ಬಡಗನ್ನೂರು ಗ್ರಾ.ಪಂ. : ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ವಿಶೇಷ ಗ್ರಾಮಸಭೆ 

0

ನಮ್ಮ ಹೊಲ ನಮ್ಮ ರಸ್ತೆ ಅಭಿವೃದ್ಧಿ,, ಅಡಿಕೆ ಎಡೆ ಸಸಿ ನಾಟಿ ಮತ್ತು ವೖೆಯಕ್ತಿಕ ಬಾವಿ ರಚನೆ ಕಾಮಗಾರಿಗಳನ್ನು ಯೋಜನೆಯಲ್ಲಿ ಸೇರಿಸಲು ಗ್ರಾಮಸ್ಥರ ಒತ್ತಾಯ 

ಬಡಗನ್ನೂರು: ಬಡಗನ್ನೂರು ಗ್ರಾಮ ಪಂಚಾಯತ್ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಹಾಗೂ 15ನೇ ಹಣಕಾಸು ಯೋಜನೆ ಹಾಗೂ ರಾಜ್ಯ ಹಣಕಾಸು ಯೋಜನೆಯ   2025-26ನೇ ಸಾಲಿನ ಗ್ರಾಮ ಪಂಚಾಯತ್ ಸಾಮಾಜಿಕ ಪರಿಶೋಧನಾ ವಿಶೇಷ ಗ್ರಾಮ ಸಭೆಯು  ಸೆ. 29 ರಂದು  ಗ್ರಾ.ಪಂ ಸಭಾಭವನದಲ್ಲಿ ನಡೆಯಿತು 

