







- ಬಂಟೆರೆ ಸೇರಿಗೆ ಐತಿಹಾಸಿಕ ಕಾರ್ಯಕ್ರಮ- ಕಾವು ಹೇಮನಾಥ ಶೆಟ್ಟಿ
- ಬಂಟರ ಭವನ ನವೀಕರಣ ಕಾರ್ಯ ಆರಂಭಗೊಂಡಿದೆ- ದಂಬೆಕ್ಕಾನ ಸದಾಶಿವ ರೈ
- ಬಂಟರ ಭವನದ ಜಾಗದಲ್ಲಿ ಅಭಿವೃದ್ಧಿ ಕಾರ್ಯ- ಬೂಡಿಯಾರ್ ರಾಧಾಕೃಷ್ಣ ರೈ
- ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ- ಗೀತಾ ಮೋಹನ್ ರೈ
- ಯುವ ಬಂಟರ ಭಾಗವಹಿಸುವಿಕೆ ಮುಖ್ಯ- ಭಾಗ್ಯೇಶ್ ರೈ
ಪುತ್ತೂರು: ತಾಲೂಕು ಬಂಟರ ಸಂಘದ ಸಾರಥ್ಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಪುತ್ತೂರು ತಾಲೂಕು ಸಮಿತಿ ಇದರ ಮಾರ್ಗದರ್ಶನದಲ್ಲಿ ಮಹಿಳಾ, ಯುವ ಹಾಗೂ ವಿದ್ಯಾರ್ಥಿ ಬಂಟರ ವಿಭಾಗದ ಸಹಕಾರದಲ್ಲಿ ಅ.3ರಂದು ಪುತ್ತೂರು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಯಲಿರುವ ಬಂಟೆರೆ ಸೇರಿಗೆ 2026', ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಸೆ.29ರಂದು ಪುತ್ತೂರು ಬಂಟರ ಭವನದಲ್ಲಿ ನಡೆಯಿತು.


ಅಧ್ಯಕ್ಷತೆ ವಹಿಸಿದ್ದ ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರು ಮಾತನಾಡಿ ಅ.3ರಂದು ಪುತ್ತೂರು ಬಂಟರ ಸಂಘದ ಆಶ್ರಯದಲ್ಲಿ ನಡೆಯಲಿರುವ ಬಂಟೆರೆ ಸೇರಿಗೆ ಐತಿಹಾಸಿಕ ಕಾರ್ಯಕ್ರಮವಾಗಲಿದೆ. ಈ ಕಾರ್ಯಕ್ರಮದಲ್ಲಿ ಪುತ್ತೂರು ಮತ್ತು ಕಡಬ ತಾಲೂಕು ವ್ಯಾಪ್ತಿಯ ಬಂಟ ಬಾಂಧವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ, ಕಾರ್ಯಕ್ರಮಕ್ಕೆ ಶೋಭೆಯನ್ನು ತರಬೇಕು ಎಂದರು.



ಎರಡು ರಥಗಳಲ್ಲಿ ವೈಭವದ ಮೆರವಣಿಗೆ: ಆ.3ರಂದು ಬೆಳಿಗ್ಗೆ 9 ಗಂಟೆಗೆ ದರ್ಬೆ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನದ ಬಳಿಯಿಂದ ಬಂಟರ ಭವನದ ತನಕ ಸಮಾರಂಭದಲ್ಲಿ ಭಾಗವಹಿಸಲಿರುವ ಅತಿಥಿಗಳನ್ನು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 15 ಮಂದಿ ಚಿನ್ನದ ಪದಕ ಪುರಸ್ಕೃತರನ್ನು ಎರಡು ರಥಗಳ ಮೂಲಕ ವೈಭವದ ಮೆರವಣಿಗೆಯಲ್ಲಿ ತರಲಾಗುವುದು ಎಂದು ಹೇಳಿದ ಹೇಮನಾಥ ಶೆಟ್ಟಿ ಅವರು ಬಂಟೆರೆ ಸೇರಿಗೆ ಕಾರ್ಯಕ್ರಮ ಅರ್ಥಪೂರ್ಣ ರೀತಿಯಲ್ಲಿ ನಡೆಯಲಿದೆ ಎಂದರು.
