







6 ಲಕ್ಷ 44 ಸಾವಿರ ರೂಪಾಯಿಗೆ ಏಲಂನಲ್ಲಿ ಪಡೆದುಕೊಂಡ ಬಿಡ್‌ದಾರ ಮೊಹಮ್ಮದ್ ಹನೀಫ್


ಪುತ್ತೂರು: ಸವಣೂರು ಪೇಟೆಯ ಹೃದಯ ಭಾಗದಲ್ಲಿ ಇರುವ ಸವಣೂರು ಗ್ರಾ.ಪಂ, ಗೆ ಒಳಪಟ್ಟ ಮೀನು ಮಾರುಕಟ್ಟೆಯ 2026-27 ನೇ ಸಾಲಿನ ಏಲಂ ಪ್ರಕ್ರಿಯೆ ಸೆ. 28 ರಂದು ಸವಣೂರು ಗ್ರಾ.ಪಂ, ಕುಮಾರಧಾರ ಸಭಾಭವನದಲ್ಲಿ ಜರಗಿತು.
8 ಜನ ಬಿಡ್‌ದಾರರು ಏಲಂ ಪ್ರಕ್ರಿಯೆಯಲ್ಲಿ ಭಾಗವಹಿಸಿದರು. ಅದರಲ್ಲಿ ಪುತ್ತೂರು ಪರ್ಲಡ್ಕದ ಮೊಹಮ್ಮದ್ ಹನೀಫ್ ರವರು 6 ಲಕ್ಷ 44 ಸಾವಿರ ರೂಪಾಯಿಗೆ ಏಲಂನಲ್ಲಿ ಮೀನು ಮಾರುಕಟ್ಟೆಯನ್ನು ಒಂದು ವರ್ಷದ ಅವಧಿಗೆ ಪಡೆದುಕೊಂಡರು. ಹಸೈನಾರ್ ಪುದ್ದೊಟ್ಟು, ಸಿದ್ದೀಕ್ ಚಾಪಳ್ಳ, ಶಾಕೀರ್ ಕುಂಭಮೂಲೆ, ಅಬೂಬಕ್ಕರ್ ಪುತ್ತೂರು, ಉಮ್ಮರ್ ಕಣಿಮಜಲು, ಆಶ್ರಫ್ ಕಂಪ ಮತ್ತು ಅಬ್ದುಲ್ ರಜಾಕ್ ಕೆನರಾ ಅವರುಗಳು ಬಿಡ್‌ನಲ್ಲಿ ಭಾಗಿಯಾದರು.




ಸವಣೂರು ಗ್ರಾ.ಪಂ, ಲೆಕ್ಕಸಹಾಯಕರಾದ ಜಯಂತಿ, ಮಾಜಿ ಸದಸ್ಯರುಗಳಾದ ಭರತ್ ರೈ ಪಾಲ್ತಾಡು, ತೀರ್ಥರಾಮ್ ಕೆಡೆಂಜಿ, ಅಬ್ದುಲ್‌ರಜಾಕ್ ಕೆನರಾ, ಗ್ರಾ.ಪಂ, ಸಿಬ್ಬಂಧಿಗಳಾದ ದಯಾನಂದ ಮಾಲೆತ್ತಾರು, ಪ್ರಮೋದ್ ಕುಮಾರ್, ಯತೀಶ್ ಕೆ, ಜಯ ಕೆ ಮತ್ತು ಜಯಶ್ರೀ ರವರುಗಳು ಉಪಸ್ಥಿತರಿದ್ದರು.