 ಪುತ್ತೂರು ಸಾಮಾಜಿಕ ಲೆಕ್ಕ ಪರಿಶೋಧನೆಯ ತಾಲೂಕು ವ್ಯವಸ್ಥಾಪಕಿ  ಜಯಲಕ್ಷ್ಮಿ ಪಿ ಪ್ರಾಸ್ತಾವಿಕ ಮಾತನಾಡಿ  ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆ, 15ನೇ ಹಣಕಾಸು ಯೋಜನೆ ಹಾಗೂ ರಾಜ್ಯ ಹಣಕಾಸು ಯೋಜನೆ ಈ ಮೂರು ಯೋಜನೆಗಳ ಸಂಪೂರ್ಣ ದಾಖಲೆ, ಪರಿಶೀಲನೆ ಕಾಮಗಾರಿ  ಸ್ಥಳ ಪರಿಶೀಲನೆ, ಪಲಾನುಭವಿಗಳ ಮನೆ ಬೇಟಿ ಕಳೆದ ಮೂರು ದಿನಗಳಲ್ಲಿ  ಮಾಡಲಾಗಿದ್ದು  ಕಾಮಗಾರಿ ಉತ್ತಮ ರೀತಿ ನಡೆದಿದೆ  ಎಂದ ಅವರು ಯೋಜನೆ ಪಾರದರ್ಶಕವಾಗಿ ಮಂಡನೆ ಮಾಡುವುದು ಸಾಮಾಜಿಕ ಪರಿಶೋದನಾ ತಂಡ ಜವಾಬ್ದಾರಿಯಾಗಿದೆ. ಇಲ್ಲಿ ಗ್ರಾಮಸ್ಥರು ಮಹತ್ವ ಷಾತ್ರವಹಿಸುತ್ತಾರೆ .ಗ್ರಾಮಸ್ಥರು ಸಹಭಾಗಿತ್ವದಲ್ಲಿ ನಡೆಯುವುದರಿಂಧ ಅವರ  ಸಲಹೆ ಸೂಚನೆಗಳನ್ನು ಪಡೆದು ಸರಕಾರಕ್ಕೆ  ಕಳಿಸುವ ಮೂಲಕ ಮುಂದಿನ ದಿನಳಲ್ಲಿ  ಇನ್ನಷ್ಟು ಪಾರದರ್ಶಕವಾಗಿ, ಉತ್ತರದಾಯುಕ್ತವಾಗಿರಬೇಕು ಅನುಷ್ಠಾನ ಗೊಂಡು ಯೋಜನೆಯ ವಾಸ್ತವಾಂಶವನ್ನು ವಿಶ್ಲೇಷಣೆಯೇ ಸಾಮಾಜಿಕ ಲೆಕ್ಕ ಪರಿಶೋಧನೆ ಯೋಜನೆ ಮಾಹಿತಿ ರವಾನೆಯಾಗಬೇಕು. ಒಂದು ಯೋಜನೆ  ಪಾರದರ್ಶಕವಾಗಿ ಅನುಷ್ಠಾನ ಉತ್ತಮ  ಗೊಳ್ಳಬೇಕಾದರೆ  ಮಾಹಿತಿಯನ್ನು ಪಡೆದುಕೊಂಡು  ಸ್ವಯಂ ಪ್ರೇರಿತ  ಕೆಲಸ ಇಲ್ಲದ ಕೖೆಗಳಿಗೆ ಕೆಲಸ ಕೇಳಿ ಪಡೆದು ಜೀವನ ಮಟ್ಟ ಸುಧಾರಿಸುವಂತದ್ದು 2005ರಂದು ಕಾಯಿದೆ ರೂಪದಲ್ಲಿ ಆರಂಭಗೊಂಡ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ  ಯೋಜನೆ  ಜುಲೈ ತಿಂಗಳಲ್ಲಿ  ಮುಕ್ತಗೊಂಡಿದೆ  ಇಲ್ಲಿ ಯೋಜನೆ ಮುಕ್ತಗೊಂಡಿಲ್ಲ ಹೆಸರು ಬದಲಾವಣೆ ಮಾಡಿಕೊಂಡು ರೂಪುರೇಷೆಬದಲಾವಣೆ ಮಾಡಿಕೊಂಡು ಅನುಷ್ಠಾನದಲ್ಲಿ ಸಾಗುತ್ತದೆ. ಇದರಲ್ಲಿ ಕೆಲವೂಂದು ಕಾಮಗಾರಿಗಳನನ್ನು ಸೇರಿಸಿ ಕೊಂಡು ಕೆಲವೊಂದನ್ನು  ಕೖೆಬಿಡಲಾಗಿದೆ. ಯೋಜನೆ  ಸಂಪೂರ್ಣ ಮಾಹಿತಿ ರವಾನೆಯಾಗಬೇಕು ಮಾಹಿತಿ ಒಬ್ಬರಿಂದ ಒಬ್ಬರಿಗೆ ರವಾನೆಯಾದಗ  ಯೋಜನೆ ಯಶಸ್ವಿಯಾಗಿ ನಡೆಯಲು ಸಾಧ್ಯವಾಗುತ್ತದೆ. 15 ಹಣಕಾಸು ಯೋಜನೆ ವೖೆಯಕ್ತಿಗೆ ಕಾಮಗಾರಿ ಮಾಡುವಂತಿಲ್ಲ  ಸಾರ್ವಜನಿಕ ಕಾಮಗಾರಿ ಮಾತ್ರ ಮಾಡಲು ಅವಕಾಶವಿದ್ದು  60-40 ಅರ್ನಿಬಂದಿತ  ಅನುಧಾನ  ಕಾಮಗಾರಿ ಮಾಡಬೇಕಾಗುತ್ತದೆ ಎಂದು ಹೇಳಿದರು.

