ಪಡುಮಲೆ ಕೋಟಿ ಚೆನ್ನಯ ಜನ್ಮಭೂಮಿ ಅಭಿವೃದ್ಧಿ ಕ್ರಿಯಾ ಸಮಿತಿ ರಚನೆ

0

ಅಧ್ಯಕ್ಷ ಶಾಸಕ ಅಶೋಕ್ ಕುಮಾರ್ ರೈ,ಕಾರ್ಯದರ್ಶಿ ಎಸಿ ಸ್ಟೆಲ್ಲಾ ವರ್ಗೀಸ್
ಸದಸ್ಯರಾಗಿ ಡಾ.ರಾಜಾರಾಮ್ ಕೆ.ಬಿ.,ಎ.ಹೇಮನಾಥ ಶೆಟ್ಟಿ ಕಾವು,ಬಾಲಕೃಷ್ಣ ರೈ ಕುದ್ಕಾಡಿ, ಉಲ್ಲಾಸ್ ಕೋಟ್ಯಾನ್, ವಿಜಯ್ ಸೊಣಂಗಿರಿ

ಪುತ್ತೂರು:ಐತಿಹಾಸಿಕ ಪಡುಮಲೆ ಸ್ಥಳವನ್ನು ಸಾಂಸ್ಕೃತಿಕ ಹಾಗೂ ಪಾರಂಪರಿಕ ತಾಣವಾಗಿ ಅಭಿವೃದ್ಧಿ ಪಡಿಸುವ ಉದ್ದೇಶದಿಂದ ‘ಪಡುಮಲೆ ಕೋಟಿ ಚೆನ್ನಯ ಜನ್ಮಭೂಮಿ ಅಭಿವೃದ್ಧಿ ಕ್ರಿಯಾ(ಕಾರ್ಯಕಾರಿ) ಸಮಿತಿ’ಯನ್ನು ರಚಿಸಿ ಸರ್ಕಾರ ಆದೇಶಿಸಿದೆ.


ಸಮಿತಿಯ ಅಧ್ಯಕ್ಷರಾಗಿ ಶಾಸಕ ಅಶೋಕ್ ಕುಮಾರ್ ರೈ,ಕಾರ್ಯದರ್ಶಿಯಾಗಿ ಉಪವಿಭಾಗದ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಅವರನ್ನು ಹಾಗೂ ಸದಸ್ಯರಾಗಿ ಉಪ್ಪಿನಂಗಡಿಯ ಡಾ.ರಾಜಾರಾಮ್ ಕೆ.ಬಿ.,ಕಾವು ಹೇಮನಾಥ ಶೆಟ್ಟಿ.,ಬಾಲಕೃಷ್ಣ ರೈ ಕುದ್ಕಾಡಿ, ಉಲ್ಲಾಸ್ ಕೋಟ್ಯಾನ್ ಹಾಗೂ ವಿಜಯ್ ಸೊಣಂಗಿರಿ ಅವರನ್ನು ನೇಮಕ ಮಾಡಿ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿನ ಕಾರ್ಯದರ್ಶಿ ಶಾಂತಲಾ ಎಂ.ಅವರು ಸೆ.29ರಂದು ಆದೇಶ ಹೊರಡಿಸಿದ್ದಾರೆ.


ಬಡಗನ್ನೂರು ಗ್ರಾಮದ ಪಡುಮಲೆ, ತುಳುನಾಡಿನ ಪ್ರಸಿದ್ಧ ಧೈರ್ಯಶಾಲಿ ಯೋಧರಾದ ಕೋಟಿ ಚೆನ್ನಯರ ಜನ್ಮ ಸ್ಥಳವಾಗಿ ಪ್ರಸಿದ್ಧವಾಗಿದೆ.ಕೋಟಿ ಚೆನ್ನಯರು ತಮ್ಮ ಶೌರ್ಯದಿಂದ ತುಳು ಜನಾಂಗದ ಹೃದಯ ಗೆದ್ದಿದ್ದು,ನಾಡಿನ ನಾನಾ ಭಾಗಗಳಲ್ಲಿ ದೇವರೂಪದಲ್ಲಿ ಪೂಜಿಸಲ್ಪಡುತ್ತಾರೆ.ಇತ್ತೀಚಿನ ವರ್ಷಗಳಲ್ಲಿ ಪಡುಮಲೆ ಸ್ಥಳವನ್ನು ಸಾಂಸ್ಕೃತಿಕ ಹಾಗೂ ಪಾರಂಪರಿಕ ತಾಣವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಸಮಿತಿ ರಚಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದ್ದರು.ಅದರಂತೆ ಇದೀಗ,ಪಡುಮಲೆ ಕೋಟಿ ಚೆನ್ನಯ ಜನ್ಮಭೂಮಿ ಅಭಿವೃದ್ಧಿ ಕ್ರಿಯಾ ಸಮಿತಿ ರಚಿಸಿ ಸರ್ಕಾರ ಆದೇಶಿಸಿದೆ.

LEAVE A REPLY

Please enter your comment!
Please enter your name here