್ದು ಅವರಿಗೆ ಬೀಳ್ಕೊಡುಗೆ ಸಮಾರಂಭವು ಸೆ.22 ರಂದು ಸಂಘದ ಸಭಾಂಗಣದಲ್ಲಿ ನಡೆಯಿತು.


ಬೆಳಿಯಪ್ಪ ಗೌಡರವರು ಕೋಡಿಂಬಾಡಿ ಗ್ರಾಮದ ನಿಡ್ಯ ಮನೆಯವರಾಗಿದ್ದು 01.07.1990 ರಲ್ಲಿ ಸಂಘಕ್ಕೆ ಗುಮಾಸ್ತರಾಗಿ ಕರ್ತವ್ಯಕ್ಕೆ ಸೇರ್ಪಡೆಯಾಗಿದ್ದರು. ಆ ಬಳಿಕ ಅವರು ಹಿರಿಯ ಗುಮಾಸ್ತರಾಗಿ, ಶಾಖಾ ವ್ಯವಸ್ಥಾಪಕರಾಗಿ ಬಳಿಕ 2011 ರಿಂದ 12 ರವರೇಗೆ ಮುಖ್ಯ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇವರು ಅಡಿಕೆ ವಿಭಾಗ ಧರ್ಮಸ್ಥಳ ಬಿಲ್ಡಿಂಗ್ ಕಾಣಿಯೂರು ಶಾಖೆಯ ಶಾಖಾ ವ್ಯವಸ್ಥಾಪಕರಾಗಿ, ಕಡಬದಲ್ಲಿ ಶಾಖಾ ವ್ಯವಸ್ಥಾಪಕರಾಗಿ ಮತ್ತು ಕೂರ್ನಡ್ಕ ಪ್ರಧಾನ ಕಛೇರಿಯಲ್ಲಿ ಮುಖ್ಯ ಕಾರ್ಯದರ್ಶಿಯಾಗಿ ಒಟ್ಟು ಸುಮಾರು 36 ವರ್ಷಗಳ ಕಾಲ ಸಂಘದಲ್ಲಿ ಕರ್ತವ್ಯ ನಿರ್ವಹಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು.
ಇವರು ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರ ಸಂಪೂರ್ಣ ಸಹಕಾರದೊಂದಿಗೆ ನಷ್ಟದಲ್ಲಿದ್ದ ಸಂಸ್ಥೆಯನ್ನು ಸುಮಾರು 8 ವರ್ಷಗಳಿಂದ ಲಾಭದಲ್ಲಿ ಮುನ್ನಡೆಸಿಕೊಂಡು ಬಂದಿರುವ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ
ಇವರಿಗೆ ಸಂಘದ ವತಿಯಿಂದ ಪೇಟಾ,ಶಾಲು, ಫಲಪುಷ್ಪ, ಸ್ಮರಣಿಕೆ, ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಈ ಬೀಳ್ಕೊಡುಗೆ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ, ಟಿಎಪಿಸಿಎಂಎಸ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಟಿಎಪಿಸಿಎಂಎಸ್ ಅಧ್ಯಕ್ಷ ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತು, ನಿರ್ದೇಶಕುರಗಳಾದ ಸುಭಾಷ್ ನಾಯಕ್, ಸುಜಾತ ರಂಜನ್ ರೈ, ಅಶ್ರಫ್ ಕಲ್ಲೇಗ, ಮೀನಾಕ್ಷಿ ಮಂಜುನಾಥ, ಜಯರಾಮ ಪೂಜಾರಿ, ನವೀನ್ ಎಸ್, ತ್ರಿವೇಣಿ ಪರ‍್ವೋಡಿ, ಸುಂದರಿ, ಸಿಬ್ಬಂದಿಗಳಾದ ಶಿವರಾಜ್ ರೈ, ಸೌಮ್ಯ ಕೆ, ರಕ್ಷಿತ್ ಎಂ, ಹಿರಿಯ ನಿವೃತ್ತ ಸಿಬ್ಬಂದಿ ಪುಷ್ಪಲತಾ ಉಪಸ್ಥಿತರಿದ್ದರು. ಬೆಳಿಯಪ್ಪ ಗೌಡರವರು ಪತ್ನಿ ವೀಣಾ ಕುಮಾರಿ ಕೆ ಹಾಗೂ ಪುತ್ರಿ ಭವಿಷ್ಯ ಎನ್.ಬಿಯವರೊಂದಿಗೆ ಕೋಡಿಂಬಾಡಿಯ ನಿಡ್ಯ ಮನೆಯಲ್ಲಿ ಸುಖೀ ಜೀವನ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here