ಪುತ್ತೂರು ಕ್ಷೇತ್ರ ಸಂಪನ್ಮೂಲ ಕೇಂದ್ರ  ಶಿಕ್ಷಣ ಸಂಯೋಜಕಿ ಅಮೃತಕಲಾ  ಸಭಾಧ್ಯಕ್ಷತೆ ವಹಿಸಿ ಮಾತನಾಡಿ  ಯೋಜನೆಯ ಮಾಹಿತಿ ಎಲ್ಲ ಕಡೆ ತಲುಪಿಸುವ ಮೂಲಕ ಮಹಾತ್ಮಾ ಗಾಂಧೀಜಿ ರವರ ಗ್ರಾಮ ಸ್ವರಾಜ್ ಕನಸು ನನಸು ಮಾಡುವಲ್ಲಿ ಗ್ರಾಮಸ್ಥರ ಸಹಕಾರ ಅಗತ್ಯ ಈ ನಿಟ್ಟಿನಲ್ಲಿ ಆರೋಗ್ಯಕರ ಚರ್ಚೆ ನಡೆದಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಗ್ರಾ. ಪಂ ಅಭಿವೃದ್ಧಿ ಅಧಿಕಾರಿ ಗೀತಾ ಬಿ, ಕಾರ್ಯದರ್ಶಿ ರಾಮ ನಾಯ್ಕ ಸಭೆಯಲ್ಲಿ ಗ್ರಾ. ಪಂ  ನಿಕಟಪೂರ್ವ ಸದಸ್ಯರಾದ  ರವಿರಾಜ ರೖೆ ಸಜಂಕಾಡಿ, ಸಂತೋಷ ಆಳ್ವ ಗಿರಿಮನೆ, ಲಿಂಗಪ್ಪ ಗೌಡ ಮೋಡಿಕೆ  ಸಾಮಾಜಿಕ ಲೆಕ್ಕ ಪರಿಶೋಧನಾ ಸದಸ್ಯರಾದ ಚಂಚಲ ಹಾಗೂ ಹೇಮಲತಾ  ಮತ್ತು  ಉದ್ಯೋಗ ಖಾತರಿ ಫಲಾನುಭವಿಗಳು ಹಾಗೂ  ಗ್ರಾಮಸ್ಥರು ಭಾಗವಹಿಸಿದ್ದರು. ಗ್ರಾ. ಪಂ ಪಿಡಿಓ ಗೀತಾ ಬಿ ಸ್ವಾಗತಿಸಿದರು. ಕಾರ್ಯದರ್ಶಿ ರಾಮ ನಾಯ್ಕ ವಂದಿಸಿದರು  ಸಿಬ್ಬಂದಿಗಳು ಸಹಕರಿಸಿದರು.

 ನಮ್ಮ ಹೊಲ ನಮ್ಮ ರಸ್ತೆ ಅಭಿವೃದ್ಧಿ,, ಅಡಿಕೆ ಎಡೆ ಸಸಿ ನಾಟಿ ಮತ್ತು ವೖೆಯಕ್ತಿಕ ಬಾವಿ ರಚನೆ ಕಾಮಗಾರಿಗಳನ್ನು ಯೋಜನೆಯಲ್ಲಿ ಸೇರಿಸಿಕೊಳ್ಳುವ ಬಗ್ಗೆ ನಿರ್ಣಯಿಸಿ ಸರಕಾರಕ್ಕೆ ಪತ್ರ ಬರೆಯಲು ಗ್ರಾಮಸ್ಥರು ಒತ್ತಾಯಿದರು. ಈ ಬಗ್ಗೆ  ಸಾಮಾಜಿಕ ಲೆಕ್ಕ ಪರಿಶೋಧನಾ ವ್ಯವಸ್ಥಾಪಕಿ ಜಯಲಕ್ಷ್ಮೀ .ತಮ್ಮ ಸಲಹೆ ಸೂಚನೆಗಳನ್ನು ಪರಿಗಣಿಸಲಾಗುವುದು ಮತ್ತು ಈ ಬಗ್ಗೆ ನಿರ್ಣಯ ಮಾಡಿ ಸರಕಾರಕ್ಕೆ ಕಳಿಸಲಾಗುವುದು ಎಂದು ಹೇಳಿದರು.

LEAVE A REPLY

Please enter your comment!
Please enter your name here