







ಕಾಣಿಯೂರು: ಪುತ್ತೂರಿನ ಜೋಸ್ ಅಲುಕ್ಕಾಸ್ ಸಂಸ್ಥೆಯ ಸಿಎಸ್ಆರ್ ನಿಧಿಯಿಂದ ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಬೆಳಂದೂರುಗೆ ಟಿಲ್ಟಿಂಗ್ ಗ್ರೈಂಡರ್, ವೈರ್ಲೆಸ್ ಮೈಕ್ ಮತ್ತು ಕಲರ್ ಪ್ರಿಂಟರ್ ಖರೀದಿಗೆ ರೂ.34,850 ಸಹಾಯಧನ ನೀಡಲಾಯಿತು.


ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಯದುರಾಜ್ ಡಿ.ಕೆ ಸಮ್ಮುಖದಲ್ಲಿ ಜೋಸ್ ಅಲುಕ್ಕಾಸ್ ಸಂಸ್ಥೆಯ ಏರಿಯಾ ಮ್ಯಾನೇಜರ್ ಅಗಸ್ಟಿನ್, ಪುತ್ತೂರು ಶಾಖಾ ವ್ಯವಸ್ಥಾಪಕ ಹರಿ ಮರಾರ್, ಸಹಾಯಕ ವ್ಯವಸ್ಥಾಪಕ ಪ್ರಜೀಶ್ ಪ್ರಕಾಶ್ ಮತ್ತು ಅಕೌಂಟೆಂಟ್ ಇನೋಶ್ ಸನ್ನಿ ಅವರು ಶಾಲೆಯ ಮುಖ್ಯಗುರು ಜಾನಕಿ ಕೆ.ಆರ್, ಎಸ್ಡಿಎಂಸಿ ಅಧ್ಯಕ್ಷ ಭವಾನಿಶಂಕರ ಅಗಳಿ, ಸಹ ಶಿಕ್ಷಕಿ ಜಯಪ್ರಭಾ ಯು.ಆರ್ ಅವರಿಗೆ ಚೆಕ್ ಹಸ್ತಾಂತರಿಸಿದರು.













