







ಪುತ್ತೂರು:ಮುಕ್ರಂಪಾಡಿ ಮಸ್ಜಿದುಲ್ ಜಾಮಿಅ ಅಬೂಬಕ್ಕರ್ ಸಿದ್ಧೀಕ್ ಮಸೀದಿಯ ನೂತನ ಅಧ್ಯಕ್ಷರಾಗಿ ರಫೀಕ್ ಎಂ.ಕೆರವರು ಆಯ್ಕೆಯಾಗಿದ್ದಾರೆ.


ಸವಣೂರು ಗ್ರಾಮದ ಮಾಂತೂರು ದಿ.ಅಬ್ದುಲ್ ಖಾದರ್ ಹಾಗ ದಿ.ಹಾಜಿರಮ್ಮ ದಂಪತಿ ಪುತ್ರನಾಗಿ ಜನಿಸಿದ ರಫೀಕ್ ಎಂ.ಕೆರವರು ಓರ್ವ ಜನಾನುರಾಗಿಯಾಗಿದ್ದು, ಹತ್ತಾರು ಸಂಘಸಂಸ್ಥೆಗಳಲ್ಲಿ ಜೊತೆಗೆ ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ರಫೀಕ್ ಎಂ.ಕೆರವರು ಮುಕ್ರಂಪಾಡಿ ಎಂಬಲ್ಲಿ ಪತ್ನಿ ಫೌಝಿಯಾ, ಪುತ್ರಿ ರಿಝಾ ಫಾತಿಮ ಎಂ.ಕೆ, ಪುತ್ರ ಮೊಹಮ್ಮದ್ ರಬೀದ್ ಎಂ.ಕೆರವರೊಂದಿಗೆ ವಾಸ್ತವ್ಯ ಹೊಂದಿದ್ದಾರೆ.













