ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ-ಇಡ್ಕಿದು, ಕುಳ, ಅಳಕೆಮಜಲು ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

0

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್(ರಿ) ವಿಟ್ಲ, ಮಾಣಿ ವಲಯದ ಇಡ್ಕಿದು, ಕುಳ, ಅಳಕೆಮಜಲು ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು. ಉಪ್ಪಿನಂಗಡಿ ಪಶು ವೈದ್ಯರಾದ ಕೆ.ಎಮ್.ಕೃಷ್ಣ ಭಟ್‌ರವರು ಕಾರ್ಯಕ್ರಮವನ್ನು‌ ಉದ್ಘಾಟಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲೆ 2 ರ ನಿರ್ದೇಶಕರಾದ ಬಾಬು ನಾಯ್ಕರವರು ಮುಖ್ಯ ಅಥಿತಿಗಳಾಗಿ ಆಗಮಿಸಿ ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿ ಹಸ್ತಾಂತರಿಸಿದರು.
ಬಂಟ್ವಾಳ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ರಾಜಾರಾಮ್‌ಶೆಟ್ಟಿ ಕೋಲ್ಪೆಗುತ್ತುರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಶು ವೈದ್ಯರಾದ ಮಂದಾರಜೈನ್‌, ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ‌ಸಮಿತಿ ಅಧ್ಯಕ್ಷರಾದ ಪ್ರಕಾಶ್‌ ಕೆ.ಎಸ್. ಉರಿಮಜಲು, ಜನಜಾಗೃತಿ ವೇದಿಕೆ ಸದಸ್ಯರಾದ ಸುರೇಶ್ ಮುಕ್ಕುಡ, ಮಾಣಿ ವಲಯಾಧ್ಯಕ್ಚರಾದ ಸುಧಾಕರ ಸಪಲ್ಯ, ಅಳಕೆಮಜಲು ನಿಕಟಪೂರ್ವ ಅಧ್ಯಕ್ಷರಾದ ಚಂದ್ರಹಾಸ ನಾಯ್ಕ ,ಇಡ್ಕಿದು ಒಕ್ಕೂಟದ ನೂತನ ಅಧ್ಯಕ್ಷರಾದ ಜಯಕರ ಅಮೈ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಳಕೆಮಜಲು ಸೇವಾ ಪ್ರತಿನಿಧಿ ಸುಗಂಧಿನಿ ವರದಿ ವಾಚಿಸಿದರು. ಮಾಣಿ ವಲಯದ ಮೇಲ್ವಿಚಾರಕಿ ಆಶಾಪಾರ್ವತಿ ಸ್ವಾಗತಿಸಿ, ಕೇಶವ ಗೌಡ ವಂದಿಸಿದರು. ಉದಯ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಇಡ್ಕಿದು, ಕುಳ ಒಕ್ಕೂಟದ ಸೇವಾಪ್ರತಿನಿಧಿಗಳಾದ ಪುಷ್ಪಲತಾ, ಯೋಗಿತಾ, ಒಕ್ಕೂಟದ ಪದಾಧಿಕಾರಿಗಳು ಸಹಕರಿಸಿದರು. ಬಳಿಕ ಸಾಂಸ್ಕೃತಿಕ ಕಾರ‍್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here