ಮಾಣಿ: ಪಿಕಪ್ ಮತ್ತು ಕಾರಿನ ನಡುವೆ ಅಪಘಾತ : ಪ್ರಕರಣ ದಾಖಲು

0

ಪುತ್ತೂರು: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಗ್ರಾಮದ ಹಳೀರದಲ್ಲಿ ಸೆ.28ರಂದು ಬೆಳಿಗ್ಗೆ ಪಿಕಪ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ, ಕಾರಿನಲ್ಲಿದ್ದ ನೆಬಿಸಾ (67) ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.

ತಮಿಳ್ನಾಡಿನ ಹೊಸೂರು ನಿವಾಸಿ ಪಳನಿಸ್ವಾಮಿ (25) ಎಂಬವರು ಪಿಕಪ್ ವಾಹನದಲ್ಲಿ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ವೇಳೆ, ಮುಂದೆ ಹೋಗುತ್ತಿದ್ದ ಕಾರಿನ ಚಾಲಕ ಅಕ್ಬರ್ ಅಲಿ ಏಕಾಏಕಿ ಹೆದ್ದಾರಿಯಲ್ಲಿಯೇ ಯೂ-ಟರ್ನ್ ಮಾಡಿದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಪಘಾತದಲ್ಲಿ ಪಿಕಪ್ ಚಾಲಕ ಪಳನಿಸ್ವಾಮಿ, ಕಾರು ಚಾಲಕ ಅಕ್ಬರ್ ಅಲಿ ಹಾಗೂ ಕಾರಿನಲ್ಲಿದ್ದ ಮೈಮೂನಾ, ಶಮಾ, ಜುಬೇದಾ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

LEAVE A REPLY

Please enter your comment!
Please enter your name here