







ಪುತ್ತೂರು:ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸುವುದನ್ನು ತಡೆಯಲು ಹೋದ ವ್ಯಕ್ತಿಗಳಿಬ್ಬರಿಗೆ ಹಲ್ಲೆ ನಡೆಸಿದ ಕುರಿತ ದೂರಿಗೆ ಸಂಬಂಧಿಸಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಬನ್ನೂರಿನ ಕೆಳಗಿನಮನೆ ನಿವಾಸಿ ಪ್ರಜ್ವಲ್ ರೈ(32) ಮತ್ತು ಶಿವಕುಮಾರ್ (35ವ), ರೋಹಿತ್ (35ವ) ಎಂಬವರು ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.ಆರೋಪಿ ಪ್ರಸಾದ್ ಎಂಬವರು ಶಿವಕುಮಾರ್ ಎಂಬವರಿಗೆ ಹಲ್ಲೆ ನಡೆಸುತ್ತಿದ್ದ ವೇಳೆ ಶಿವಕುಮಾರ್ ಅವರ ಸ್ನೇಹಿತರಾದ ಪ್ರಜ್ವಲ್ ರೈ ಮತ್ತು ರೋಹಿತ್ ಬಂದು ಹಲ್ಲೆ ನಡೆಸುವುದನ್ನು ಬಿಡಿಸಲು ಹೋದಾಗ ಅವರ ಮೇಲೆಯೂ ಪ್ರಸಾದ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿಸಲಾಗಿದೆ.ಪ್ರಜ್ವಲ್ ರೈ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.













