






ಪುತ್ತೂರು:ಕರ್ನಾಟಕ ಮಾಧ್ಯಮ ಅಕಾಡೆಮಿ ಆಶ್ರಯದಲ್ಲಿ ಸೆ.28 ರಿಂದ 30 ರ ವರೆಗೆ ಮೈಸೂರಿನ ಇನ್ಫೋಸಿಸ್ ಸಂಸ್ಥೆಯ ಆವರಣದಲ್ಲಿ ರಾಜ್ಯದ ಮಹಿಳಾ ಪತ್ರಕರ್ತೆಯರಿಗಾಗಿ ನಡೆದ ತರಬೇತಿ ಶಿಬಿರದಲ್ಲಿ , ಲಂಚ ಭ್ರಷ್ಟಾಚಾರದ ವಿರುದ್ಧ ಸುದ್ದಿ ಬಿಡುಗಡೆ ಸಂಸ್ಥೆ ನಡೆಸುತ್ತಿರುವ ಜನಜಾಗೃತಿ ಆಂದೋಲನದ ಫಲಕವನ್ನು ನೀಡಿ ಜನಜಾಗೃತಿ ಮಾಡಲಾಯಿತು.


ಸುದ್ದಿಯ ಪತ್ರಕರ್ತೆಯರಾದ ಜಯಶ್ರೀ ಕೊಯಿಂಗೋಡಿ ಮತ್ತು ಪ್ರಜ್ಞಾ ಎಸ್.ನಾರಾಯಣ್ ಅಚ್ರಪ್ಪಾಡಿಯವರು ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನಂ ಹಾಗೂ ಸದಸ್ಯೆಯರಾದ ಡಾ.ಎನ್.ಮಮತಾ ಮತ್ತು ರಶ್ಮಿ , ಅಕಾಡೆಮಿಯ ಅಧಿಕಾರಿ ಮುನಿರಾಜು, ಶಿಬಿರದಲ್ಲಿ ಭಾಗವಹಿಸಿದ್ದ ಪತ್ರಕರ್ತೆಯರಿಗೆ ಭ್ರಷ್ಟಾಚಾರ ವಿರೋಧಿ ಫಲಕ ನೀಡಿದರು.













