







ಪುತ್ತೂರು:ಪುತ್ತೂರು ತಾಲೂಕಿನ ಕೃಷಿ ಉದ್ಯೋಗ ಸಖಿಯರ ಗೌರವ ಧನ ಕಳೆದ 18 ತಿಂಗಳಿನಿಂದ ಪಾವತಿಯಾಗದೇ ಇದ್ದು ಈ ಬಗ್ಗೆ ಕೃಷಿ ಉದ್ಯೋಗ ಸಖಿಯ ಕಾರ್ಯಕರ್ತರು ಶಾಸಕ ಅಶೋಕ್ ರೈ ಅವರಿಗೆ ದೂರು ನೀಡಿದ್ದು ಈ ಬಗ್ಗೆ ಅಧಿಕಾರಿಯ ಜಿತೆ ಮಾತುಕತೆ ನಡೆಸಿದ ಶಾಸಕರು 24 ಗಂಟೆಯೊಳಗೆ ವೇತನ ಪಾವತಿಸುವಂತೆ ಸೂಚನೆಯನ್ನು ನೀಡಿದ್ದಾರೆ.


ಪುತ್ತೂರು ತಾಲೂಕಿನಲ್ಲಿ ಸುಮಾರು 17 ಕೃಷಿ ಉದ್ಯೋಗ ಸಖಿಯರಿದ್ದು ಅವರು ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಶಾಖೆಯಡಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರಿಗೆ ನೀಡಬೇಕಾದ ಗೌರವ ಧನವನ್ನು ಸಂಬಂಧಿಸಿದ ಇಲಾಖೆಯಿಂದ ಬಿಡುಗಡೆಯಾಗಿರಲಿಲ್ಲ. ಕಳೆದ 18 ತಿಂಗಳಿಂದ ಗೌರವಧನ ಪಾವತಿಯಾಗದೇ ಇದ್ದ ಕಾರಣ ಕೆಲವು ತಿಂಗಳ ಹಿಂದೆ ತಾವು ಮಾಡುತ್ತಿದ್ದ ಸೇವೆಯನ್ನು ಸ್ಥಗಿತೊಳಿಸುವುದಾಗಿ ತಿಳಿಸಿದ್ದರು. ಕೆಲಸ ಸ್ಥಗಿತಗೊಂಡ ಬಳಿಕವೂ ವೇತನ ಪಾವತಿಯಾಗದೇ ಇರುವ ಬಗ್ಗೆ ಅ.5ರಂದು ಶಾಸಕ ಅಶೋಕ್ ರೈ ಅವರನ್ನು ಭೇಟಿಯಾಗಿ ವಿಚಾರವನ್ನು ಗಮನಸೆಳೆದಿದ್ದರು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಯ ಜೊತೆ ಮಾತುಕತೆ ನಡೆಸಿದ ಶಾಸಕರು ೨೪ ಗಂಟೆಯೊಳಗೆ ಬಾಕಿ ಇರುವ ಗೌರವ ಧನವನ್ನು ಪಾವತಿಮಾಡುವಂತೆ ಸೂಚನೆಯನ್ನು ನೀಡಿದ್ದಾರೆ.



ನಮ್ಮ ಸಂಕಷ್ಟವನ್ನು ನಾವು ಶಾಸಕರ ಬಳಿ ಹೇಳಿಕೊಂಡೆವು. ಕಳೆದ 18 ತಿಂಗಳಿಂದ ನಮಗೆ ಸಿಗಬೇಕಾದ ಗೌರವ ಧನ ಸಿಗಲಿಲ್ಲ. ನಾಲ್ಕು ತಿಂಗಳ ಹಿಂದೆ ಸಂಬಂಧಿಸಿದವರಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಶಾಸಕರು ನಮ್ಮ ಮನವಿಗೆ ಸ್ಪಂದಿಸಿ ತಕ್ಷಣ ಗೌರವ ಧನ ಪಾವತಿ ಮಾಡುವಂತೆ ಸೂಚನೆ ನೀಡಿದ್ದಾರೆ. ನಾವು ಒಟ್ಟು 17 ಮಂದಿ ಕೃಷಿ ಉದ್ಯೋಗ ಸಖಿಯರಿದ್ದು ನಮ್ಮ ಬಾಕಿ ಗೌರವ ಧನ ಪಾವತಿಯಾಗುತ್ತಿರುವುದು ಸಂತಷ ತಂದಿದೆ. ಶಾಸಕರಿಗೆ ಧನ್ಯವಾದಗಳು
ಭಾರತಿ, ಕೃಷಿ ಉದ್ಯೋಗ ಸಖಿ