ಬಂಟರ ಭವನ ನವೀಕರಣ ಕಾರ್ಯ ಅರಂಭಗೊಂಡಿದೆ- ದಂಬೆಕ್ಕಾನ ಸದಾಶಿವ ರೈ: ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ಸಹಕಾರರತ್ನ’ ದಂಬೆಕ್ಕಾನ ಸದಾಶಿವ ರೈ ಅವರು ಮಾತನಾಡಿ ಬಂಟೆರೆ ಸೇರಿಗೆಯಲ್ಲಿ ಎಲ್ಲರೂ ಭಾಗವಹಿಸುವಂತೆ ವಿನಂತಿ ಮಾಡಿದರು. ಬಂಟರ ಭವನವನ್ನು 1 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಣ ಮಾಡುವ ಕಾರ್ಯ ಆರಂಭಗೊಂಡಿದೆ.ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಬಂಟರ ಭವನದ ಜಾಗದಲ್ಲಿ ಅಭಿವೃದ್ಧಿ ಕಾರ್ಯ- ಬೂಡಿಯಾರ್ ರಾಧಾಕೃಷ್ಣ ರೈ:
ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಅವರು ಮಾತನಾಡಿ, ಪುತ್ತೂರು ತಾಲೂಕು ಬಂಟರ ಸಂಘಕ್ಕೆ ಶಾಸಕ ಅಶೋಕ್ ಕುಮಾರ್ ರೈ ಮೂಲಕ ಸರಕಾರದಿಂದ ಮಂಜೂರಾದ 5.50 ಎಕ್ರೆ ಜಾಗದಲ್ಲಿ ಸುಂದರಾದ ಮದುವೆ ಹಾಲ್, ಶೈಕ್ಷಣಿಕ ಕೆಲಸಗಳಿಗೆ ಕಟ್ಟಡ ನಿರ್ಮಾಣ ಸಹಿತ ಅನೇಕ ಅಭಿವೃದ್ಧಿ ಕಾರ್ಯಗಳು ಅದಷ್ಟು ಶೀಘ್ರ ಆಗಬೇಕು ಎಂದು ಹೇಳಿ, ಬಂಟ ಸಮಾಜ ಬಾಂಧವರು ಪೂರ್ಣ ರೀತಿಯ ಸಹಕಾರವನ್ನು ನೀಡಬೇಕು ಎಂದರು.
ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ- ಗೀತಾ ಮೋಹನ್ ರೈ:
ತಾಲೂಕು ಮಹಿಳಾ ಬಂಟರ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ ಅವರು ಮಾತನಾಡಿ ಅ.3ರಂದು ನಡೆಯುವ ಬಂಟೆರೆ ಸೇರಿಗೆಯಲ್ಲಿ ಪುತ್ತೂರು ಮತ್ತು ಕಡಬ ತಾಲೂಕು ವ್ಯಾಪ್ತಿಯ ಬಂಟ ಮಹಿಳೆಯರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಿದರು.
ಯುವ ಬಂಟರ ಭಾಗವಹಿಸುವಿಕೆ ಮುಖ್ಯ- ಭಾಗ್ಯೇಶ್ ರೈ:
ತಾಲೂಕು ಯುವ ಬಂಟರ ವಿಭಾಗದ ಅಧ್ಯಕ್ಷ ಭಾಗ್ಯೇಶ್ ರೈ ಅವರು ಮಾತನಾಡಿ ಯುವ ಬಂಟರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಿಕೆ ಮೂಲಕ ಬಂಟರೆ ಸೇರಿಗೆಯನ್ನು ಯಶಸ್ವಿಗೊಳಿಸಬೇಕು ಎಂದು ವಿನಂತಿಸಿದರು.
ತಾಲೂಕು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ ಸ್ವಾಗತಿಸಿ, ಕೋಶಾಽಕಾರಿ ಸಂತೋಷ್ ಕುಮಾರ್ ಶೆಟ್ಟಿ ಸಾಜ ವಂದಿಸಿದರು, ಬಂಟೆರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿಯ ಸಹ ಸಂಚಾಲಕ ಸಾಜ ರಾಧಾಕೃಷ್ಣ ಆಳ್ವ, ನಿರ್ದೇಶಕ ಜಯಪ್ರಕಾಶ್ ರೈ ನೂಜಿಬೈಲು, ನಿರ್ದೇಶಕರಾದ ವತ್ಸಲಾ ಪಿ.