








ಪುತ್ತೂರು: ಸವಣೂರು-ಪುತ್ತೂರು ಮಾರ್ಗದಲ್ಲಿ ಬೆಳಿಗ್ಗೆ 8ರಿಂದ 9 ಗಂಟೆ ಅವಧಿಯಲ್ಲಿ ಹೊಸ ಬಸ್ ವ್ಯವಸ್ಥೆ ಕಲ್ಪಿಸುವಂತೆ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಮನವಿ ಸಲ್ಲಿಸಲಾಗಿದೆ.



ಪರಣೆ ಮತ್ತು ಸವಣೂರು ಭಾಗದ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಶಾಲೆ, ಕಾಲೇಜು, ಉದ್ಯೋಗ ನಿಮಿತ್ತ ಬೆಳಿಗ್ಗೆ ಪುತ್ತೂರಿಗೆ ಪ್ರಯಾಣಿಸುತ್ತಾರೆ. ಆದರೆ ಈ ಮಾರ್ಗದಲ್ಲಿ ಬೆಳಿಗ್ಗೆ ಬಸ್ಗಳ ಸಂಖ್ಯೆ ವಿರಳ. ಕಾಣಿಯೂರು ಕಡೆಯಿಂದ ಬರುವ ಬಸ್ಗಳು ಈಗಾಗಲೇ ತುಂಬಿ ಬರುವುದರಿಂದ ಸವಣೂರು ನಿಲ್ದಾಣದಲ್ಲಿ ನಿಲ್ಲಿಸದೆ ಹೋಗುತ್ತಿವೆ. ನಿಲ್ಲಿಸಿದರೂ ಫುಟ್ಬೋರ್ಡ್ನಲ್ಲಿ ನೇತಾಡಿಕೊಂಡು ಹೋಗುವ ಅಪಾಯಕಾರಿ ಪರಿಸ್ಥಿತಿ ಇದೆ. ಇದರಿಂದ ವಿದ್ಯಾರ್ಥಿಗಳು, ನೌಕರರು ಸಮಯಕ್ಕೆ ಸರಿಯಾಗಿ ತಲುಪಲು ಆಗುತ್ತಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಶಾಸರನ್ನು ಬೇಟಿಯಾದ ನಿಯೋಗದಲ್ಲಿ ಸಾಮಾಜಿಕ ಮುಂದಾಳುಗಳಾದ ಉಮೇಶ್ ಬೇರಿಕೆ ಕುಮಾರಮಂಗಲ, ಬಾಲಚಂದ್ರ ಕನ್ನಡಕುಮೇರು, ರಾಮಕೃಷ್ಣ ಪ್ರಭು ಸವಣೂರು, ರಾಮಚಂದ್ರ ಕುಮಾರಮಂಗಲ ಹಾಗೂ ವಿನಯ ಸುವರ್ಣ ಉಪಸ್ಥಿತರಿದ್ದರು.
ಮನವಿ ಸ್ವೀಕರಿಸಿದ ಶಾಸಕ ಅಶೋಕ್ ಕುಮಾರ್ ರೈ ಅವರು, ಈಗಾಗಲೇ ಬಸ್ಗಳ ಕೊರತೆ ಇದ್ದು, 15 ದಿನದೊಳಗೆ ಹೊಸ ಬಸ್ಗಳು ಬರಲಿವೆ. ಆ ಬಳಿಕ ಸವಣೂರು-ಪುತ್ತೂರು ಮಾರ್ಗದಲ್ಲಿ ಹೊಸ ಬಸ್ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ.










