







ನೇರಳಕಟ್ಟೆ: ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.) ಕರ್ನಾಟಕದ ಗಣೇಶ ಸಭಾಭವನ, ನೇರಳಕಟ್ಟೆ ಶಾಖೆಯ ವತಿಯಿಂದ 62 ದಿನಗಳಿಂದ ನಡೆಯುತ್ತಿರುವ ಯೋಗ ತರಗತಿಯ ಅಂಗವಾಗಿ ಸೆ.27ರಂದು ಮಾತೃವಂದನಾ, ಮಾತೃಧ್ಯಾನ ಮತ್ತು ಮಾತೃಭೋಜನ ಕಾರ್ಯಕ್ರಮ ಆಚರಿಸಲಾಯಿತು.


ದುರ್ಗಾಪರಮೇಶ್ವರಿ ಶಾಖೆ ಕರಿಂಕದ ಶಿಕ್ಷಕಿ ಕಸ್ತೂರಿ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಜಿಲ್ಲಾ ಮಕ್ಕಳ ಶಿಕ್ಷಣ ಪ್ರಮುಖರಾದ ಶ್ರೀಕಲಾ ಮುಖ್ಯ ಮಾತುಗಾರರಾಗಿ ಭಾಗವಹಿಸಿದ್ದರು. ನಿವೃತ್ತ ಹಿರಿಯ ಆರೋಗ್ಯ ಸಹಾಯಕಿ ಕಸ್ತೂರಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಮುಖ್ಯ ಮಾತುಗಾರರಾದ ಶ್ರೀಕಲಾ ಮಾತನಾಡಿ, ಜೀವನದಲ್ಲಿ ತಾಯಿಯ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಹೆತ್ತವರು ಮತ್ತು ಹಿರಿಯರನ್ನು ಗೌರವದಿಂದ ಕಾಣಬೇಕು ಎಂದು ತಿಳಿಸಿದರು.




ಯೋಗ ಶಿಕ್ಷಕರು, ಯೋಗಪಟುಗಳು ಮತ್ತು ಸಾರ್ವಜನಿಕರು ಸೇರಿದಂತೆ 500ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಯೋಗಪಟುಗಳೇ ಮನೆಗಳಿಂದ ವಿವಿಧ ಸಾತ್ವಿಕ ಆಹಾರ ತಂದು ಪರಸ್ಪರ ಹಂಚಿಕೊಂಡು ಮಾತೃಭೋಜನ ಆಚರಿಸಿದರು.ಲಿಖಿತಾ ನಿರೂಪಿಸಿದರು, ಶಶಿಕಲಾ ಸ್ವಾಗತಿಸಿದರು, ಕವಿತಾ ವರದಿ ವಾಚಿಸಿದರು, ಜ್ಯೋತಿ ವಂದನಾರ್ಪಣೆ ಸಲ್ಲಿಸಿದರು.










