







ಅಧ್ಯಕ್ಷ: ಜನಾರ್ಧನ ದುರ್ಗ, ಪ್ರ.ಕಾರ್ಯದರ್ಶಿ: ಕೃಷ್ಣಮೂರ್ತಿ ಪಿ., ಕೋಶಾಧಿಕಾರಿ: ಸುಜಯ ಎ.ಎಸ್.


ಪುತ್ತೂರು: ಕರ್ನಾಟಕ ರಾಜ್ಯ (6-8) ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘ ಬೆಂಗಳೂರು ಇದರ ಪುತ್ತೂರು ತಾಲೂಕು ಘಟಕದ 2026-31ರ ಅವಧಿಗೆ ಅಧ್ಯಕ್ಷರಾಗಿ ಹಾರಾಡಿ ಸ.ಮಾ.ಉ.ಹಿ.ಪ್ರಾ.ಶಾಲೆಯ ಜಿಪಿಟಿ ಶಿಕ್ಷಕ ಜನಾರ್ಧನ ದುರ್ಗ, ಪ್ರಧಾನ ಕಾರ್ಯದರ್ಶಿಯಾಗಿ ಹಿರೆಬಂಡಾಡಿ ಸ.ಉ.ಪ್ರಾ.ಶಾಲೆಯ ಕೃಷ್ಣಮೂರ್ತಿ ಪಿ. ಮತ್ತು ಕೋಶಾಧಿಕಾರಿಯಾಗಿ ಉಪ್ಪಿನಂಗಡಿ ಸ.ಮಾ.ಉ.ಹಿ.ಪ್ರಾ.ಶಾಲೆಯ ಸುಜಯ ಎ. ಎಸ್. ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸೆ.೨೮ರಂದು ಪುತ್ತೂರಿನಲ್ಲಿ ನಡೆದ ನೂತನ ನಿರ್ದೇಶಕರ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.



ನಿರ್ದೇಶಕರ ಆಯ್ಕೆ:
ಕರ್ನಾಟಕ ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ಮಾನ್ಯತೆ ಪಡೆದ ಪ್ರಾಥಮಿಕ ವಿಭಾಗದ ಎರಡು ಸಂಘಗಳ ಪೈಕಿ ರಾಜ್ಯದ ಎರಡನೇ ಅತಿ ದೊಡ್ಡ ಸಂಘವಾಗಿರುವ ರಾಜ್ಯ (6-8) ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ ಪುತ್ತೂರು ಘಟಕದ ನಿರ್ದೇಶಕರ ಸ್ಥಾನಗಳಿಗೆ ರಾಜ್ಯ ಚುನಾವಣಾ ಮಾರ್ಗಸೂಚಿ ಹಾಗೂ ಸಂಘದ ಬೈಲಾ ನಿಯಮಾವಳಿಗಳಂತೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು. ಪುತ್ತೂರು ತಾಲೂಕಿನಲ್ಲಿ 100ಕ್ಕೂ ಹೆಚ್ಚು ಜಿಪಿಟಿ ಶಿಕ್ಷಕ ಮತದಾರರಿದ್ದ ಕಾರಣ 11 ಮಂದಿ ನಿರ್ದೇಶಕರ ಸ್ಥಾನಗಳು ಲಭ್ಯವಾಗಿತ್ತು. 11 ಸ್ಥಾನಗಳಿಗೆ 10 ಮಂದಿ ನಾಮಪತ್ರ ಸಲ್ಲಿಸಿದ್ದು 10 ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆಯಿತು.
ಹಾರಾಡಿ ಸ.ಮಾ.ಉ.ಹಿ.ಪ್ರಾ. ಶಾಲೆಯ ಜನಾರ್ಧನ ದುರ್ಗ, ಹಿರೆಬಂಡಾಡಿ ಸ.ಉ.ಹಿ.ಪ್ರಾ. ಶಾಲೆಯ ಕೃಷ್ಣಮೂರ್ತಿ ಪಿ., ಉಪ್ಪಿನಂಗಡಿ ಸ.ಮಾ.ಉ.ಹಿ.ಪ್ರಾ. ಶಾಲೆಯ ಸುಜಯ ಎ.ಎಸ್., ಹಾರಾಡಿ ಸ.ಮಾ.ಉ.ಹಿ.ಪ್ರಾ. ಶಾಲೆಯ ಅಬ್ದುಲ್ ಲತೀಫ್ ಸರಳಿಕಟ್ಟೆ, ಮಾಡನ್ನೂರು ಸ.ಉ.ಹಿ.ಪ್ರಾ. ಶಾಲೆಯ ಸಂತೋಷ್ ಮಿಸ್ಕಿತ್, ಬಲ್ನಾಡು ಸ.ಉ.ಹಿ.ಪ್ರಾ. ಶಾಲೆಯ ಮಂಜಪ್ಪ ಹೆಚ್.ಆರ್., ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಆದಿತ್ಯ ಹೆಬ್ಬಾರ್ ಎ., ಸಜಂಕಾಡಿ ಸ.ಹಿ.ಪ್ರಾ. ಶಾಲೆಯ ಗಣೇಶ್ ನಾಯಕ್ ಪಿ., ಬೆಳ್ಳಿಪ್ಪಾಡಿ ಸ.ಉ.ಹಿ.ಪ್ರಾ. ಶಾಲೆಯ ಮಲ್ಲಿಕಾರ್ಜುನ ಹಡಗಲಿ, ಮೇನಾಲ ಸ.ಉ.ಹಿ.ಪ್ರಾ. ಶಾಲೆಯ ಆಶಾಲತಾ ಎ., ನಿದೇಶಕರುಗಳಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.
ಅಧ್ಯಕ್ಷ, ಕಾರ್ಯದರ್ಶಿ ಸ್ಥಾನಗಳಿಗೂ ಅವಿರೋಧ ಆಯ್ಕೆ:
ಸೆ.28ರಂದು ತಾಲೂಕು ಘಟಕದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಹಾಗೂ ಕೋಶಾಧಿಕಾರಿ ಹುದ್ದೆಗಳಿಗೆ ತಲಾ ಮೂರು ಮಂದಿ ಮಾತ್ರ ನಾಮಪತ್ರ ಸಲ್ಲಿಸಿದ್ದ ಕಾರಣ ಈ ಹುದ್ದೆಗಳಿಗೂ ಅವಿರೋಧವಾಗಿ ಆಯ್ಕೆ ನಡೆದಿದೆ. ನಿವೃತ್ತ ಉಪ ತಹಶೀಲ್ದಾರರಾದ ಸೂರಪ್ಪ ಗೌಡ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.










