







ಪುತ್ತೂರು: ಸುದಾನ ವಸತಿ ಶಾಲೆಯಲ್ಲಿ ಅ.2ರಂದು ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಆಚರಿಸಲಾಯಿತು.



ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ಮತ್ತು ಶಿಕ್ಷಕರು ಉಭಯ ನಾಯಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ವಿದ್ಯಾರ್ಥಿ ಅಪ್ರಮೇಯ ಸಂಸ್ಮರಣೆ ನಡೆಸಿಕೊಟ್ಟರು.



ವಿದ್ಯಾರ್ಥಿಗಳಾದ ಶ್ರೀಈಶ ಎನ್. ಹೆಗ್ಡೆ (ಭಗವದ್ಗೀತೆ), ಏರೋನ್ ಇಮಾ ನ್ಯುವಲ್ (ಬೈಬಲ್), ಆರಾಧ್ಯ ಬೌದ್ (ತ್ರಿಪಿಟಕ), ಆರಾಧ್ಯ ಜೈನ್ (ಆಗಮ), ಶೇಕ್ ಇಮ್ರಾನ್ (ಕುರಾನ್) ಸರ್ವಧರ್ಮ ಪ್ರಾರ್ಥನೆ ನಡೆಸಿಕೊಟ್ಟರು. ಗಾಂಧಿ ಮತ್ತು ಶಾಸ್ತ್ರೀಜಿ ಅವರ ವ್ಯಕ್ತಿತ್ವ, ಸೇವಾ ಮನೋಭಾವವನ್ನು ಜೀವನದ ಆದರ್ಶವಾಗಿಸಿಕೊಳ್ಳುವಂತೆ ಮುಖ್ಯ ಶಿಕ್ಷಕಿ ಕರೆ ನೀಡಿದರು. ಸಹಶಿಕ್ಷಕಿ ಸವಿತಾ ಕಾರ್ಯಕ್ರಮ ನಿರ್ವಹಿಸಿದರು. ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಆಯೋಜಿಸಿತ್ತು.