ಶೆಟ್ಟಿ, ಮಾಜಿ ನಿರ್ದೇಶಕಿ ವಾಣಿ ಶೆಟ್ಟಿ ನೆಲ್ಯಾಡಿ, ನಾಮ ನಿರ್ದೇಶಿತ ನಿರ್ದೇಶಕರುಗಳಾದ ಜೈರಾಜ್ ಭಂಡಾರಿ ನೊಣಾಲು, ದಯಾನಂದ ರೈ ಕೋರ್ಮಂಡ, ತಾಲೂಕು ಬಂಟರ ಸಂಘದ ಉಪಾಧ್ಯಕ್ಷರುಗಳಾದ ಸುಭಾಸ್ ಕುಮಾರ್ ಶೆಟ್ಟಿ ಅರುವಾರು, ಪ್ರತಾಪ್ಚಂದ್ರ ರೈ ಕುದ್ಮಾರುಗುತ್ತು, ಜೊತೆ ಕಾರ್ಯದರ್ಶಿಗಳಾದ ಸ್ವರ್ಣಲತಾ ರೈ, ಹರಿಣಾಕ್ಷಿ ಶೆಟ್ಟಿ, ಪುಲಸ್ಯ ರೈ, ನಿರ್ದೇಶಕರುಗಳಾದ ನಿತಿನ್ ಪಕ್ಕಳ ಮರೀಲ್, ರವೀಂದ್ರ ಶೆಟ್ಟಿ ನುಳಿಯಾಲು, ಸದಾಶಿವ ರೈ ಸೂರಂಬೈಲು, ಶಶಿಕಿರಣ್ ರೈ ನೂಜಿಬೈಲು, ಶಿವನಾಥ ರೈ ಮೇಗಿನಗುತ್ತು, ಪ್ರಕಾಶ್ ರೈ ಸಾರಕರೆ, ಇಂದುಶೇಖರ್ ಶೆಟ್ಟಿ, ರವಿಪ್ರಸಾದ್ ಶೆಟ್ಟಿ ಬನ್ನೂರು, ತಾಲೂಕು ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷ ಸಮೃದ್ ರೈ, ವಿಶೇಷ ಅಹ್ವಾನಿತರಾದ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಸಂದೇಶ್ ರೈ, ಕಾರ್ತಿಕ್ ರೈ, ಸುಜೀರ್ ಶೆಟ್ಟಿ ನುಳಿಯಾಲು, ತಾಲೂಕು ಮಹಿಳಾ ಬಂಟರ ವಿಭಾಗದ ಪ್ರಧಾನ ಕಾರ್ಯದರ್ಶಿ ಕುಸುಮಾ ಪಿ.ಶೆಟ್ಟಿ ಕೆರೆಕ್ಕೋಡಿ, ಕೋಶಾಽಕಾರಿ ಅರುಣಾ ಡಿ.ರೈ ಸಹಿತ ಅನೇಕ ಮಂದಿ ಉಪಸ್ಥಿತರಿದ್ದರು. ಬಂಟರ ಭವನದ ಮೇನೇಜರ್ ರವಿಚಂದ್ರ ರೈ ಕುಂಬ್ರ ಮತ್ತು ಭಾಸ್ಕರ್ ರೈ ಅವರುಗಳು ಸಹಕರಿಸಿದರು.
ಬಂಟೆರೆ ಸೇರಿಗೆ ಅಭೂತಪೂರ್ವ ಕಾರ್ಯಕ್ರಮ ಸಮಾಜ ಬಾಂಧವರೇ ಭಾಗವಹಿಸಿ
ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ನಡೆಯಲಿರುವ ಬಂಟೆರೆ ಸೇರಿಗೆ ಕಾರ್ಯಕ್ರಮವು ಬೆಳಿಗ್ಗೆ 9 ಗಂಟೆಗೆ ಅರಂಭವಾಗಲಿದೆ. ದರ್ಬೆ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನದಲ್ಲಿ ಬೆಳಿಗ್ಗೆ ಉಪಹಾರದ ವ್ಯವಸ್ಥೆ ಇದೆ, ಬಳಿಕ ಭವ್ಯವಾದ ಎರಡು ರಥಗಳ ಮೂಲಕ ಅತಿಥಿಗಳು ಮತ್ತು 15 ಮಂದಿ ಸನ್ಮಾನಿತರ ಮೆರವಣಿಗೆ ಬಂಟರ ಭವನದ ತನಕ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ಸಭಾ ಕಾರ್ಯಕ್ರಮ ಆರಂಭವಾಗಲಿದೆ. ಕಾರ್ಯಕ್ರಮದ ನಡುವೆ ಜ್ಯೂಸ್ ಮತ್ತು ಸಿಹಿ ಬಿಸ್ಕತ್ ವ್ಯವಸ್ಥೆಯನ್ನು ಮಾಡಲಾಗಿದೆ. ಮಧ್ಯಾಹ್ನ ಶುಚಿ-ರುಚಿಯಾದ ಮಾಂಸಾಹಾರಿ ಭೋಜನದ ವ್ಯವಸ್ಥೆಯಲ್ಲಿ ಚಿಕನ್ ಸುಕ್ಕ, ಕೋರಿ-ರೊಟ್ಟಿ, ಮೀನಿನ ರುಚಿಕರವಾದ ಖಾದ್ಯಗಳನ್ನು ಒಳಗೊಂಡ ವ್ಯವಸ್ಥೆಯನ್ನು ಮಾಡಲಾಗಿದೆ. ಇಡೀ ಕಾರ್ಯಕ್ರಮ ವಿಶಿಷ್ಟ ರೀತಿಯಲ್ಲಿ ನಡೆಯಲಿದೆ. ಪುತ್ತೂರು ಮತ್ತು ಕಡಬ ತಾಲೂಕು ವ್ಯಾಪ್ತಿಯಲ್ಲಿ ಬಂಟ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ.
ಕಾವು ಹೇಮನಾಥ ಶೆಟ್ಟಿ ಅಧ್ಯಕ್ಷರು ಬಂಟರ ಸಂಘ ಪುತ್ತೂರು











